ಪ್ರೀತಿ, ಪ್ರೇಮ ಎನ್ನುವುದು ತಾತ್ಕಾಲಿಕವಾಗಿರಬಾರದು. ಅದರಲ್ಲಿಯೂ ದಾಂಪತ್ಯ ಜೀವನದಲ್ಲಿ ಈ ಭಾವಕ್ಕೆ ವಿಶೇಷ ಸ್ಥಾನವಿರಬೇಕು. ಇರೋ ಪ್ರೀತಿ ಶಾಶ್ವತವಾಗಿ ಉಳಿಯಬೇಕೆಂದರೆ ಕೆಲವು ಬದ್ಧತೆ ಇರಬೇಕು. ಹೇಗೆ ಅದನ್ನು ಮ್ಯಾನೇಜ್ ಮಾಡುವುದು?
ಮಾಡಿದ ಪ್ರೀತಿಯನ್ನು ಕಡೇವರೆಗೂ ಉಳಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಈ ಚಾಲೆಂಜಿಂಗ್ ಕೆಲಸವನ್ನು ಪ್ರೀತಿಯಿಂದಲೇ ಸ್ವೀಕರಿಸಿದರೆ ಜೀವನ ಅದ್ಭುತ. ಪ್ರೀತಿ ಹುಟ್ಟಿದಾಗ ಜೀವನವೇ ಬದಲಾಗುತ್ತದೆ. ತಮ್ಮ ಲೈಫ್ ಸ್ಟೈಲ್ - ವ್ಯಕ್ತಿತ್ವ ಬದಲಾವಣೆಯಲ್ಲಿಯೂ ಈ ಪ್ರೀತಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ದಿನ ಕಳೆದಂತೆ ಆ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಕಷ್ಟ.
ಅಹಂ ಎಂಬ ಅಡ್ಡಗೋಡೆಯಿಂದಲೇ ಪ್ರೀತಿ ತನ್ನ ನವಿರನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ಜೀವನದಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು.
- ಪ್ರತಿ ಬಾರಿ ಒಬ್ಬರನ್ನೊಬ್ಬರು ಟೀಕಿಸಿಕೊಳ್ಳಬೇಡಿ. ಜಗಳವಾಡಿದಾಗ ಮಾತಿನ ಮೇಲೆ ಹಿಡಿತವಿರಲಿ. ನೆಗೆಟಿವ್ ಆಗಿ ಏನೂ ಮಾತನಾಡಬೇಡಿ. ಇದರಿಂದ ಸಂಬಂಧ ಶಾಶ್ವತವಾಗಿ ಕಳೆದುಕೊಳ್ಳಬಹುದು.
- ಪ್ರೀತಿ ಎಷ್ಟೇ ಹಳೆಯದಾಗಿರಲಿ, ಇಬ್ಬರೂ ಜೊತೆಯಾಗಿ ಸಮಯ ಕಳೆಯುವುದು ಮುಖ್ಯ. ಅವರ ಬಗ್ಗೆ ಕೇರ್ ಯಾವಾಗಲೂ ತೆಗೆದುಕೊಳ್ಳಲೇಬೇಕು. ಅವರ ಬಗ್ಗೆ ಗಮನಿಸದೇ ಇದ್ದರೆ ಸಂಬಂಧದಲ್ಲಿ ಬಿರುಕು ಪಕ್ಕಾ. ಅದಕ್ಕೆ ಸಂಗಾತಿಗಾಗಿಯೇ ಹೆಚ್ಚು ಸಮಯ ಮೀಸಲಿಡಿ.
- ರಿಲೇಷನ್ ಶಿಪ್‌ನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಇನ್ನೊಬ್ಬರು ಹೇಳೋದನ್ನು ಕೇಳಲೂ ಇಷ್ಟವೂ ಇರಲ್ಲ, ತಾಳ್ಮೆಯೂ ಕಡಿಮೆ. ಇಂಥ ಗುಣ ಬಿಡಬೇಕು. ಬದಲಾಗಿ ಏನೇ ಸಮಸ್ಯೆ ಬಂದರೂ, ಇಬ್ಬರೂ ಕುಳಿತು ಮಾತನಾಡಿಕೊಳ್ಳಬೇಕು. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಕೇಳಬೇಕು. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಜೊತೆಗೆ ಹಂಚಿಕೊಂಡಾಗ ಮಾತ್ರ ಸಂಬಂಧ ಸುಮಧುರವಾಗಿರುತ್ತದೆ.
- ನಿಮ್ಮ ಸಂಗಾತಿಯನ್ನು ಮಾಜಿ ಪ್ರೇಮಿಯೊಂದಿಗೆ ಹೋಲಿಸಬೇಡಿ. ಇದು ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ. ಸಂಬಂಧದಲ್ಲಿ ಇದು ಒಳ್ಳೆಯದಲ್ಲ.
- ಕೆಲವರು ಪ್ರೀತಿಸಲು ಆರಂಭಿಸಿದ ಮೇಲೆ ಜಗತ್ತನ್ನೇ ಮರೆಯುತ್ತಾರೆ. ಫ್ರೆಂಡ್ಸ್, ಫ್ಯಾಮಿಲಿ ಎಲ್ಲ ನಮ್ಮ ಜೊತೆ ಇದ್ದಾರೆಂಬುವುದು ನೆನಪಿನಲ್ಲಿ ಇರೋಲ್ಲ. ಒಬ್ಬರಿಗೊಬ್ಬರು ಭೇಟಿಯಾಗೋದನ್ನು, ಅವರಿಗಾಗಿಯೇ ಸಮಯ ಕೊಡೋದನ್ನು ಮಾತ್ರ ಮರೆಯೋದಿಲ್ಲ. ಹೀಗೆ ಮಾಡಿಕೊಂಡರೆ ಸಂಬಂಧದಲ್ಲಿ ಬಿರುಕು ಬಿಟ್ಟಾಗೆ ಜತೆಯಲ್ಲಿ ಯಾರೂ ಇರೋಲ್ಲ. ಬದಲಾಗಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 29, 2019, 4:23 PM IST