ಕಲಿಯುವ ಮನಸ್ಸಿದ್ದರೆ ಯಾವ ವಯಸ್ಸಿನಲ್ಲಾದ್ರೂ ಓದು ಮುಂದುವರಿಸಬಹುದು. ಇಳಿ ವಯಸ್ಸಿನಲ್ಲಿ ವಿದ್ಯೆ ಕಲಿತ ಅನೇಕರು ನಮ್ಮಲ್ಲಿದ್ದಾರೆ. ಈಗ ಅವರ ಸಾಲಿಗೆ ಈ ಅಜ್ಜ ಕೂಡ ಸೇರಿದ್ದಾನೆ. ಇಂಗ್ಲೀಷ್ ಕಲಿಯಬೇಕೆಂಬ ಛಲದಲ್ಲಿ ಈತ ಮಾಡಿದ ಕೆಲಸ ಎಲ್ಲರೂ ಹುಬ್ಬೇರಿಸುವಂತಿದೆ.   

ವಿದ್ಯೆಗೆ ವಯಸ್ಸಿನ ಹಂಗಿಲ್ಲ. ಹುಟ್ಟಿದ ದಿನದಿಂದ ಸಾಯುವತನಕವೂ ಕಲಿಕೆ ನಿರಂತರವಾಗಿ ಇದ್ದೇ ಇರುತ್ತೆ. ಕನ್ನಡದಲ್ಲಿ ಬರ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನೀವು ಭಾಗ್ಯ ಹೈಸ್ಕೂಲ್ ಮೆಟ್ಟಿಲೇರಿರೋದನ್ನು ನೋಡ್ಬಹುದು. ಹೈಸ್ಕೂಲ್ ಶಿಕ್ಷಣ ಮುಗಿಸುವ ಛಲದೊಂದಿಗೆ ಎರಡು ಮಕ್ಕಳ ತಾಯಿ ಮತ್ತೆ ಶಾಲೆಗೆ ಹೊರಟಿದ್ದಾಳೆ. ವಯಸ್ಸಾದ್ಮೆಲೂ ಶಾಲೆಗೆ ಹೋಗಿ ಕಲಿಯೋರನ್ನು ನೀವು ರೀಲ್ ಲೈಫ್ ನಲ್ಲಿ ಮಾತ್ರ ನೋಡಲು ಸಾಧ್ಯವಿಲ್ಲ. ರಿಯಲ್ ಲೈಫ್ ನಲ್ಲೂ ಇಂಥವರಿದ್ದಾರೆ. ಮಿಜೋರಾಂನ ಅಜ್ಜ ಬದುಕಿನ ಇಳಿ ವಯಸ್ಸಿನಲ್ಲಿ ಕಲಿಕೆಯ ಉತ್ಸಾಹ ತೋರಿಸಿದ್ದಾರೆ. ಹಿಂದಿನ ದಿನಗಳನ್ನು ನೆನಪು ಮಾಡ್ತಾ ಮರಗುವವರಿಗೆ ಈ ಅಜ್ಜ ಪ್ರೇರಣೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

78ರ ವಯಸ್ಸಿನ ಅಜ್ಜ (Grandfather) ಪ್ರತಿದಿನ ನಡೀತಾರೆ 3 ಕಿ.ಮೀ : ಮಿಜೋರಾಂ (Mizoram) ನ 78 ವರ್ಷದ ಈ ಅಜ್ಜನ ಹೆಸರು ಲಾಲರಿಂಗಥಾರಾ. ಇವರು ತನ್ನ ನಿವೃತ್ತಿ ಜೀವನದ ನಂತರ ಈಗ ಮತ್ತೆ ಶಾಲೆ (school)ಗೆ ಅಡ್ಮಿಶನ್ ಮಾಡಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಕೆಲವರು ತಮ್ಮ ಬದುಕಿನ ಕೊನೆಯ ದಿನಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಲಾಲರಿಂಗಥಾರಾ ಮಾತ್ರ ಸ್ಕೂಲ್ ಗೆ ಅಡ್ಮಿಶನ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಈತ ಕಲಿಯುವುದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 

ಡೈಲಿ ಒಂದು ಪೆಗ್‌ ಹಾಕಿದ್ರೂ ನೀವು ಸೇಫಲ್ಲ: ನಿಮ್ಮನ್ನೂ ಕಾಡುತ್ತೆ ‘’ಸೈಲೆಂಟ್‌ ಕಿಲ್ಲರ್‌’’!

