Asianet Suvarna News Asianet Suvarna News

ವಧು-ವರಾನ್ವೇಷಣೆಯಲ್ಲಿ ಎಂಜಿನೀಯರ್’ಗಳದ್ದೇ ಮೇಲುಗೈ!

ಮ್ಯಾಟ್ರಿಮೋನಿಯಲ್ಲಿ  ಸಂಗಾತಿಯನ್ನು ಹುಡುಕುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು, ಹುಬ್ಬಳ್ಳಿಗಳಲ್ಲಿ ಸೇವೆ ಒದಗಿಸುತ್ತಿರುವ ಕನ್ನಡ ಮೆಟ್ರಿಮೊನಿಗೆ ಶೇ. 30 ರಷ್ಟು ಹುಡುಗಿಯರು ರಿಜಿಸ್ಟರ್ ಆಗಿದ್ದರೆ, ಶೇ. 70 ರಷ್ಟು ಹುಡುಗರು ತಮಗೆ ಹೊಂದುವಂತಹ ಸಂಗಾತಿಯ  ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

know things about Matrimonial websites

ಆನ್‌ಲೈನ್ ಜಗತ್ತಿನಲ್ಲಿ ಎಲ್ಲವೂ ಕೈ ಬೆರಳ ತುದಿಯಲ್ಲೇ ಇದೆ. ಕುಳಿತ ಕಡೆಯಲ್ಲೇ ಬಹುತೇಕ ದಿನಚರಿಯ ಬೇಕು ಬೇಡಗಳನ್ನು ಪೂರೈಸಿಕೊಂಡುಬಿಡಬಹುದು. ಇದು ಬಾಳ ಸಂಗಾತಿಯ ಆಯ್ಕೆಯವರೆಗೂ ತಲುಪಿ ಸಾಕಷ್ಟು ಸಮಯವೇ ಆಗಿದೆ.

ಈ ನಿಟ್ಟಿನಲ್ಲಿ ಕನ್ನಡ ಮೆಟ್ರಿಮೊನಿ ಒಂದಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿಕೊಂಡು ಬಂದಿದೆ. ಈಗ ಇದರ ಮೂಲಕ ಬಾಳ ಸಂಗಾತಿಯನ್ನು ಹುಡುಕುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು, ಹುಬ್ಬಳ್ಳಿಗಳಲ್ಲಿ ಸೇವೆ ಒದಗಿಸುತ್ತಿರುವ ಕನ್ನಡ ಮೆಟ್ರಿಮೊನಿಗೆ ಶೇ. 30 ರಷ್ಟು ಹುಡುಗಿಯರು ರಿಜಿಸ್ಟರ್ ಆಗಿದ್ದರೆ, ಶೇ. 70 ರಷ್ಟು ಹುಡುಗರು ತಮಗೆ ಹೊಂದುವಂತಹ ಸಂಗಾತಿಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ಇದರಲ್ಲಿ ಶೇ.44 ರಷ್ಟು ಹುಡುಗಿಯರು 24 ರಿಂದ 27 ವರ್ಷ ವಯಸ್ಸಿನವರಾಗಿದ್ದರೆ, ಶೇ. 37 ರಷ್ಟು ಹುಡುಗರು 26 ರಿಂದ 29 ವಯೋಮಿತಿಯವಾರಾಗಿದ್ದಾರೆ. ವಿಶೇಷ ಎಂದರೆ ಒಟ್ಟು ನೋಂದಾವಣೆಗೊಂಡಿರುವವರ ಪೈಕಿ ಶೇ. 60 ರಷ್ಟು ಮಂದಿ  ತಾವೇ ಸ್ವತಃ ಸಂಗಾತಿಯ ಅನ್ವೇಷಣೆಯಲ್ಲಿ ತೊಡಗಿಕೊಂಡವರು. ಇನ್ನುಳಿದ ಶೇ. 40 ರಷ್ಟು ಮಂದಿಗೆ ಅಪ್ಪ, ಅಮ್ಮ, ಪೋಷಕರು ಸಂಗಾತಿಯ ಅನ್ವೇಷಣೆಗೆ ಮುಂದಾಗಿದ್ದಾರೆ. ಮೊಬೈಲ್ ಆ್ಯಪ್‌ನ ಮುಖಾಂತರವೇ ಅತಿ ಹೆಚ್ಚು ಹುಡುಕಾಟ ನಡೆಯುತ್ತಿದ್ದು, ಇದರಲ್ಲಿ ಇಂಜಿನಿಯರ್‌ಗಳ ಪಾಲು ಶೇ. 22 ರಷ್ಟು. ಪದವಿಗಳಿಸಿದವ ಸಂಖ್ಯೆ ಶೇ. 6 ರಷ್ಟಿದೆ.

ಹಾಗೆ ನೋಡಿದರೆ ನಗರ ಪ್ರದೇಶದಲ್ಲಿಯೇ ನೋಂದಣಿಗಳ ಸಂಖ್ಯೆ ಅಧಿಕ. ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರೇ ಮೆಟ್ರಿಮೊನಿಯ ಸಿಂಹಪಾಲನ್ನು ಆಕ್ರಮಿಸಿರುವುದು. ನಿತ್ಯ ಹುಡುಕಾಟ, ಇಷ್ಟವಾದವರೊಂದಿಗೆ ಮಾತುಕತೆ, ತದನಂತರದಲ್ಲಿ ಸಂಬಂಧಗಳು ಕೂಡಿ ಬರುವಲ್ಲಿಯೂ ಮೆಟ್ರಿಮೊನಿ ಪಾತ್ರ ಮುಖ್ಯವಾದದ್ದು, ಇದುವರೆಗೂ ಶೇ. 10 ಕ್ಕಿಂತಲೂ ಹೆಚ್ಚು ಸಂಬಂಧಗಳು ಬೆಸುಗೆಯಾಗಿ ತಮ್ಮ ಇಷ್ಟದ ಸಂಗಾತಿಯೊಂದಿಗೆ ಸುಂದರ ಬಾಳು ಕಟ್ಟಿಕೊಂಡಿದ್ದಾರೆ ಇದು ಇಂದಿನ ಸಂಬಂಧಗಳಲ್ಲಿ ಮ್ಯಾಚ್ ಮೇಕಿಂಗ್ ಉದ್ದಿಮೆಗಳ ಹಿರಿಮೆ ಎಂದರೂ ಆದೀತು. 

Follow Us:
Download App:
  • android
  • ios