ಇತ್ತೀಚೆಗೆ ಫೋಟೋಶೂಟ್ ಮಾಡಿಸುವುದೇ ಒಂದು ಕ್ರೇಜ್ ಆಗಿದೆ. ಇದಕ್ಕಾಗಿ ಏನು ಮಾಡಲೂ ಸಿದ್ದರಾಗಿರುತ್ತಾರೆ. ಫೋಟೋಗ್ರಾಫರ್'ಗೆ ಫೋಟೋ ಉತ್ತಮವಾಗಿ ಬರಬೇಕು ಎಂಬ ಯೋಚನೆಯಾದರೆ ಫೋಟೋ ತೆಗೆಸಿಕೊಳ್ಳುವವರಿಗೆ ತಮ್ಮ ಫೋಟೋ ಭಿನ್ನವಾಗಿರಬೇಕೆಂಬ ತುಮುಲ. ಈ ಕ್ರೇಜ್'ನಿಂದಾಗಿ ನೀರಿಗೆ ಹಾರುವುದರಿಂದ ಹಿಡಿದು ಆಕಾಶದಲ್ಲಿ ಹಾರಾಟ ನಡೆಸಲೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಇವೆಲ್ಲವನ್ನೂ ಮೀರಿಸಿ ಮದುಮಗಳ ಬಟ್ಟೆಗೇ ಬೆಂಕಿ ಹಚ್ಚಿದ ಘಟನೆ ಚೀನಾದಲ್ಲಿ ನಡೆದಿದೆ. ಆದರೆ ಈ ವೇಳೆ ಮದುಮಗಳು ಶಾಂತಳಾಗಿ ಫೋಟೋಗೆ ಫೋಸ್ ಕೊಟ್ಟಿರುವುದು ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಬೀಜಿಂಗ್(ಮೇ.19): ಇತ್ತೀಚೆಗೆ ಫೋಟೋಶೂಟ್ ಮಾಡಿಸುವುದೇ ಒಂದು ಕ್ರೇಜ್ ಆಗಿದೆ. ಇದಕ್ಕಾಗಿ ಏನು ಮಾಡಲೂ ಸಿದ್ದರಾಗಿರುತ್ತಾರೆ. ಫೋಟೋಗ್ರಾಫರ್'ಗೆ ಫೋಟೋ ಉತ್ತಮವಾಗಿ ಬರಬೇಕು ಎಂಬ ಯೋಚನೆಯಾದರೆ ಫೋಟೋ ತೆಗೆಸಿಕೊಳ್ಳುವವರಿಗೆ ತಮ್ಮ ಫೋಟೋ ಭಿನ್ನವಾಗಿರಬೇಕೆಂಬ ತುಮುಲ. ಈ ಕ್ರೇಜ್'ನಿಂದಾಗಿ ನೀರಿಗೆ ಹಾರುವುದರಿಂದ ಹಿಡಿದು ಆಕಾಶದಲ್ಲಿ ಹಾರಾಟ ನಡೆಸಲೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಇವೆಲ್ಲವನ್ನೂ ಮೀರಿಸಿ ಮದುಮಗಳ ಬಟ್ಟೆಗೇ ಬೆಂಕಿ ಹಚ್ಚಿದ ಘಟನೆ ಚೀನಾದಲ್ಲಿ ನಡೆದಿದೆ. ಆದರೆ ಈ ವೇಳೆ ಮದುಮಗಳು ಶಾಂತಳಾಗಿ ಫೋಟೋಗೆ ಫೋಸ್ ಕೊಟ್ಟಿರುವುದು ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಫೋಟೋಗ್ರಫಿ ವೇಳೆ ವಿಡಿಯೋ ಕೂಡಾ ಸೆರೆಹಿಡಿಯುತ್ತಿದ್ದರಿಂದ ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಫೋಟೋಗ್ರಾಫರ್ ಫೋಟೋ ಚೆನ್ನಾಗಿ ಬರಬೇಕೆಂದು ಮದುಮಗಳ ಬಟ್ಟೆಗೇ(ಗೌನ್) ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮದುಮಗಳೂ ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಶಾಂತಳಾಗಿ ಫೋಸ್ ನೀಡಿದ್ದಾಳೆ. ಆದರೆ ಬೆಂಕಿ ನೋಡ ನೋಡುತ್ತಿದ್ದಂತೆ ನಿಯಂತ್ರಣಕ್ಕಿಂತ ಹೊರ ಹೋಗುತ್ತದೆ. ಅಲ್ಲಿಯವರೆಗೂ ಶಾಂತಳಾಗಿದ್ದ ಮದುಮಗಳು ಆ ವೇಳೆ ಸ್ವಲ್ಪ ಗಾಬರಿಬೀಳುತ್ತಾಳೆ. ಅದೃಷ್ಟವಶಾತ್ ಅಲ್ಲಿದ್ದ ಮಹಿಳೆ ಸರಿಯಾದ ಸಮಯಕ್ಕೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಕೊಂಚ ಯಾಮಾರಿದ್ದರೂ ಮದುಮಗಳು ನೇರವಾಗಿ ಮಸಣಕ್ಕೆ ತಲುಪುತ್ತಿದ್ದಳೆಂದರೆ ಇಲ್ಲಿ ತಪ್ಪಾಗುವುದಿಲ್ಲ.

ಈ ವಿಡಿಯೋ ನೋಡಿದ ಬಳಿಕ ಕೇವಲ ಒಂದು ಫೋಟೋಗಾಗಿ ಜೀವವನ್ನೇ ಪಣಕ್ಕಿಡುವುದು ಎಷ್ಟು ಸಮಂಜಸ ಎನ್ನುವುದನ್ನು ಯೋಚಿಸಲೇಬೇಕಿದೆ.