ಸ್ಕೂಲ್ ಗೆ ಅಡ್ಮಿಶನ್ ಮಾಡಿಸಿಕೊಂಡ ಈ ತಾತ ಪ್ರತಿದಿನವೂ ಎಲ್ಲ ಹುಡುಗರಂತೆ ತಾನೂ ಯುನಿಫಾರ್ಮ್, ಸ್ಕೂಲ್ ಬ್ಯಾಗ್ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ಹೆಗಲಿಗೆ ಬ್ಯಾಗ್ ಏರಿಸಿಕೊಂಡು 3 ಕಿಲೋಮೀಟರ್ ದೂರ ನಡೆದುಕೊಂಡೇ ಶಾಲೆಗೆ ಹೋಗುವ ಲಾಲರಿಂಗಥಾರಾನ ಆತ್ಮಸ್ಥೈರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶಾಲೆಯಲ್ಲಿ ಅಜ್ಜ 9ನೇ ತರಗತಿ ಕಲಿಯುತ್ತಿದ್ದಾರೆ. ಶಾಲೆಯ ಸಿಬ್ಬಂದಿ ಕೂಡ ಲಾಲರಿಂಗಥಾರಾನನ್ನು ಎಲ್ಲ ಹುಡುಗರಂತೆಯೇ ಕಾಣುತ್ತಾರೆ.

ಈ ಕಾರಣಕ್ಕಾಗಿ ಎಡ್ಮಿಶನ್ ಮಾಡಿಸಿಕೊಂಡ : ಲಾಲರಿಂಗಥಾರಾ ಯುನಿಫಾರ್ಮ್ ಧರಿಸಿ, ಸ್ಕೂಲ್ ಬ್ಯಾಗ್ ಹಾಕಿಕೊಂಡು ಛತ್ರಿ ಹಿಡಿದು ಶಾಲೆಗೆ ಹೋಗುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಅಜ್ಜನ ವೇಷಭೂಷಣ ನಗು ತರಿಸಿದರೂ ಇವನು ಶಾಲೆಗೆ ಎಡ್ಮಿಶನ್ ಮಾಡಿಸಿಕೊಂಡ ಕಾರಣ ಅನೇಕ ಜನರಿಗೆ ಪ್ರೇರಣೆಯಾಗಿದೆ. ಲಾಲರಿಂಗಥಾರಾನಿಗೆ ತಾನು ಇಂಗ್ಲೀಷ್ ನಲ್ಲಿ ಅಪ್ಲಿಕೇಶನ್ ಬರೆಯಬೇಕು, ಟಿವಿಯಲ್ಲಿ ಬರುವ ಇಂಗ್ಲೀಷ್ ವಾರ್ತೆಗಳನ್ನು ನೋಡಿ ಅರ್ಥಮಾಡಿಕೊಳ್ಳಬೇಕು ಎನ್ನುವ ಆಸೆಯಿತ್ತು. ಆದರೆ ಅವರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಆದ್ದರಿಂದ ಲಾಲರಿಂಗಥಾರಾ ಹೇಗಾದರೂ ಮಾಡಿ ತಾನೂ ಇಂಗ್ಲೀಷ್ ಕಲಿಯಬೇಕು ಎಂದು ನಿರ್ಧರಿಸಿದ್ದರು. ಹಾಗಾಗಿ ಅನೇಕ ವರ್ಷಗಳಿಂದ ಪೂರ್ತಿಯಾಗದ ತನ್ನ ಓದನ್ನು ಮುಂದುವರೆಸುವ ಪ್ರತಿಜ್ಞೆ ಮಾಡಿದ.

