ಬಾಲಿವುಡ್ ನಟಿ ಕರಿಷ್ಮಾ ತೆಂಗಿನಕಾಯಿ ಚಿಪ್ಪಿನಲ್ಲಿ ಇಡ್ಲಿ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ನೈಸರ್ಗಿಕ ವಿಧಾನದಿಂದ ತಯಾರಿಸಿದ ಇಡ್ಲಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ತೆಂಗಿನಕಾಯಿ ಚಿಪ್ಪಿಗೆ ಎಣ್ಣೆ ಹಚ್ಚಿ, ಹಿಟ್ಟು ಹಾಕಿ ಆವಿಯಲ್ಲಿ ಬೇಯಿಸಿ ತುಪ್ಪ, ಚಟ್ನಿಯೊಂದಿಗೆ ಸವಿಯುತ್ತಿರುವುದನ್ನು ತೋರಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಇಡ್ಲಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿನಿತ್ಯ ಬೆಳಗ್ಗೆ ತಿಂಡಿಗೆ ಇಡ್ಲಿ ಸೇವಿಸಿದರೆ ಕೆಲವರಿಗೆ ಪರಮಾನಂದ ಆಗುತ್ತದೆ. ಆದರೆ, ಈ ಇಡ್ಲಿಯನ್ನು ಬಹುವಿಧವಾಗಿ ತಯಾರಿಸಲಾಗುತ್ತದೆ. ತಟ್ಟೆ ಇಡ್ಲಿ, ಚಿಕ್ಕ ಇಡ್ಲಿ, ಮಲ್ಲಿಗೆ ಇಡ್ಲಿ, ಬಟ್ಟಲು ಇಡ್ಲಿಯನ್ನು ನೀವು ತಿಂದಿರುತ್ತೀರಿ. ಇಲ್ಲವೆಂದರೆ ಕೇಳಿರುತ್ತೀರಿ. ಆದರೆ, ಇಲ್ಲಿ ಬಾಲಿವುಡ್ ನಟಿಯೊಬ್ಬರು ನೈಸರ್ಗಿಕ ಆಹಾರಕ್ಕೆ ಒತ್ತುಕೊಟ್ಟಿದ್ದು, ತೆಂಗಿನಕಾಯಿ ಚಿಪ್ಪಿನಲ್ಲಿ ಇಡ್ಲಿಯನ್ನು ಮಾಡಿದ್ದಾರೆ. ಈ ಇಡ್ಲಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ನೆಟ್ಟಿಗರಿಂದ ಶಹಭಾಶ್‌ಗಿರಿ ತೆಗೆದುಕೊಂಡಿದ್ದಾರೆ.
ಇಡ್ಲಿ ಪ್ರಿಯರೇ? ಇಡ್ಲಿ ದಕ್ಷಿಣ ಭಾರತದ ಬಹಳ ಜನಪ್ರಿಯ ಬೆಳಗಿನ ತಿಂಡಿ. ಆರೋಗ್ಯಕ್ಕೂ ಒಳ್ಳೆಯದು. ಎಣ್ಣೆ ಕಡಿಮೆ ಬಳಸಿ, ಆವಿಯಲ್ಲಿ ಬೇಯಿಸುವುದರಿಂದ ಕ್ಯಾಲೋರಿ ಕೂಡ ಕಡಿಮೆ ಆಗುತ್ತದೆ. ಈಗ ತೆಂಗಿನಕಾಯಿ ಚಿಪ್ಪಿನಲ್ಲಿ ಇಡ್ಲಿ ಮಾಡೋ ವಿಡಿಯೋ ವೈರಲ್ ಆಗಿದೆ. ನಟಿ ಕರಿಷ್ಮಾ ತನ್ನ ಈ ವಿಡಿಯೋ ಶೇರ್ ಮಾಡಿದ್ದಾರೆ. 'ಟ್ರೈ ಮಾಡಿ.. ಯಮ್ಮಿ..' ಅಂತ ಹೇಳ್ತಾ ವಿಡಿಯೋ ಶೇರ್ ಮಾಡಿದ್ದಾರೆ. ಕ್ಲೀನ್ ಆಗಿರೋ ತೆಂಗಿನಕಾಯಿ ಚಿಪ್ಪಿಗೆ ಎಣ್ಣೆ ಹಚ್ಚಿ, ಅರ್ಧದಷ್ಟು ಹಿಟ್ಟು ಹಾಕಿ ಆವಿಯಲ್ಲಿ ಬೇಯಿಸಿದ್ದಾರೆ. ಬೆಂದ ನಂತರ ತುಪ್ಪ, ಚಟ್ನಿ ಹಾಕಿ ತಿಂದಿದ್ದಾರೆ.
ವಿಡಿಯೋಗೆ ಲೈಕ್ಸ್, ಕಮೆಂಟ್ಸ್ ಹರಿದು ಬಂದಿವೆ. ಚಿಪ್ಪಿನಲ್ಲಿ ಇಡ್ಲಿ ಮಾಡೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಟ್ರೈ ಇಟ್ ಯಮ್ಮಿ ಕೊಕನಟ್ ಶೆಲ್ ಇಡ್ಲೀ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆಗೆ, ಹ್ಯಾಪಿ ಸಂಡೇ ಎಂದು ಕೂಡ ಬರೆದುಕೊಂಡಿದ್ದಾರೆ. ಇನ್ನು ಕೆಲವರಿಗೆ ಉತ್ತರ ಭಾರತದವರಿಗೆ ಇಡ್ಲಿ ಬಗ್ಗೆಯೇ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಬಿಳಿಯ ಬಣ್ಣದ್ದು ಏನಿದು? ಎಂದು ಪ್ರಶ್ನೆ ಮಾಡಿದ್ದಾರೆ.
