ಹೊಸ ಫ್ಲೇವರ್ ಕಾಂಡೋಮ್ ಬಂತು ಮಾರುಕಟ್ಟೆಗೆ! ಇದೂ ಸಾಧ್ಯವೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 10:11 PM IST
Malaysian condoms now come in milk tea flavour
Highlights

ಸ್ಟ್ರಾಬೆರಿ, ಬನಾನಾ ಸೇರಿದಂತೆ ವಿವಿಧ ಫ್ಲೇವರ್ ಗಳ ಕಾಂಡೋಮ್ ಗಳು ಮಾರುಕಟ್ಟೆಯಲ್ಲಿ ಇರುವುದನ್ನು ನೋಡಿದ್ದೇವೆ. ಆದರೆ ಇದು ಎಲ್ಲದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿರುವ ಮಲೇಷಿಯಾ ಹೊಚ್ಚ ಹೊಸ ಫ್ಲೇವರ್ ಬಿಡುಗಡೆ ಮಾಡಿದೆ. ಏನಪ್ಪಾ ಹೊಸ ಫ್ಲೇವರ್...?

ಮಲೇಷಿಯಾದಲ್ಲಿ  ಇದೀಗ ಹಾಲಿನ ಫ್ಲೇವರ್ ಕಾಂಡೋಮ್ ಗಳು ಲಭ್ಯವಾಗುತ್ತಿವೆ. ಜತೆಗೆ ಟೀ ರೀತಿಯ ಸ್ವಾದವನ್ನು ಸವಿಯಬಹುದು!

ಮಲೇಷಿಯಾದಲ್ಲಿ ಹಾಲಿಗೆ ಅಗ್ರ ಸ್ಥಾನ. ಆ ದೇಶದ 61 ನೇ ಸ್ವಾತಂತ್ತ್ಯ ದಿನದ ನಿಮಿತ್ತ ಹೊಸ ಫ್ಲೇವರ್  ಬಂದಿದೆ. ಈಗಾಗಲೇ ಅಲ್ಲಿನ ದೇಶದ ನಾಸಿ ಲೆಮಾಕ್[ಅಕ್ಕಿ] ಮತ್ತು ಹೆಬ್ಬಲಸು ರೀತಿಯ ಫ್ಲೇವರ್ ಗಳು ಜನಪ್ರಿಯವಾಗಿವೆ.

ಇದೀಗ ಹಾಲು ಮತ್ತು ಟೀ ಮಾದರಿಯ ಕಾಂಡೋಮ್ ಗಳು ಲಗ್ಗೆ ಇಡುತ್ತಿದ್ದು ಲೈಂಗಿಕ ಆನಂದ ಸವಿಯುವವರು ಹೊಸದನ್ನು ಪ್ರಯತ್ನಿಸಲು ಅಲ್ಲಿನ ಸರಕಾರವೇ ಉತ್ತೇಜನ ನೀಡಿದೆ.

loader