ಸ್ಟ್ರೆಸ್’ನಿಂದ ಬಳಲುತ್ತಿದ್ದೀರಾ? ರಿಲಾಕ್ಸ್ ಆಗಲು ಹೀಗೆ ಮಾಡಿ

Meditation is Solution for All Problems
Highlights

ಕೇವಲ ಸ್ಟ್ರೆಸ್ ಹೆಚ್ಚಾದಾಗ ಮಾತ್ರ ಧ್ಯಾನ ಮಾಡ್ಬೇಕು ಅನ್ನೋದು ಇದರರ್ಥ ಅಲ್ಲ. ನಿತ್ಯವೂ ಮೆಡಿಟೇಶನ್ ಮಾಡ್ತಿದ್ರೆ  ಸ್ಟ್ರೆಸ್ ಹತ್ತಿರವೂ ಸುಳಿಯಲ್ಲ. ಒತ್ತಡದಿಂದ ಚಿಕ್ಕ ಪುಟ್ಟ ಶಾರೀರಿಕ
ಸಮಸ್ಯೆಯಿಂದ ಹಿಡಿದು ಸ್ಟ್ರೋಕ್, ಹಾರ್ಟ್ ಅಟ್ಯಾಕ್, ಕ್ಯಾನ್ಸರ್'ನಂಥ ಅಪಾಯಕಾರಿ ತೊಂದರೆಗಳೂ ಕಾಣಿಸಿಕೊಳ್ಳಬಹುದು. ನಿತ್ಯ ಮೆಡಿಟೇಶನ್ ಮಾಡುತ್ತಿದ್ದರೆ ಒತ್ತಡದಿಂದ ಬರುವ
ಸಮಸ್ಯೆಗಳ್ಯಾವುವೂ ಬರಲ್ಲ ಅನ್ನುತ್ತೆ ಇತ್ತೀಚಿನ ಸಂಶೋಧನೆ. ಕನಿಷ್ಟ 10 ನಿಮಿಷದಿಂದ ಗರಿಷ್ಟ ಎಷ್ಟು ಹೊತ್ತಿನವರೆಗೂ ಧ್ಯಾನ  ಮಾಡಬಹುದು. ಮೆಡಿಟೇಶನ್ ಮಾಡಿದಷ್ಟೂ ಮನಸ್ಸು ಉದ್ವಿಗ್ನತೆ ಮರೆತು ಹಗುರಾಗುತ್ತ ಬರುತ್ತದೆ. 

ಯಾಕೋ ಸ್ಟ್ರೆಸ್ ಹೆಚ್ಚಾಯ್ತು, ಇದನ್ನು ನಿಭಾಯಿಸೋದು ಕಷ್ಟ ಅಂತ ಅನಿಸಿದಾಗ ಧ್ಯಾನ ಮಾಡಿ. ಮನಸ್ಸು ತಹಬಂದಿಗೆ ಬರುತ್ತದೆ.

ಕೇವಲ ಸ್ಟ್ರೆಸ್ ಹೆಚ್ಚಾದಾಗ ಮಾತ್ರ ಧ್ಯಾನ ಮಾಡ್ಬೇಕು ಅನ್ನೋದು ಇದರರ್ಥ ಅಲ್ಲ. ನಿತ್ಯವೂ ಮೆಡಿಟೇಶನ್ ಮಾಡ್ತಿದ್ರೆ  ಸ್ಟ್ರೆಸ್ ಹತ್ತಿರವೂ ಸುಳಿಯಲ್ಲ. ಒತ್ತಡದಿಂದ ಚಿಕ್ಕ ಪುಟ್ಟ ಶಾರೀರಿಕ ಸಮಸ್ಯೆಯಿಂದ ಹಿಡಿದು ಸ್ಟ್ರೋಕ್, ಹಾರ್ಟ್ ಅಟ್ಯಾಕ್, ಕ್ಯಾನ್ಸರ್'ನಂಥ ಅಪಾಯಕಾರಿ ತೊಂದರೆಗಳೂ ಕಾಣಿಸಿಕೊಳ್ಳಬಹುದು. ನಿತ್ಯ ಮೆಡಿಟೇಶನ್ ಮಾಡುತ್ತಿದ್ದರೆ ಒತ್ತಡದಿಂದ ಬರುವ  ಸಮಸ್ಯೆಗಳ್ಯಾವುವೂ ಬರಲ್ಲ ಅನ್ನುತ್ತೆ ಇತ್ತೀಚಿನ ಸಂಶೋಧನೆ. ಕನಿಷ್ಟ 10 ನಿಮಿಷದಿಂದ ಗರಿಷ್ಟ ಎಷ್ಟು ಹೊತ್ತಿನವರೆಗೂ ಧ್ಯಾನ  ಮಾಡಬಹುದು. ಮೆಡಿಟೇಶನ್ ಮಾಡಿದಷ್ಟೂ ಮನಸ್ಸು ಉದ್ವಿಗ್ನತೆ ಮರೆತು ಹಗುರಾಗುತ್ತ ಬರುತ್ತದೆ. 

ಆರಂಭಿಕ ಹಂತದ ಧ್ಯಾನದಲ್ಲಿ ಮೊದಲಿಗೆ ಕಣ್ಣುಗಳನ್ನು ಮುಚ್ಚಿ ದೀರ್ಘವಾಗಿ ಉಸಿರಾಡಬೇಕು. ಬಳಿಕ ಹೊರಗಿನ ಸದ್ದುಗಳನ್ನಷ್ಟೇ ಅಲಿಸಬೇಕು, ಆ ಬಗ್ಗೆ ಯೋಚಿಸಬಾರದು, ನಿಧಾನಕ್ಕೆ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು. ನಂತರ ಹುಬ್ಬುಗಳ ನಡುವೆ ನಮಗೆ ಪ್ರಿಯವಾದ ಸಂಕೇತವನ್ನಿಟ್ಟು ಅದರಲ್ಲೇ ಮನಸ್ಸು ನೆಡಬೇಕು. ಮೊದ ಮೊದಲು ಹೀಗೆ ಏಕಾಗ್ರತೆಯಿಂದ ಧ್ಯಾನಿಸುವುದು ಕಷ್ಟ, ಆದರೆ ನಿತ್ಯ ಅಭ್ಯಾಸ ಮಾಡಿದರೆ ಸಲೀಸಾಗಿ ಮನಸ್ಸು, ದೇಹ ಹಗುರಾಗಿ ರಿಲ್ಯಾಕ್ಸ್ ಆಗುತ್ತೆ.  
 

loader