ಒಂದು ದಿನದ ಆಫರ್ ಪ್ರಕಟಿಸಿ ಒಂದೇ ಬಾರಿಗೆ 10.86 ಲಕ್ಷ ರು. ನೀಡಿದರೆ ಜೀವನ ಪೂರ್ತಿ ಮದ್ಯ ಪೂರೈಸುವುದಾಗಿ ಹೇಳಿದೆ.
ಗ್ರಾಹಕರನ್ನು ಸೆಳೆಯಲು ವ್ಯಾಪಾರಸ್ಥರು ಆಫರ್ ನೀಡುತ್ತಾರೆ. ಅದೇನಿದ್ದರೂ ಒಂದೆರಡು ತಿಂಗಳಷ್ಟೇ. ಆದರೆ, ಒಂದು ಬಾರಿ ಹಣ ಪಾವತಿಸಿದರೆ ಜೀವನ ಪೂರ್ತಿ ಮದ್ಯ ನೀಡುವುದಾಗಿ ಚೀನಾದ ಮದ್ಯ ಮಾರಾಟ ಕಂಪನಿಯೊಂದು ಆಫರ್ ನೀಡಿದೆ. ಚೀನಾದಲ್ಲಿ ಜನಪ್ರಿಯವಾಗಿರುವ ಬಾಜಿಜು ಎಂಬ ಮದ್ಯವನ್ನು ಮಾರಾಟ ಮಾಡುವ ಇ- ಕಾಮರ್ಸ್ ವೆಬ್ ಸೈಟ್ ಟಿಮಾಲ್. ಕಾಮ್ ಒಂದು ದಿನದ ಆಫರ್ ಪ್ರಕಟಿಸಿ ಒಂದೇ ಬಾರಿಗೆ 10.86 ಲಕ್ಷ ರು. ನೀಡಿದರೆ ಜೀವನ ಪೂರ್ತಿ ಮದ್ಯ ಪೂರೈಸುವುದಾಗಿ ಹೇಳಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 12 ಪ್ಯಾಕೇಟ್‌ನಂತೆ ಜೀವನ ಪೂರ್ತಿ ಮದ್ಯವನ್ನು ನೀಡಲಾಗುತ್ತದೆ. ಇಷ್ಟೂ ಸಾಲದಿದ್ದರೆ ಗ್ರಾಹಕರು ಕೈಯಿಂದ ಹಣ ನೀಡಬೇಕು.
