ದಪ್ಪಗೆ, ಕಾಡಿನಂತೆ  ಹಬ್ಬಿರುವ ಹುಬ್ಬುಗಳು ಯುವಕರನ್ನು ಆಕರ್ಷಿಸುವಷ್ಟು ತೆಳುವಾಗಿ ಶೇಪ್ ನೀಡಿದ  ಐಬ್ರೋಗಳು ಸೆಳೆಯುವುದಿಲ್ಲವಂತೆ! ಮಿಚಿಗನ್‌ನ ಓಕ್‌ಲ್ಯಾಂಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ. 

ಸುಮಾರು ಸಾವಿರ ಯುವಕರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಕಂಬಳಿ ಹುಳದಂತ ಹುಬ್ಬಿನ ಹಾಗೂ ತೆಳ್ಳನೆಯ ಹುಬ್ಬಿನ ಯುವತಿಯರ ಫೋಟೋಗಳನ್ನು ನೀಡಲಾಗಿತ್ತಂತೆ. ಬಹುತೇಕ ಯುವಕರು ದಪ್ಪ ಹುಬ್ಬಿನ ಹುಡುಗಿಯರು ಹೆಚ್ಚು ಆಕರ್ಷಕವೆನಿಸುತ್ತಾರೆ ಎಂದಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಳನ್ನು ನೋಡಿದ ಬಳಿಕ ಕನ್ನಡದ ಕುಮಾರ ಕಂಠೀರವರೂ ಇದೇ ಮಾತನ್ನು ಹೇಳುತ್ತಾರೆ. 

ಮುಂಚೆ ದಪ್ಪನೆಯ ಐಬ್ರೋ ಇದ್ದರೆ ಪುರುಷರಂತೆ ಎಂದು ಭಾವಿಸಲಾಗುತ್ತಿತ್ತು. ಈಗ ಟ್ರೆಂಡ್ ಬದಲಾಗಿದೆ. ಈ ಆಯ್ಕೆಯು ಸಧ್ಯದ ಫ್ಯಾಷನ್ ಟ್ರೆಂಡ್‌ ಅನ್ನು ಪ್ರತಿಫಲಿಸುತ್ತಿದೆ, ಅಲ್ಲದೆ ಲಾಂಗ್ ಟರ್ಮ್ ರಿಲೇಶನ್‌ಶಿಪ್ ಬಯಸುವ ಯುವಕರು ದಪ್ಪ ಹುಬ್ಬಿನ ಯುವತಿಯರನ್ನು ಬಯಸುತ್ತಾರೆ ಎನ್ನುತ್ತಾರೆ ಸಂಶೋಧಕಿ ಡಾ. ಲೀಸಾ ವೆಲ್ಲಿಂಗ್. 

Fashionಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಆ್ಯಂಡ್ ಬೋಲ್ಡ್ ಐಬ್ರೋಸ್‌ ಟ್ರೆಂಡ್ ಆಗುತ್ತಿದ್ದಂತೆಯೇ ಬ್ಯೂಟಿ ಇಂಡಸ್ಟ್ರಿ ಹೊಸ ಶ್ಯಾಡೋಗಳು, ದಪ್ಪನೆಯ ಪೆನ್ಸಿಲ್, ಜೆಲ್‌ಗಳ ತಯಾರಿಕೆಯಲ್ಲಿ ನಿರತವಾಗಿದೆ.