ಬಸ್ಕಿ ಯೋಗದ ಜಾದೂ

First Published 24, Mar 2018, 5:08 PM IST
Know more about Super Brain Yoga
Highlights

ಈ ಬಸ್ಕಿ ಈಗ ಅಮೆರಿಕದಲ್ಲಿ ಅದ್ಭುತ ಯೋಗ ಎನಿಸಿಕೊಂಡಿದೆ. ಅಲ್ಲಿ ಇದಕ್ಕೆ 'ಸೂಪರ್ ಬ್ರೈನ್ ಯೋಗ' ಅಂತ ಹೆಸರು.ಅಷ್ಟು ಮಾತ್ರವಲ್ಲದೆ ಇದು ನಮ್ಮದೇ ಸಂಶೋಧನೆ ಅಂತ ಪೇಟೆಂಟ್‌ ಅನ್ನೂ ಗಿಟ್ಟಿಸಿ ಕೊಂಡಿದ್ದಾರೆ. ವಾಸ್ತವವಾಗಿ, ಭಾರತೀಯರ ಬ್ರಾಹ್ಮೀ ಪ್ರಾಣಾಯಾಮದ ಒಂದು ಆಯಾಮವೇ ಈ ಬಸ್ಕಿ ವಿಧಾನ. 

-ರಾಜೇಶ್ವರಿ ಜಯಕೃಷ್ಣ 
'ಪದ್ಯ ಕಂಠಪಾಠ ಮಾಡಿಲ್ವಾ? ಹಾಗಾದ್ರೆ ಒಂದೈವತ್ತು ಸಲ ಬಸ್ಕಿ ಹಾಕು' ಅನ್ನುತ್ತಿದ್ದರು ನಮ್ಮ ಮೇಷ್ಟ್ರು. ಬಸ್ಕಿಯ  ಪದಲ್ಲಿರುತ್ತಿತ್ತು ಅಂದಿನ ಶಿಕ್ಷೆ. 

ಸುಳ್ಳು ಹೇಳುವುದನ್ನು ಸಹಿಸದ ಅಮ್ಮನೂ ಆಗಾಗ ದೇವರೆದುರು ಬಸ್ಕಿ ಹೊಡೆಸುತ್ತಿದ್ದಳು. ಬಲಗೈ ಮೂಲಕ ಎಡಗಿವಿಯನ್ನು ಹಿಡಿದುಕೊಂಡು, ಎಡಕೈ ಮೂಲಕ ಬಲಕಿವಿಯನ್ನು ಹಿಡಿದುಕೊಂಡು ಏಳುತ್ತ ಕೂರುತ್ತ 'ಬೆನಕ ಬೆನಕ ಏಕದಂತ...ಮುತ್ತಿನುಂಡೆ...ಹೊನ್ನಗಂಟೆ...' ಅಂತ ಬಾಲ್ಯದಲ್ಲಿ ಗಣಪನಿಗೆ ವಂದನೆ ಸಲ್ಲಿಸುತ್ತಿದ್ದುದು ಇನ್ನೂ ನೆನಪಿನಿಂದ ಮಾಸಿಲ್ಲ.

ಅಚ್ಚರಿ ಏನು ಗೊತ್ತೇ? ಇದೇ ಈ ಬಸ್ಕಿ ಈಗ ಅಮೆರಿಕದಲ್ಲಿ ಅದ್ಭುತ ಯೋಗ ಎನಿಸಿಕೊಂಡಿದೆ. ಅಲ್ಲಿ ಇದಕ್ಕೆ 'ಸೂಪರ್ ಬ್ರೈನ್ ಯೋಗ' ಅಂತ ಹೆಸರು.ಅಷ್ಟು ಮಾತ್ರವಲ್ಲದೆ ಇದು ನಮ್ಮದೇ ಸಂಶೋಧನೆ ಅಂತ ಪೇಟೆಂಟ್‌ ಅನ್ನೂ ಗಿಟ್ಟಿಸಿ ಕೊಂಡಿದ್ದಾರೆ. ವಾಸ್ತವವಾಗಿ, ಭಾರತೀಯರ ಬ್ರಾಹ್ಮೀ ಪ್ರಾಣಾಯಾಮದ ಒಂದು ಆಯಾಮವೇ ಈ ಬಸ್ಕಿ ವಿಧಾನ. 

