ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್ ಟ್ವಿಟರ್'ನಲ್ಲಿ ಇತ್ತೀಚೆಗೆ ಯುವಕನೊಬ್ಬ ಕಾರಿನ ಮೇಲಿನಿಂದ ಮಾಡಿದ 'ಬ್ಯಾಕ್ ಲಿಫ್ಟ್' ವೈರಲ್ ಆಗುತ್ತಿದೆ. ವಾಸ್ತವವಾಗಿ ಈ ಯುವಕ ಅಂದುಕೊಂಡಂತೆ 'ಬ್ಯಾಕ್ ಲಿಫ್ಟ್' ಏನೋ ಸರಿಯಾಗೇ ಮಾಡಿದ್ದಾನೆ. ಆದರೆ ಲ್ಯಾಂಡಿಗ್ ವೇಳೆ ಆಯತಪ್ಪಿದ್ದರಿಂದ ಕೂದಲೆಳೆಯ ಅಂತರದಲ್ಲಿ ಆತನ ಪ್ರಾಣ ಉಳಿದಿದೆ. ಹಾಗಾದ್ರೆ ಲ್ಯಾಂಡಿಂಗ್ ವೇಳೆ ನಡೆದಿದ್ದೇನು ಅಂತೀರಾ? ಇಲ್ಲಿದೆ ನೋಡಿ ಆ ದೃಶ್ಯ
ನವದೆಹಲಿ(ಮೇ.16): ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್ ಟ್ವಿಟರ್'ನಲ್ಲಿ ಇತ್ತೀಚೆಗೆ ಯುವಕನೊಬ್ಬ ಕಾರಿನ ಮೇಲಿನಿಂದ ಮಾಡಿದ 'ಬ್ಯಾಕ್ ಲಿಫ್ಟ್' ವೈರಲ್ ಆಗುತ್ತಿದೆ. ವಾಸ್ತವವಾಗಿ ಈ ಯುವಕ ಅಂದುಕೊಂಡಂತೆ 'ಬ್ಯಾಕ್ ಲಿಫ್ಟ್' ಏನೋ ಸರಿಯಾಗೇ ಮಾಡಿದ್ದಾನೆ. ಆದರೆ ಲ್ಯಾಂಡಿಗ್ ವೇಳೆ ಆಯತಪ್ಪಿದ್ದರಿಂದ ಕೂದಲೆಳೆಯ ಅಂತರದಲ್ಲಿ ಆತನ ಪ್ರಾಣ ಉಳಿದಿದೆ. ಹಾಗಾದ್ರೆ ಲ್ಯಾಂಡಿಂಗ್ ವೇಳೆ ನಡೆದಿದ್ದೇನು ಅಂತೀರಾ? ಇಲ್ಲಿದೆ ನೋಡಿ ಆ ದೃಶ್ಯ
ಟ್ವಿಟರ್'ನಲ್ಲಿ @TommyFrmBroward ಎಂಬಾತ ತನ್ನ ಗೆಳೆಯ ಮಾಡುವ 'ಬ್ಯಾಕ್ ಲಿಫ್ಟ್'ನ ಈ ದೃಶ್ಯಗಳನ್ನು ಟ್ವಿಟರ್'ಗೆ ಅಪ್ಲೋಡ್ ಮಾಡಿದ್ದಾನೆ. ಇದರೊಂದಿಗೆ 'ನನ್ನ ಗೆಳೆಯ ಸರಿಸುಮಾರು ಆತನ ಪ್ರಣ ಕಳೆದುಕೊಳ್ಳುವುದರಲ್ಲಿದ್ದ' ಎಂದು ಬರೆದುಕೊಂಡಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಕಾರಿನ ಡಿಕ್ಕಿಯ ಮೇಲೆ ನಿಂತು ಸ್ಟಂಟ್ ಮಾಡಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದ. ಒಂದು ವೇಳೆ ಆತನ ಲ್ಯಾಂಡಿಗ್ ಸರಿಯಾಗಿದ್ದಿದ್ದರೆ ಆತ ಮಾಡಿದ ಸ್ಟಂಟ್ ಪರ್ಫೆಕ್ಟ್ ಅನ್ನಬಹುದಿತ್ತೇನೋ, ಆದರೆ ಆತನ ಲ್ಯಾಂಡಿಂಗ್ ವೇಳೆ ಆಯತಪ್ಪಿದ್ದರಿಂದ ಹಿಂಬದಿಯಲ್ಲಿದ್ದ ರಸ್ತೆಗೆ ಉರುಳಿದ್ದಾನೆ. ಇನ್ನೇನು ಏಳಬೇಕು ಎನ್ನುವಷ್ಟರಲ್ಲಿ ಕೂದಲೆಳೆಯ ಅಂತರದಲ್ಲಿ ವೇಗವಾಗಿ ಕಾರೊಂದು ಹೋಗುತ್ತದೆ. ಒಂದು ವೇಳೆ ಯುವಕ ಒಂದೆರಡಿಂಚು ಹಿಂದೆ ಬಿದ್ದಿದ್ದರೂ ಆತನ ಸ್ಟಂಟ್ ಜೀವಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳಿದ್ದವು.
ಈ ವಿಡಿಯೋ ಟ್ವಿಟರ್'ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೋಡುಗರೆಲ್ಲರೂ 'ಅದೃಷ್ಟವಂತ, ಕೂದಲೆಳೆಯಲ್ಲಿ ಪಾರಾದ' ಎಂಬ ಉದ್ಗಾರವನ್ನೇ ತೆಗೆಯುತ್ತಿದ್ದಾರೆ. ಇನ್ನು ವಿಡಿಯೋದಲ್ಲಿ ಇವೆಲ್ಲದರ ಬಳಿಕ ಯುವಕನ ಮುಖಭಾವ ನೋಡಿದರೂ ಇನ್ಯಾವತ್ತೂ ಇಂತಹ ಸಾಹಸಕ್ಕೆ ಮುಂದಾಗುವುದಿಲ್ಲ ಎಂಬಂತಿದೆ.
ಈಗಿನ ಜನರೇಷನ್'ನ ಯುವಕರಿಗೆ ಸ್ಟಂಟ್ ಮಾಡುವುದೇ ಒಂದು ಕ್ರೇಜ್, ಇಂತಹ ಕ್ರೇಜ್ ಇರುವವರು ಈ ವಿಡಿಯೋ ನೋಡಲೇಬೇಕು. ಸ್ಟಂಟ್ ಮಾಡುವ ಮೊದಲು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಳಿಕ ಇಂತಹ ಸಾಹಸಕ್ಕೆ ಮುಂದಾದರೆ ಎಲ್ಲರಿಗೂ ನೆಮ್ಮದಿ.
