ಸಾಂಪ್ರದಾಯಿಕ ದಿರಿಸಲ್ಲಿ ಹಾಲುಗಲ್ಲದ ಕಂದನ ಚಂಡೆವಾದನ..! ವೀಡಿಯೋ ಸಖತ್ ವೈರಲ್‌

ಅದೇ ರೀತಿ ಇಲ್ಲೊಂದು ಕಡೆ ಮಗುವೊಂದು ಕಾರ್ಯಕ್ರಮವೊಂದರಲ್ಲಿ ಚೆಂಡೆ ಬಡಿಯುವವರನ್ನು (ಚಂಡೆ ವಾದನ) ಗಮನಿಸಿದ್ದು ಅವರು ಹೇಗೆ ಮಾಡುತ್ತದೆಯೋ ಹಾಗೆಯೇ ಮಾಡುತ್ತಾ ಅದರಲ್ಲೇ ಮಗ್ನವಾಗಿದೆ. ಈ ಮುದ್ದಾದ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Little boy playing Kerala s traditional musical instrument Chende This little one punter in imitation video goes viral akb

ಮಕ್ಕಳು ಅನುಕರಣೆ ಮಾಡುವುದರಲ್ಲಿ ನಂಬರ್ 1 ತಮ್ಮ ಸುತ್ತ ಮುತ್ತಲು ನಡೆಯುವ ಘಟನೆಗಳನ್ನೇ ನೋಡಿ ಮಕ್ಕಳು ಹೊಸದನ್ನು ಕಲಿಯಲು ಆರಂಭಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳ ಮುಂದೆ ಒಳ್ಳೆಯದ್ದನ್ನೇ ಮಾಡಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ತನ್ನ ಕಣ್ಣ ಮುಂದೆ ನಡೆಯುವ ಪ್ರತಿಯೊಂದು ಸಣ್ಣ ಸಣ್ಣ ವಿಚಾರಗಳನ್ನು ಮಗು ಗಮನಿಸಿ ಅನುಕರಿಸಲು ಶುರು ಮಾಡುತ್ತದೆ. ಹಾಗೆಯೇ ಮಗು ನಮ್ಮ ಮಣ್ಣಿನ ಆಚಾರ ವಿಚಾರ ಭಾಷೆ ಸಂಸ್ಕೃತಿಯನ್ನು ಕಲಿಯುತ್ತದೆ. ತುಂಬಾ ಚುರುಕು ಹಾಗೂ ಸೂಕ್ಷ್ಮವಾಗಿರುವ ಮಕ್ಕಳು ಬಹಳ ವೇಗವಾಗಿ ಎಲ್ಲವನ್ನು ಕಲಿಯಲು ಶುರು ಮಾಡುತ್ತಾರೆ. ಇದೇ ಕಾರಣಕ್ಕೆ ಪುಟ್ಟ ಮಕ್ಕಳ ಮನಸ್ಸನ್ನು ಹಸಿಮಣ್ಣಿಗೆ ಹೋಲಿಸಲಾಗುತ್ತದೆ. ತನ್ನತ ಬಂದಿದ್ದೆಲ್ಲವನ್ನು ಹಸಿ ಮಣ್ಣು ಹೇಗೆ ತನಗೆ ಅಂಟಿಸಿಕೊಳ್ಳುತ್ತದೋ ಹಾಗೆಯೇ ಪುಟ್ಟ ಮಕ್ಕಳ ಮನಸ್ಸು. ಕಣ್ಣಿಗೆ  ಕಂಡಿದೆಲ್ಲವನ್ನು ಮಗು  ಸ್ವೀಕರಿಸುತ್ತದೆ.  ಅದೇ ರೀತಿ ಇಲ್ಲೊಂದು ಕಡೆ ಮಗುವೊಂದು ಕಾರ್ಯಕ್ರಮವೊಂದರಲ್ಲಿ ಚಂಡೆ ಬಡಿಯುವವರನ್ನು (ಚೆಂಡೆ ವಾದನ) ಗಮನಿಸಿದ್ದು ಅವರು ಹೇಗೆ ಮಾಡುತ್ತದೆಯೋ ಹಾಗೆಯೇ ಮಾಡುತ್ತಾ ಅದರಲ್ಲೇ ಮಗ್ನವಾಗಿದೆ. 

