* ಎಕ್ರೈನ್ ಮತ್ತು ಅಪೊಕ್ರೈನ್ ಎಂಬ ಬೆವರು ಗ್ರಂಥಿಗಳು ಮನುಷ್ಯನ ದೇಹದಲ್ಲಿರುತ್ತವೆ. ಎಕ್ರೈನ್ ಗ್ರಂಥಿಗಳು ನೀರು ರೂಪದ ಬೆವರು ಉತ್ಪಾದಿಸುತ್ತದೆ. ದೇಹದ ಎಲ್ಲ  ಭಾಗದಲ್ಲದೇ ಮುಖ, ಕೈ ಮತ್ತು ಪಾದದಲ್ಲಿ ಹೆಚ್ಚು ಬೆವರುವಂತೆ ಈ ಗ್ರಂಥಿ ಮಾಡುತ್ತದೆ. ದೇಹದಲ್ಲಿ ಕೂದಲಿರುವ ಭಾಗದಲ್ಲಿ ಬೆವರಲು ಅಪೊಕ್ರೈನ್ ಗ್ರಂಥಿ ಕಾರಣ. 

* ಬೆವರಿನ ಮೂಲಕ ರಕ್ತದ ವಿಶಕಾರಿ ಅಂಶಗಳು ಹೊರ ಹೋಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳಿತು. 

* ದೇಹದ ಕಲ್ಮಶಗಳು, ಧೂಳು, ಪರಾಗ, ಬ್ಯಾಕ್ಟೀರಿಯಾಗಳು ಬೆವರಿನ ಮೂಲಕ ಹೊರ ಹೋಗುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. 

* ಚರ್ಮದ ಮೇಲೆ ಗಾಯವಾಗಿದ್ದರೆ, ವಾಸಿಯಾಗಲು ಬೆವರು ಸಹಕರಿಸಿ, ಹೊಸ ಚರ್ಮ ಬೆಳೆಯಲು ಅನುವು ಮಾಡಿಕೊಡುತ್ತದೆ.

* ಬೆವರು ಗ್ರಂಥಿಗಳು ಕ್ರಿಯಾಶೀಲವಾಗಿ, ವಿಪರೀತ ಬೆವರುವುದನ್ನು ಹೈಡ್ರೋಸಿನ್ ಎನ್ನುತ್ತಾರೆ. 

* ಸುಖಾ ಸುಮ್ಮನೆ ಕೂತಾಗಲೂ ಹೆಚ್ಚೆಚ್ಚು ಬೆವರಿದರೆ, ಅದು ಥೈರಾಯಿಡ್. ಮಧುಮೇಹ ಅಥವಾ ಹೃದ್ರೋಗದ ಲಕ್ಷಣವಾಗಿರುತ್ತದೆ.