Asianet Suvarna News Asianet Suvarna News

ಮಹಿಳೆಯ ಮದುವೆಗೆ ವಯಸ್ಸು ಮುಖ್ಯವಾ ? ವಯಸ್ಸು ಮೀರಿದ್ರೆ ಮದುವೆಯಾಗಲ್ವಾ

ಮದುವೆಯಾದವರು ಸಾಧನೆಯ ಸಾವಿರಾರು ಕನಸು ಕಂಡಿದ್ದರೂ ಕೂಡ ಮದುವೆಯಂಬ ಬಂಧನಕ್ಕೆ ಸಿಲುಕಿ ತನ್ನ ಕನಸುಗಳನ್ನು ನುಚ್ಚುನೂರು ಮಾಡಿಕೊಂಡು ತಾನಾಯಿತು, ತನ್ನ ಕುಟುಂಬದ ಏಳಿಗೆಗೆ ಶ್ರಮಿಸುತ್ತ ದಿನದೂಡುತ್ತಿರುತ್ತಾರೆ.

Married women or unmarried women

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೆಯಾದ ಸಾಧನೆ ಮಾಡುವಲ್ಲಿ ಕಾರ್ಯನಿರತರಾಗಿರುತ್ತಾರೆ. ಮೊದಲಿನ ರೀತಿ ಗಂಡ, ಮನೆ, ಮಕ್ಕಳು ಎನ್ನುವ ಸಂಕುಚಿತ ಯೋಚನೆಯನ್ನು ಬಿಟ್ಟು ನಾನು ಕೂಡ ಪುರುಷನಿಗೆ ಸರಿಸಮಾನಳು ಎನ್ನುವ ಭಾವನೆಯಿಟ್ಟುಕೊಂಡು ಪ್ರತಿಯೊಂದು ಪುರುಷನಿಗೆ ಸರಿಸಮಾನವಾದ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.

1) 30 ದಾಟಿದರೆ ಮಹಿಳೆಗೆ ಮದುವೆ ಆಗಲ್ವಾ ?

: ಸಹಜವಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಜವಾಗಿ ಮಹಿಳೆಯು ತನ್ನ ಕನಸನ್ನು ಈಡೇರಿಸಿಕೊಳ್ಳಲು ಏನಿಲ್ಲವೆಂದರೂ ಕನಿಷ್ಠ 30 ವರ್ಷದವರೆಗೂ ಸತತ ತನ್ನ ಕನಸಿನೆಡೆಗೆ ಯೋಚಿಸುತ್ತಾ ಸಾಗುತ್ತಿರುತ್ತಾಳೆ. ಆ ನಂತರ 30 ದಾಟಿದ ನಂತರ ಆಗ ಆಕೆ ಸ್ನೇಹಿತರು, ಸಂಬಂಧಿಕರು, ಫೋಷಕರು ಮದುವೆಗೆ ಒತ್ತಡ ಹೇರುತ್ತಿರುತ್ತಾರೆ. ಅವರ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಪೋಷಕರ ಮತ್ತು ಸಂಬಂಧಿಕರ ಬಲವಂತಕ್ಕೆ ಗೃಹಸ್ಥಾಶ್ರಮ ಸೇರಲು ಬಯಸುತ್ತಾಳೆ. ಆದರೆ ಆ ವೇಳೆಗಾಗಲೇ ಆಕೆಯ ಯೋಚನಾ ಲಹರಿಗಳು, ಕನಸುಗಳು, ಬಯಕೆಗಳು ಬದಲಾಗಿರುತ್ತವೆ. ಅನಿವಾರ್ಯವಾಗಿ ತನ್ನ ಸರಿ ಜೋಡಿ(ಪತಿಯನ್ನು) ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲವಾಗಬಹುದು!

2) 20ರೊಳಗೆ ಹೇಗಿರುತ್ತೆ ಜೀವನ ?

: ಸಾಮಾನ್ಯವಾಗಿ ಭಾರತದಲ್ಲಿ ಹೆಣ್ಣು ಮಕ್ಕಳ ಮದುವೆಗಳು ಶೇ.60 ರಷ್ಟು 20 ವಯಸ್ಸಿನೊಳಗೆ ಆಗಿರುತ್ತದೆ. ಹೀಗೆ ಮದುವೆಯಾದವರು ಸಾಧನೆಯ ಸಾವಿರಾರು ಕನಸು ಕಂಡಿದ್ದರೂ ಕೂಡ ಮದುವೆಯಂಬ ಬಂಧನಕ್ಕೆ ಸಿಲುಕಿ ತನ್ನ ಕನಸುಗಳನ್ನು ನುಚ್ಚುನೂರು ಮಾಡಿಕೊಂಡು ತಾನಾಯಿತು, ತನ್ನ ಕುಟುಂಬದ ಏಳಿಗೆಗೆ ಶ್ರಮಿಸುತ್ತ ದಿನದೂಡುತ್ತಿರುತ್ತಾರೆ. ಕೆಲವರು ಮಾತ್ರ ವಿವಾಹವಾದ ನಂತರ ಪಡಬಾರದ ಕಷ್ಟಪಟ್ಟರೂ ತಾವು ಕಂಡ ಕನಸು ಮುಟ್ಟಲು ನಾನಾ ರೀತಿಯ ಕಸರತ್ತು ನಡೆಸಿ ಕೊನೆಗೆ ಜಯಿಸಿರುವುದನ್ನು ನೋಡಿರುತ್ತೇವೆ.

3) ಹೆಣ್ಣಿಗೆ ಮದುವೆ ಮುಖ್ಯವಾ ?

: ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನಿರುತ್ತಾನೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಸಾಧನೆ ಮಾಡಿದ ಯಾವ ಮಹಿಳೆ ಕೂಡ ಮದುವೆಯಾಗಿಲ್ಲ. ಅವರಿಗೆ ವಿವಾಹಕ್ಕಿಂತ ತನ್ನ ಗುರಿಯೇ ಮುಖ್ಯವಾಗಿರುತ್ತದೆ. ಅಂತವರ ಸಾಲಿನಲ್ಲಿ ಮದರ್ ಥೆರೇಸಾ, ಜಯಲಲಿತಾ, ಮಮತಾ ಬ್ಯಾನರ್ಜಿ,ಮಯಾವತಿ, ಉಮಾಭಾರತಿ, ಲತಾ ಮಂಗೇಶ್ಕರ್ ಸೇರಿದಂತೆ ಇನ್ನು ಸಾವಿರಾರು ಸಾಧಕಿರನ್ನು ನಮ್ಮ ಸಮಾಜದಲ್ಲಿ ನೋಡಿದ್ದೇವೆ. ಇವರುಗಳು ಮದುವೆಯಾಗದೇ ತನ್ನದೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಸಾಧನೆಗೆ ವಯಸ್ಸು ಮುಖ್ಯವಲ್ಲ ಸಂಬಂಧವೂ ಮುಖ್ಯವಲ್ಲ ಸಾಧಿಸುವ ಛಲ,ಕನಸು, ಸತತ ಪರಿಶ್ರಮವೇ ಸಾಧನೆಗೆ ದಾರಿ.  

Follow Us:
Download App:
  • android
  • ios