ಕುಂಬಳ ಕಾಯಿಯನ್ನು ಹೋಲುವ ಒಂದು ತರಕಾರಿ ಚೀನೀಕಾಯಿ.
ಕುಂಬಳ ಕಾಯಿ ಯಾರಿಗೆ ತಾನೇ ಗೊತ್ತಿಲ್ಲ? ಕುಂಬಳ ಕಾಯಿಯನ್ನು ಹೋಲುವ ಒಂದು ತರಕಾರಿ ಚೀನೀಕಾಯಿ. ಚೀನೀಕಾಯಿ ಬೊಜ್ಜು ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದನ್ನು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಈ ಕೆಳಗಿನ ಉಪಯೋಗಗಳಿವೆ.
ಜೀರ್ಣಕ್ರಿಯೆಗೆ ಸಹಾಯ: ಈ ತರಕಾರಿ ಮಲಬದ್ಧತೆಯನ್ನು ತಡೆಯುತ್ತದೆ, ರಕ್ಕತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ನಿಯಂತ್ರಿಸುತ್ತದೆ. ಇದರಲ್ಲಿ 36 ಕ್ಯಾಲೋರಿ ಮತ್ತು 10% ಫೈಬರ್ ಅಂಶಗಳು ಇರುತ್ತವೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ಸಹಾಯಮಾಡುತ್ತದೆ.
ಕ್ಯಾನ್ಸರ್ ತಡೆಯುತ್ತದೆ: ಇದರಲ್ಲಿ ಇರುವ ಫೈಬರ್ ಅಂಶಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಕರುಳಿನಲ್ಲಿ ಉತ್ಪಾದನೆಯಾಗಬಹುದಾದ ಕ್ಯಾನ್ಸರ್ ಜೀವಕಣಗಳನ್ನು ತಡೆಯುತ್ತದೆ.
ಕಣ್ಣುಗಳ ಆರೋಗ್ಯಕ್ಕೆ ಉತ್ತಮ: ಇದರಲ್ಲಿ ವಿಟಮಿನ್ ಎ ಉತ್ತಮವಾಗಿದ್ದು ದೃಷ್ಟಿ ದೋಷವನ್ನು ನಿವಾರಿಸುತ್ತದೆ. ಕಣ್ಣಿನಲ್ಲಿ ಅತಿಯಾಗಿ ನೀರು ಬರುತ್ತಿದ್ದರೆ ಅದನ್ನು ತಡೆಯುತ್ತದೆ. ಕಣ್ಣು ಒಣಗುವುದನ್ನು ಇದು ತಡೆಯುತ್ತದೆ.
ತೂಕವನ್ನು ಕಡಿಮೆ ಮಾಡುತ್ತದೆ: ಇದು ಅತಿಯಾದ ಹಸಿವನ್ನು ತಡೆಯುತ್ತದೆ. ಮತ್ತು ತೂಕ ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಉತ್ತಮವಾಗಿದೆ: ಇದರಲ್ಲಿ ಹೆಚ್ಚಿನ ನೀರಿನ ಅಂಶಗಳಿದ್ದು ಚರ್ಮಕ್ಕೆ ಉತ್ತಮವಾಗಿದೆ. ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ.
