Asianet Suvarna News Asianet Suvarna News

ಮಟನ್ ಅಗಿಯಲು ರಬ್ಬರ್'ನಂತಿರುತ್ತಾ? ಮಾಂಸ ಮೃದುವಾಗಿಸುವ 4 ಸಿಂಪಲ್ ವಿಧಾನಗಳು

ಮಾಂಸ ಬೇಯಿಸುವುದೂ ಒಂದು ಕಲೆ. ಮಟನ್'ನ್ನು 3ಗಂಟೆಗೂ ಹೆಚ್ಚು ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ ಮೃದುವಾಗುತ್ತದೆ. ಯೂರೋಪ್'ನಲ್ಲಿ ಅಡುಗೆಗೆ ಇಂತಹ ವಿಧಾನ ಬಳಕೆಯಲ್ಲಿದೆ. ಮಾಂಸದಲ್ಲಿರುವ ಕಠಿಣ ಫೈಬರ್'ಗಳು, ಕೊಲಾಜೆನ್'ಗಳು ಕ್ರಮೇಣ ಒಡೆದುಹೋಗಿ, ಮಾಂಸ ಮೃದುಗೊಳ್ಳುತ್ತದೆ.

know how to make mutton soft and tender

ಹುಡುಕಿ ಹುಡುಕಿ ಎಳೆಯ ಮಟನ್ ತಂದಿರುತ್ತೀರಿ. ಚೆನ್ನಾಗಿ ಬೇಯಿಸಿರುತ್ತೀರಿ. ಆದರೂ ಮಾಂಸ ತಿಂದರೆ ರಬ್ಬರ್ ಜಗಿದಂತಿರುತ್ತಾ? ಮಾಂಸ ಮೃದುವಾಗಿಸುವ ಮತ್ತು ಸ್ವಾದಿಷ್ಟವಾಗಿಸುವ ಸಿಂಪಲ್ ಟೆಕ್ನಿಕ್'ಗಳನ್ನ ನೀವು ಕಲಿತುಕೊಳ್ಳಬೇಕಾದ ಅಗತ್ಯವಿದೆ. ಅಂತಹ ಕೆಲ ಪ್ರಮುಖ ತಂತ್ರಗಳು ಇಲ್ಲಿವೆ.

1) ಮಾಂಸ ಸರಿಯಾಗಿ ಕತ್ತರಿಸುವುದು:
ಮಾಂಸ ಕತ್ತರಿಸುವ ವಿಧಾನ ಬಹಳ ಪ್ರಮುಖವಾದುದು. ಮಾಂಸದಲ್ಲಿ ಮಸಲ್ ಫೈಬರ್'ಗಳಿರುವುದನ್ನು ನೀವು ನೋಡಿರುತ್ತೀರಿ. ಕತ್ತರಿಸುವಾಗ ಆ ಫೈಬರ್'ಗಳಿಗೆ ಅಡ್ಡಡ್ಡವಾಗಿ ಕತ್ತರಿಸಿರಿ. ಇಲ್ಲದಿದ್ದರೆ ನೀವು ಎಷ್ಟೇ ಬೇಯಿಸಿದರೂ ಅಗಿಯಲು ಬಹಳ ಕಷ್ಟವಾಗುತ್ತದೆ. ಅಡ್ಡಡ್ಡವಾಗಿ ಕತ್ತರಿಸಿದರೆ ಕಠಿಣವಾದ ಪ್ರೊಟೀನ್'ಗಳು ಸುಲಭವಾಗಿ ಒಡೆದುಹೋಗುತ್ತವೆ.

