ಕೆಮ್ಮು, ಶೀತ, ತಲೆನೋವಿನಂಥ ಸಣ್ಣಪುಟ್ಟ ರೋಗಗಳು ಮನುಷ್ಯನನ್ನು ಆಗಾಗ ಕಾಡುತ್ತಿರುತ್ತದೆ. ಸುಖಾ ಸುಮ್ಮನೆ ಪೈನ್ ಕಿಲ್ಲರ್ಸ್ ಅಥವಾ ಇತರೆ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು, ಸುಲಭವಾಗಿ ಸಿಗುವ ಕೆಲವು ಗಿಡಮೂಲಿಕೆಗಳು ಪರಿಣಾಮಕಾರಿಯಾಗಬಲ್ಲದು. ಅದೂ ಅಲ್ಲದೇ ಕೆಲವು ಗಿಡ ಮೂಲಕೆಗಳನ್ನು ಮನೆಯಲ್ಲಿಯೇ ಬೆಳೆಸಬಹುದಾಗಿದ್ದು, ಇದರ ಸುತ್ತೊಂದು ಸುತ್ತು.

ತುಳಸಿ 

ಹೆಚ್ಚು ಎತ್ತರ ಬೆಳೆಯದ ತುಳಸಿಯನ್ನು ಪವಿತ್ರವೆಂದು ಪೂಜಿಸುತ್ತಾರೆ. ಹೊಟ್ಟೆನೋವು, ಜ್ವರ, ಕೆಮ್ಮು, ನೆಗಡಿ ಮತ್ತು ಚರ್ಮ ರೋಗವನ್ನು ನಿವಾರಿಸುವಲ್ಲಿ ತುಳಸಿ ಪ್ರಮುಖ ಪಾತ್ರವಹಿಸುತ್ತದೆ. 

ಕ್ಯಾಮೊಮಿಲ್

ಮೈಗ್ರೇನ್, ಗ್ಯಾಸ್ಟ್ರಿಕ್, ಯೋನಿ ನಾಳದ ಉರಿ ಮತ್ತು ಅಲ್ಸರ್ ತೊಂದರೆಗೆ ಈ ಗಿಡ ಮೂಲಿಕೆ ಉತ್ತಮ ಪರಿಹಾರವಾಗಬಲ್ಲದು.

ಎಕಿನೇಷಿಯಾ

ಇದೊಂದು ಉತ್ತರ ಅಮೆರಿಕದ ಗಿಡ ಮೂಲಿಕೆಯಾಗಿದ್ದು, ಹಲವು ಸಣ್ಣ ಪುಟ್ಟ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಬಲ್ಲದು. ಅತ್ಯುತ್ತಮ ಆ್ಯಂಟಿಬಯೊಟಿಕ್ ಆಗಿಯೂ ಕಾರ್ಯ ನಿರ್ವಹಿಸಬಲ್ಲದು.

ಫೀವರ್ ಫ್ಯೂ 

ಇದನ್ನು ಬಾಯಿಯಲ್ಲಿ ಜಗಿಯುವುದರಿಂದ ತಲೆ ನೋವು ನಿವಾರಣೆಯಾಗುತ್ತದೆ. 

ಜಾನಿ-ಜಂಪ್-ಅಪ್

ಚರ್ಮದ ಕಾಂತಿ ಹೆಚ್ಚಿಸಲು ಈ ಮೂಲಿಕೆ ಸಹಕರಿಸುತ್ತದೆ. 

ಲ್ಯಾವೆಂಡರ್

ಅತ್ಯಂತ ಸುವಾಸನಾ ಭರಿತ ಮೂಲಿಕೆಯಾದ ಇದು ಆತಂಕ ಮತ್ತು ಒತ್ತಡ ನಿವಾರಿಸುತ್ತದೆ. 

ಲೆಮೆನ್ ಬಾಮ್

ನಿದ್ರಾಹೀನತೆ, ಆತಂಕ, ಮೊಂಡಿ ನೋವು, ಕೀಟ ಕಡಿತ ಮತ್ತು ಹೊಟ್ಟೆ ಹುಳ ನಿವಾರಣೆಗಿದು ರಾಮಬಾಣ.

ಮಾರಿಗೋಲ್ಡ್ 

ಸನ್ ಬರ್ನ್, ಮೊಡವೆ ಮತ್ತು ಅಲ್ಸರ್ ನಿವಾರಿಸುತ್ತದೆ. 

ಕೊತ್ತಂಬರಿ ಸೊಪ್ಪು

ಅಡುಗೆ ವಿಶೇಷ ಸ್ವಾದ ಹೆಚ್ಚಿಸುವ ಕೊತ್ತಂಬರಿ ಸೊಪ್ಪು, ಜೀರ್ಣಕಾರಿಯೂ ಹೌದು. 

ಪುದೀನಾ

ಗ್ಯಾಸ್ಟ್ರಿಕ್ ನಿವಾರಿಸಿ, ಜೀರ್ಣಕ್ರಿಯೆ ಹೆಚ್ಚಿಸುತ್ತದೆ.