ಜಿಮ್‌ನಲ್ಲಿ ಸಿಕ್ಕಿಕ್ಕೊಂಡ ಶಿಶ್ನ: ಆಮೇಲೇನಾಯ್ತು ಗೊತ್ತೆ ?

ಅದನ್ನು ಆತ ತಾನಾಗೇ ಮಾಡಿಕೊಂಡಿದ್ದೋ, ಅಚಾನಕ್ ಆಗಿ ಆಗಿದ್ದೋ ಆತನೇ ಬಲ್ಲ! ಅಷ್ಟಕ್ಕೂ ಆತ ಮಾಡಿಕೊಂಡ ಅವಾಂತರ ಏನು ಗೊತ್ತೆ? ಜಿಮ್‌ನಲ್ಲಿ 2.5 ಕೆ.ಜಿ. ತೂಕದ ಪ್ಲೇಟ್‌ನ ಮಧ್ಯದ ರಂಧ್ರದಲ್ಲಿ ಜನನಾಂಗ ಸಿಕ್ಕಿಸಿಕೊಂಡು, ಅದನ್ನು ಹೊರತೆಗೆಯಲಾಗದೇ ಒದ್ದಾಡುತ್ತಿದ್ದ.

ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ ವೈದ್ಯರಿಗೆ ಕೂಡ ಪ್ಲೇಟು ಹೊರತೆಗೆಯಲು ಸಾಧ್ಯವಾಗಿಲ್ಲ. ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಪ್ಲೇಟನ್ನು ಯಂತ್ರದ ಸಹಾಯದಿಂದ ೫ ತುಂಡುಗಳಾಗಿ ಕತ್ತರಿಸಿ ಆತನ ಜನನಾಂಗವನ್ನು ಹೊರ ತೆಗೆಯಲಾಗಿದೆ.

ಈ ಘಟನೆ ನಡೆದಿದ್ದು ಜರ್ಮನಿಯ ವರ್ಮ್ ಎಂಬ ನಗರದ ಜಿಮ್‌ವೊಂದರಲ್ಲಿ. ವರ್ಮ್ ಅಗ್ನಿಶಾಮಕ ದಳ ವಿಡಿಯೋವನ್ನು ಫೇಸ್'ಬುಕ್‌ನಲ್ಲಿ ಪ್ರಕಟಿಸಿದ್ದು ವೈರಲ್ ಆಗಿದೆ. 8,300 ಲೈಕ್ ಗಳು ಮತ್ತು 5400 ಷೇರ್‌ಗಳು ಬಂದಿವೆ.