2) ಮಾರಿನೇಶನ್:
ಮ್ಯಾರಿನೇಡ್ ಬಗ್ಗೆ ನೀವು ಕೇಳಿರಬಹುದು. ಕೇಳಿಲ್ಲದಿದ್ದರೆ ಈಗ ತಿಳಿದುಕೊಳ್ಳಿ. ಮಾಂಸವನ್ನು ಬೇಯಿಸುವ ಮುಂಚೆ ಮೃದುವಾಗಿಸಲು ನಿರ್ದಿಷ್ಟ ಮಿಶ್ರಣಗಳಲ್ಲಿ ಗಂಟೆಗಟ್ಟಲೆ ನೆನಸಿಡುವ ವಿಧಾನವೇ ಮ್ಯಾರಿನೇಶನ್. ಇಂತಹ ಮಿಶ್ರಣಗಳು ಹಲವಿವೆ. ಮೊಸರಿನಲ್ಲಿ ನೆನಸಿಡಬಹುದು. ಹಸಿ ಪಪಾಯದ ಪೇಸ್ಟ್ ಮಾಡಿ ಅದರಲ್ಲಿ ಮಾಂಸವನ್ನಿಡಬಹುದು. ಕನಿಷ್ಠ 2 ಗಂಟೆಯಾದರೂ ನೆನಸಿಡಬೇಕು. ಆರೇಳು ಗಂಟೆ ನೆನಸಿಟ್ಟರೆ ಇನ್ನೂ ಚೆನ್ನ. ಕೆಲವರು ರಾತ್ರಿಯಿಡೀ ನೆನಸಿಟ್ಟು ಮಾರನೇ ದಿನ ಅಡುಗೆಗೆ ಬಳಸುತ್ತಾರೆ. ಮಜ್ಜಿಗೆ, ನಿಂಬೆಹುಳಿ ಅಥವಾ ಕಿವಿ ಹಣ್ಣು ಕೂಡ ಇದಕ್ಕೆ ಬಳಸಬಹುದು. ಇವಕ್ಕೆ ಉಪ್ಪು ಮತ್ತು ಪೆಪ್ಪರ್'ಗಳನ್ನ ಬೆರೆಸಿದರೆ ಇನ್ನೂ ಉತ್ತಮ ಫಲಿತಾಂಶ ಸಿಗುತ್ತದೆ. ಈ ವಸ್ತುಗಳಲ್ಲಿರುವ ಆ್ಯಸಿಡ್'ಗಳು ಮಾಂಸದಲ್ಲಿನ ಫೈಬರ್'ಗಳನ್ನು ಬ್ರೇಕ್ ಮಾಡಿ ಮೃದುವಾಗಿಸುತ್ತದೆ. ಇದರ ಜೊತೆಗೆ ನೀರಿನಂಶವೂ ಸೇರಿಕೊಂಡು ಮಾಂಸವು ಒಂದು ರೀತಿಯಲ್ಲಿ ತಿನ್ನಲು ಸ್ವಾದಿಷ್ಟವೆನಿಸುತ್ತದೆ.

3) ಸರಿಯಾಗಿ ಬೇಯಿಸುವುದು:
ಮಾಂಸ ಬೇಯಿಸುವುದೂ ಒಂದು ಕಲೆ. ಮಟನ್'ನ್ನು 3ಗಂಟೆಗೂ ಹೆಚ್ಚು ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ ಮೃದುವಾಗುತ್ತದೆ. ಯೂರೋಪ್'ನಲ್ಲಿ ಅಡುಗೆಗೆ ಇಂತಹ ವಿಧಾನ ಬಳಕೆಯಲ್ಲಿದೆ. ಮಾಂಸದಲ್ಲಿರುವ ಕಠಿಣ ಫೈಬರ್'ಗಳು, ಕೊಲಾಜೆನ್'ಗಳು ಕ್ರಮೇಣ ಒಡೆದುಹೋಗಿ, ಮಾಂಸ ಮೃದುಗೊಳ್ಳುತ್ತದೆ.

4) ಉಪ್ಪು ಬೆರೆಸುವುದು:
ನೀವು ಗಂಟೆಗಟ್ಟಲೆ ಮಾಂಸವನ್ನು ಮ್ಯಾರಿನೇಟ್ ಮಾಡಲು ಬಯಸದಿದ್ದರೆ ಇನ್ನೊಂದು ಪರ್ಯಾಯ ಮಾರ್ಗವಿದೆ. ಮಾಂಸಕ್ಕೆ ಉಪ್ಪು ಸವರಿ ಒಂದರೆಡು ಗಂಟೆ ಹಾಗೇ ಬಿಟ್ಟಿರಿ. ನಂತರ, ನೀರಿನಲ್ಲಿ ಮಾಂಸವನ್ನು ತೊಳೆದು ಅಡುಗೆಗೆ ಬಳಸಿರಿ. ಇದರಿಂದ ಮಸಲ್ ಫೈಬರ್'ಗಳು ಮೃದುವಾಗುತ್ತವೆ.

Follow Us:
Download App:
  • android
  • ios