Asianet Suvarna News Asianet Suvarna News

ಮಹಾಭಾರತ ಯುದ್ಧ ನಡೆಯಲೇಬೇಕಿತ್ತಾ?

ಅರ್ಜುನ ಯುದ್ಧ ಮಾಡಲು ಒಲ್ಲೆ ಎಂದಾಗ ಯುದ್ಧ ಮಾಡುವಂತೆ ಪ್ರೇರೇಪಿಸಿದ ಕೃಷ್ಣ ಹಿಂಸೆಯ ಪರವೇ?’ ಎಂಬ ಪ್ರಶ್ನೆ ಕೆಲವು ಪಾಶ್ಚಾತ್ಯ ಆಧ್ಯಾತ್ಮ ಚಿಂತಕರಿಗೆ ಬಂದಿದೆ. ಆದರೆ ಹುಟ್ಟಿಂದ ಮಹಾಭಾರತ, ಕೃಷ್ಣನ ಕಥೆಯನ್ನು ಕೇಳುತ್ತ ಬೆಳೆದ ನಮಗೆ ಅಂಥ ಪ್ರಶ್ನೆಗಳು ಬರುವ ಸಾಧ್ಯತೆ ಕಡಿಮೆ. ಲಕ್ಷ್ಮೀಶ ತೋಳ್ಪಾಡಿ ಅವರು ‘ಮಹಾಯುದ್ಧಕ್ಕೆ ಮುನ್ನ’ ಎಂಬ ಕೃತಿಯನ್ನು ಓದಿದರೆ ಇಂಥ ಸಂದೇಹಗಳಿಗೆಲ್ಲ ಉತ್ತರ ಸಿಗುತ್ತದೆ. ಆನೆಗಳಲ್ಲಾಗಲೀ, ಹಾವುಗಳಲ್ಲಾಗಲೀ, ಇತರೇ ಪ್ರಾಣಿಗಳಲ್ಲಾಗಲೀ ಒಂದು ಕ್ರಮವಿದೆ. ಅಲ್ಲಿ ವಂಶಾಭಿವೃದ್ಧಿಗೆ ಹೆಣ್ಣಿನೊಡನೆ ಕೂಡಲು ಬಲಿಷ್ಠನಿಗಷ್ಟೇ ಅವಕಾಶ. ದುರ್ಬಲನಿಗೆ ಅಲ್ಲಿ ಸ್ಥಾನವಿಲ್ಲ. ಏಕೆಂದರೆ ಬಲಿಷ್ಠವಾದ ಜೀವ ಸಂತತಿಯೇ ಮುಂದುವರಿಯಬೇಕು ಎಂಬ ನಿಸರ್ಗ ನಿಯಮ. ಮನುಷ್ಯರ ವಿಷಯಕ್ಕೆ ಬಂದಾಗ ಕೇವಲ ದೈಹಿಕ  ಬಲಿಷ್ಠತೆಯಷ್ಟೇ ಮುಖ್ಯವಾಗುವುದಿಲ್ಲ. ಮಾನಸಿಕ ಸಮತೋಲನ, ಸ್ಥಿರತೆಯೂ ಮುಖ್ಯವಾಗುತ್ತೆ.

Mabharata War

ತೋಳ್ಪಾಡಿ ಅವರು ಕೃತಿಯ ಆರಂಭದಲ್ಲಿ ಒಂದು ಉದಾಹರಣೆ ಕೊಡುತ್ತಾರೆ. ‘ಇಡೀ ಗಜಪಡೆ ಬಲಿಷ್ಠ ಸಲಗವೊಂದರ ಮುಂದಾಳತ್ವದಲ್ಲಿ ಬದುಕುತ್ತಿರುತ್ತದೆ. ಇಡೀ ಪರಿವಾರದಲ್ಲಿ ಆ ಸಲಗಕ್ಕಷ್ಟೇ ಹೆಣ್ಣನ್ನು

ಕೂಡುವ ಅಧಿಕಾರ. ಇನ್ನೊಂದು ಗಂಡಾನೆಗೆ ಆ ಅರ್ಹತೆ ಬರಬೇಕು ಅಂದರೆ ಅದು ಈ ಸಲಗವನ್ನು ಮಣಿಸಬೇಕು. ಇಂಥ ಸನ್ನಿವೇಶದಲ್ಲಿ ಶಾಂತಿಪ್ರಿಯನಾದ ಗಜಪಡೆಯ ನಾಯಕನು, ತನ್ನೊಡನೆ ಯುದ್ಧಕ್ಕೆ ನಿಂತ ಇನ್ನೊಂದು ಸಲಗಕ್ಕೆ ಶರಣಾಗತಿ ತೋರಿಸಿ ಅದು ಗುಂಪನ್ನು ತೊರೆದರೆ  ಏನಾಗಬಹುದು? ಹೊಸ ಸಲಗ ದುರ್ಬಲವಾಗಿರಬಹುದು, ಆ ಮೂಲಕ ಇಡೀ ಆನೆಗಳ ಸಂತತಿ ದುರ್ಬಲವಾಗಿಯೇ ಮುಂದುವರಿಯಬಹುದು.