ಬ್ಯೂಟಿಫುಲ್, ಕ್ಯೂಟ್ ಅನ್ನೋದೆಲ್ಲಾ ಬಿಟ್ಬಿಡಿ, ಹುಡುಗೀರು ಎಂಥಾ ಕಾಂಪ್ಲಿಮೆಂಟ್‌ಗೆ ಬೇಗ ಫಿದಾ ಆಗ್ತಾರೆ ತಿಳ್ಕೊಳ್ಳಿ

ಮೂರನೇ ಬಾರಿ ಸ್ಕೂಲ್ ಗೆ ಎಡ್ಮಿಶನ್ ಮಾಡಿಸಿದ : ಲಾಲರಿಂಗಥಾರಾ 1945 ರಲ್ಲಿ ಮಿಜೋರಾಂನ ಚಂಪಾಯಿ ಜಿಲ್ಲೆಯ ಖುವಾಗ್ಲಾಂಗ್ ಜನಿಸಿದ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡ ಕಾರಣ ಸಂಸಾರದ ಜವಾಬ್ದಾರಿ ಈತನ ಹೆಗಲೇರಿತು. ಬಡತನ ಹಾಗೂ ಜವಾಬ್ದಾರಿಯ ಕಾರಣದಿಂದ ಲಾಲರಿಂಗಥಾರಾನ ವಿದ್ಯೆ ಅರ್ಧಕ್ಕೇ ನಿಂತುಹೋಯ್ತು. ನಂತರವೂ ಅವನಿಗೆ ಕಲಿಯುವ ಅವಕಾಶ ಸಿಗಲೇ ಇಲ್ಲ.

ಅನೇಕ ಕಷ್ಟಗಳ ನಡುವೆಯೂ ಲಾಲರಿಂಗಥಾರಾನಿಗೆ ಕಲಿಯುವ ಆಸೆ ಕಡಿಮೆಯಾಗಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಇವರು ಶಾಲೆ ಸೇರಿಕೊಳ್ಳುತ್ತಿದ್ದರು. 1998 ರಲ್ಲಿ ಇವರು 5ನೇ ತರಗತಿಗೆ ಸೇರಿಕೊಂಡಿದ್ದರು. ಆ ಸಮಯದಲ್ಲಿ ಅವರು ಅಲ್ಲಿಯ ಮೀಜೋ ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿತರು. ಪ್ರಸ್ತುತ ವಾಚ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಲಾಲರಿಂಗಥಾರಾ ಇಂಗ್ಲೀಷ್ ಕಲಿಯಬೇಕೆಂಬ ಇಚ್ಛೆಯಿಂದ ಮತ್ತೆ ಶಾಲೆಯ ಕದ ತಟ್ಟಿದ್ದಾರೆ.

ಎಷ್ಟೇ ಕಷ್ಟವಾದರೂ, ತೊಂದರೆಗಳು ಎದುರಾದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಲಾಲರಿಂಗಥಾರಾ 8ನೇ ತರಗತಿಯನ್ನು ಪೂರ್ಣಗೊಳಿಸಿ ಪ್ರೌಢಶಾಲೆಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹದಿಹರೆಯದರಲ್ಲೂ ಲಾಲರಿಂಗಥಾರಾನಿಗಿರುವ ಕಲಿಕೆಯ ಉತ್ಸಾಹವನ್ನು ನೋಡಿದ ಶಾಲೆಯ ಆಡಳಿತ ಮಂಡಳಿ ಲಾಲರಿಂಗಥಾರಾನಿಗೆ ಪುಸ್ತಕ ಹಾಗೂ ಸಮವಸ್ತ್ರವನ್ನು ನೀಡಿ ಅವರ ವಿದ್ಯಾಭ್ಯಾಸದ ಕನಸನ್ನು ಈಡೇರಿಸಿದೆ.