ಬಸ್ಕಿ ಹೊಡೆಯೋದ್ರಿಂದ ಏನಾಗುತ್ತೆ?
ನಮ್ಮ ಕಿವಿಗೂ ಮೆದುಳಿಗೂ ನಂಟಿದೆ. ಬಲಕಿವಿಯ ನರಗಳು ಮೆದುಳಿನ ಎಡ ಭಾಗಕ್ಕೆ ಸಂಪರ್ಕ ಹೊಂದಿದ್ದರೆ ಎಡಕಿವಿಯ ನರಗಳು ಮೆದುಳಿನ ಬಲಭಾಗಕ್ಕೆ ಜೋಡಿಸಲ್ಪದೆ. ನಾವು ಕಿವಿಯನ್ನು ಹಿಡಿದುಕೊಂಡಾಗ ಮೆದುಳಿಗೆ ಸೂಕ್ಷ್ಮವಾದ ಶಕ್ತಿ ತರಂಗಗಳು ರವಾನೆಯಾಗುತ್ತವೆ. ಆಗ ಅದು ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ವಯೋಮಾನದವರೂ ಮಾಡಬಹುದಾದ ಯೋಗಾಸನವಿದು. ಅಮೆರಿಕನ್ನರು 'ಕಸಿದಿರುವ' ಈ ಪರ್‌ಬ್ರೈನ್‌ಯೋಗ(ಬಸ್ಕಿ)ವು  ತುಂಬ ಸುಲಭವಾದುದು, ಸರಳವಾದುದು. ಅದನ್ನು ನಾವು ಬಸ್ಕಿಯಾಗಿಯೇ ಉಳಿಸಿಕೊಳ್ಳಬೇಕಿದೆ. ಆರೋಗ್ಯಕರ ಬದುಕಿಗೆ ಆರೋಗ್ಯಕರ ಮೆದುಳೂ ಕೂಡ ಅಷ್ಟೇ ಮುಖ್ಯಅಲ್ಲವೇ? 

ಸರಿಯಾಗಿ ಬಸ್ಕಿ ಹೊಡೆಯೋದು ಹೀಗೆ
- ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಳ್ಳಬೇಕು. ದೀರ್ಘವಾಗಿ ಉಸಿರೆಳೆದುಕೊಳ್ಳಬೇಕು.
- ನಿಮ್ಮ ನಾಲಿಗೆಯನ್ನು ಬಾಯಿಯ ಒಳಭಾಗದಲ್ಲಿ ಅಂದರೆ ಮೇಲಿನ ಹಲ್ಲಿನ ಹಿಂಭಾಗದಲ್ಲಿರಿಸಿ. 
- ಎಡಕೈಯ ಹೆಬ್ಬೆರಳು ಮತ್ತು ತೋರುಬೆರಳಿನಿಂದ ನಿಮ್ಮ ಬಲಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು. ಹಾಗೆಯೇ ಬಲಕೈಯ ಹೆಬ್ಬೆರಳು ಮತ್ತು ಕಿರುಬೆರಳಿನಿಂದ ಎಡಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು.
- ನಂತರ ಉಸಿರನ್ನು ಒಳಗೆಳೆದುಕೊಂಡು ಹೊರಗೆ ಬಿಡಬೇಕು. ಎರಡೂ ಕಿವಿಯ ಹಾಲೆಯನ್ನುಒತ್ತುತ್ತಾ ಕುಳಿತುಕೊಳ್ಳುವ ಭಂಗಿಯಲ್ಲಿ ನೇರವಾಗಿ ಬಗ್ಗಬೇಕು.
- ಉಸಿರನ್ನು ಹಾಗೆಯೇ ಹಿಡಿದಿಟ್ಟುಕೊಂಡು ನಿಧಾನವಾಗಿ ಎದ್ದು ನಿಲ್ಲುತ್ತಾ ಉಸಿರು ಬಿಡಬೇಕು. ಕೈಯನ್ನು ಕಿವಿಯಿಂದ ತೆಗೆಯಬಾರದು, ನಾಲಿಗೆಯ ಸ್ಥಿತಿಯೂ ಅಂತೆಯೇ ಇರಬೇಕು. ಹೀಗೆಯೇ ದಿನಕ್ಕೆ ಹದಿನೈದರಿಂದ ಇಪ್ಪತ್ತು ಬಾರಿ 'ಬಸ್ಕಿ' ಹೊಡೆದರೆ ಸುಮಾರು ಮೂರು ತಿಂಗಳಲ್ಲಿ ಉತ್ತಮ ಫಲಿತಾಂಶ
ಪಡೆಯಬಹುದು ಎನ್ನುತ್ತಾರೆ ತಜ್ಞರು.

ಪ್ರಯೋಜನಗಳು ಏನು?
- ಮೆದುಳು ಚುರುಕುಗೊಳ್ಳುತ್ತದೆ.ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಸೃಜನಶೀಲತೆ ವೃದಿಟಛಿಸುತ್ತದೆ.
- ಒತ್ತಡ ಕಡಿಮೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ; ಏಕಾಗ್ರತೆಯೂ ಹೆಚ್ಚುತ್ತದೆ. ಮಾನಸಿಕ ಸಂತುಲನೆ ಸಾಧ್ಯವಾಗುತ್ತದೆ.
- ಕೋಪ ಆವೇಶ ತಹಬಂದಿಗೆ ಬರುತ್ತದೆ.
- ಆಟಿಸಂ, ಅಲ್‌ಝೈಮರ್ ಮುಂತಾದ ತೊಂದರೆಯುಳ್ಳ ಮಕ್ಕಳು ಈ ಯೋಗಾಸನ ಕಲಿಯುವುದರಿಂದ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು  ಎನ್ನುತ್ತಾರೆ ಅಮೆರಿಕನ್ ಯೋಗ ತಜ್ಞರು.
 

loader