ಸಾಮಾನ್ಯವಾಗಿ ಕರಾವಳಿ  ಹಾಗೂ ಕೇರಳದಲ್ಲಿ ಜನಪ್ರಿಯವಾಗಿರುವ ಸಂಪ್ರದಾಯಿಕ ವಾದನ ಚಂಡೆ, ಬಹುತೇಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದಲ್ಲಿ ಎಲ್ಲಾ ಶುಭ ಸಮಾರಂಭಗಳಲ್ಲಿ ಈ ಚಂಡೆ ವಾದಕರನ್ನು ಕರೆಸುತ್ತಾರೆ. ದೇವಸ್ಥಾನದ ಜೀರ್ಣೋದ್ದಾರದಿಂದ ಹಿಡಿದು ಮದುವೆಯ ದಿಬ್ಬಣದವರೆಗೂ ಅನೇಕರು ಚಂಡೆ ವಾದಕರನ್ನು ಕರೆಸುತ್ತಾರೆ. ಹೀಗೆಯೇ ಯಾವುದೋ ಸಮಾರಂಭದಲ್ಲಿ ಮಗುವೊಂದು ಈ ಚಂಡೆವಾದಕರು ಚೆಂಡೆ ಬಡಿಯುವುದನ್ನು ಗಮನಿಸಿದ್ದು, ಅವರು ಹೇಗೆ ಆಕ್ಷನ್‌ ಮಾಡುತ್ತಾರೋ ಅದೇ ರೀತಿ ಈ ಮಗುವೂ ಮಾಡುತ್ತಿದ್ದು, ಪುಟ್ಟ ಮಗುವಿನ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಬಾಲಿವುಡ್ ನಟಿಯರಿಂದ ಹಿಡಿದು ಭಾರತದ ಅತೀ ಶ್ರೀಮಂತರ ಮಕ್ಕಳ ಜೊತೆಯೆಲ್ಲಾ ಓಡಾಡುವ ಓರಿ ಡ್ರಗ್ ಪೆಡ್ಲರಾ...!

ಚಂಡೆ ವಾದಕರು ಸಾಮಾನ್ಯವಾಗಿ ಚಂಡೆಯನ್ನು ಕುತ್ತಿಗೆಗೆ ನೇತಾಡಿಸಿಕೊಂಡು ಎರಡು ಕೈಗಳಲ್ಲಿ ಕೋಲುಗಳನ್ನು ಹಿಡಿದು ಸುಶ್ರಾವ್ಯವಾಗಿ ಬಡಿಯುತ್ತಾರೆ. ಈ ವೇಳೆ ಕೆಲವರು ತಮ್ಮ ದೇಹವನ್ನು ನೆಲದವರೆಗೂ ಬಾಗಿಸುತ್ತಾ ಕೆಲವೊಮ್ಮ ಒಂದು ಕಾಲನ್ನು ಎತ್ತುತ್ತಾ ಬಹಳ ಸೊಗಸಾಗಿ ಚೆಂಡೆ ಬಡಿಯುವುದನ್ನು ನೋಡುವುದೇ ಒಂದು ಚೆಂದ. ಅದೇ ರೀತಿ ಇಲ್ಲಿ ಈ ಪುಟಾಣಿ ಚಂಡೆ ಬಡಿಯುವವರಂತೆ ಆಕ್ಷನ್ ಮಾಡುತ್ತಿದೆ. ಹಾಗಂತ ಈ ಪುಟಾಣಿ ಕೈಯಲ್ಲಿ ಚಂಡೆ ಇಲ್ಲ. ಆದರೆ ಅದು ತಾನು ಕತ್ತಿಗೆ ಚಂಡೆ ನೇತು ಹಾಕಿದವರಂತೆ ಕೈಯಲ್ಲಿ ಕೋಲು ಹಿಡಿದು ಬಾರಿಸುವವರಂತೆ ನೆಲದವರೆಗೆ ತನ್ನ ದೇಹವನ್ನು ಬಾಗಿಸಿ ಕೈಗಳನ್ನು ಚಂಡೆ ಬಡಿಯುವವರಂತೆ ಕುಣಿಸುತ್ತಿದ್ದು, ಇದನ್ನು ನೋಡಿ ಜನ ಬೆರಗಾಗಿದ್ದಾರೆ. 

 

ಕ್ರೀಮ್ ಬಣ್ಣದ ಕೇರಳ ಶೈಲಿಯ ವೇಸ್ಟಿ ಕೆಂಪು ಬಣ್ಣದ ಶರ್ಟ್ ಧರಿಸಿರುವ ಇನ್ನು ಸರಿಯಾಗಿ ಮಾತನಾಡಲೂ ಬಾರದ ಈ ಪುಟ್ಟ ಬಾಲಕ ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ಸೊಗಸಾಗಿ ಚೆಂಡೆ ಬಡಿಯುವುದರಲ್ಲಿ ಆಸಕ್ತನಾಗಿರುವುದಕ್ಕೆ  ಜನ ಶಹಭಾಷ್ ಎಂದಿದ್ದಾರೆ.  ಅನೇಕರು ಈ ವೀಡಿಯೋ ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬೆಳೆಯುವ ಸಿರಿ ಮೊಳಕೆಯಲ್ಲೇ ಎಂದು ಪ್ರತಿಕ್ರಿಯಿಸಿದ್ದಾರೆ.  ಮಗುವಿನ ಸುಂದರವಾದ ಈ ವೀಡಿಯೋವನ್ನು ನೀವು ಒಮ್ಮೆ ನೋಡಿ ಖುಷಿಯಾಗಿ...

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

 

Latest Videos
Follow Us:
Download App:
  • android
  • ios