ಅದೇ ಅವೆರಡರ ನಡುವೆ ಹಣಾಹಣಿಯಾಗಿ ಬಲಿಷ್ಠ ಸಲಗ ಗೆದ್ದು ಸಂತತಿ  ಮುಂದುವರಿಸಿದರೆ ಅಲ್ಲಿ ಆರೋಗ್ಯಕರ ಬಲಿಷ್ಠ ಗಜ ಸಂತತಿ ಮುಂದುವರಿಯುತ್ತದೆ. ಇಲ್ಲಿ ನಮ್ಮ ಮುಂದಿರುವುದು ಅರ್ಜುನ ಎಂಬ ವೀರ. ಆತನಿಗೆ ಯುದ್ಧದಿಂದ ಹಿಂದೆ ಸರಿಯುವ ಯೋಚನೆ ಬರುತ್ತದೆ. ಈ ಯೋಚನೆಗೆ ಬಲವಾದ ಕಾರಣ ತನ್ನ ಕುಲಕ್ಷಯಎನ್ನುವುದೇ. ಆದರೆ ಪ್ರಕೃತಿಗೆ ಅಂಥ ದುಷ್ಟ ಪರಂಪರೆ ಮುಂದುವರಿಯುವುದು ಬೇಕಿಲ್ಲ. ಒಂದು ವೇಳೆ ಅರ್ಜುನ ಶಸ್ತ್ರಾಸ್ತ್ರ ತ್ಯಜಿಸಿ ಯುದ್ಧದಿಂದ ದೂರ ಸರಿದರೆ ಗೆಲುವು ದುಷ್ಟರ ಪಾಲಾಗುತ್ತದೆ. ಅದು ಪ್ರಕೃತಿಯ ಸೋಲೂ ಹೌದು. ದುರ್ಬಲ ಕ್ಷಣದಲ್ಲಿ ದ್ರೌಪದಿಯನ್ನು ಕೌರವರು ಸೆಳೆದುಕೊಂಡು ಆಕೆಯನ್ನು ಬಳಸಿಕೊಂಡರೆ ಅಲ್ಲಿ ದುಷ್ಟಪರಂಪರೆಯೊಂದು ಬೆಳೆಯುತ್ತದೆ. ಇದರಿಂದ ಉತ್ತಮಿಕೆಗೆ ಸೋಲಾಗುತ್ತದೆ.

ಈ ಕೃತಿಯಲ್ಲಿ ಇನ್ನೊಂದು ಉದಾಹರಣೆ ಬರುತ್ತದೆ. ಸಿಂಧೂ ನಾಗರಿಕತೆಯ ಕಾಲ. ಆಗ ಕಂಚು, ತಾಮ್ರ, ತವರಗಳ ಎರಕದಿಂದ ಕಂಚನ್ನು ಸಿದ್ಧಪಡಿಸಲಾಗಿತ್ತು. ಆದರೆ ಆ ಕಾಲದಲ್ಲೂ ಈ ಕಂಚು ಕೇವಲ ಕೆಲವರ ಸೊತ್ತಾಗಿತ್ತು. ಇದು ಸಮಾಜವನ್ನು ವರ್ಗಗಳಾಗಿ ಒಡೆದಿತ್ತು.ಕಂಚನ್ನು ತಯಾರಿಸುವ ತಾಂತ್ರಿಕ ಜ್ಞಾನವೂ ಉಳ್ಳವರ ಸೊತ್ತಾಗಿತ್ತು. ಈ ವ್ಯವಸ್ಥೆಯನ್ನೇ ಪೋಷಿಸುವ ಮೌಲ್ಯಗಳೂ ಸಿದ್ಧವಾದವು. ಈ ಮೂಲಕ ಸೃಷ್ಟಿಶೀಲ ಪ್ರತಿಭೆಯನ್ನು ಸೂಕ್ಷ್ಮವಾಗಿ ಹತ್ತಿಕ್ಕಲಾಯಿತು.

ಅವಕಾಶಗಳನ್ನೇ ನಿರಾಕರಿಸಲಾಯಿತು. ಈ ವ್ಯವಸ್ಥೆಯ ವಿರುದ್ಧ ಎಂಥವನಾದರೂ ಬಂಡಾಯ ಎದ್ದೇ ಏಳುತ್ತಾನೆ. ಏಕೆಂದರೆ ಸೃಷ್ಟಿಶೀಲತೆಯ ಮರುಗಳಿಕೆಗಾಗಿ ಈ ಹೋರಾಟ ಅನಿವಾರ್ಯ. ಹೀಗಾಗಿ ಕುರುಕ್ಷೇತ್ರ ಯುದ್ಧ ಮತ್ತು ಅಲ್ಲಿ ಕೃಷ್ಣ ಅರ್ಜುನನಿಗೆ ನೀಡಿದ ಉಪದೇಶಕ್ಕೆ ಹಲವು ಮೌಲಿಕವಾದ ಅರ್ಥಗಳಿವೆ. ಕೃಷ್ಣ ಅರ್ಜುನನನ್ನು  ಕರ್ತವ್ಯದತ್ತ ಮುನ್ನಡೆಸಿದ್ದಕ್ಕೆ ಕಾರಣವೂ ಇದೇ.

Follow Us:
Download App:
  • android
  • ios