ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..!

ಬಾಲ್ಯದ ಕನಸಿನ ಹಿಂದೆ ಬಿದ್ದ ಟೆಕ್ಕಿಯೊಬ್ಬ ತೋಳ ಆಗಿದ್ದಾನೆ. ಹೌದು, ಜಪಾನ್‌ನ ವ್ಯಕ್ತಿ ತನ್ನನ್ನು ತೋಳವಾಗಿ ಪರಿವರ್ತಿಸಿಕೊಳ್ಳುವ ಮೂಲಕ ತನ್ನ ಬಾಲ್ಯದ ಕನಸನ್ನು ಜೀವಿಸುತ್ತಿದ್ದಾನೆ. ಇದಕ್ಕೆ 20 ಲಕ್ಷ ರೂ. ಖರ್ಚು ಮಾಡಿದ್ದಾನೆ. 

japan man spends 20 lakh rs to transform into wolf powerful experience ash

ಟೋಕಿಯೋ (ಜುಲೈ 31, 2023): ಒಬ್ಬೊಬ್ಬರಿಗೂ ಒಂದೊಂದು ರೀತಿ ಕನಸಿರುತ್ತದೆ. ಅದ್ರಲ್ಲೂ ಚಿಕ್ಕವರಿದ್ದಾಗ ನಾವು ಏನೇನೋ ಆಗ್ಬೇಕು ಅಂತ ಇರ್ತೀವಿ. ಆದರೆ, ಅದೇ ಬಾಲ್ಯದ ಕನಸಿನ ಹಿಂದೆ ಬಿದ್ದ ಟೆಕ್ಕಿಯೊಬ್ಬ ತೋಳ ಆಗಿದ್ದಾನೆ. ಹೌದು, ಜಪಾನ್‌ನ ವ್ಯಕ್ತಿ ತನ್ನನ್ನು ತೋಳವಾಗಿ ಪರಿವರ್ತಿಸಿಕೊಳ್ಳುವ ಮೂಲಕ ತನ್ನ ಬಾಲ್ಯದ ಕನಸನ್ನು ಜೀವಿಸುತ್ತಿದ್ದಾನೆ.  

ಯುಕೆ ಮೂಲದ ದಿ ಟೈಮ್ಸ್ ಪ್ರಕಾರ, ಎಂಜಿನಿಯರ್ ಆಗಿರುವ, ಟೋರು ಉಯೆಡಾ ಅವರು ಕಸ್ಟಮ್ ವುಲ್ಫ್ ವೇಷಭೂಷಣಕ್ಕಾಗಿ ಮೂರು ಮಿಲಿಯನ್ ಯೆನ್ ಅಂದರೆ ಸುಮಾರು 20 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಈ ಸೂಟ್ ಅನ್ನು ಅವರಿಗೆ ತಲುಪಿಸಲಾಗಿದ್ದು, ಮತ್ತು ಅವರು ಅದನ್ನು ಧರಿಸಿ ಸಿಕ್ಕಾಪಟ್ಟೆ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. 

ಇದನ್ನು ಓದಿ: Viral Video : ನಾಯಿಯಾಗಿ ಬದಲಾದ ಮನುಷ್ಯನ ವಾಕಿಂಗ್ ವೀಡಿಯೋ ವೈರಲ್

ಚಲನಚಿತ್ರ ಮತ್ತು ಟಿವಿ ಉದ್ಯಮಗಳಿಗೆ ವೇಷಭೂಷಣಗಳು ಮತ್ತು ಅಂಕಿಅಂಶಗಳನ್ನು ಒದಗಿಸುವ ವಿಶೇಷ ನಿರ್ಮಾಣ ಮತ್ತು ಮಾಡೆಲಿಂಗ್ ಕಂಪನಿಯಾದ ಜೆಪ್ಪೆಟ್ ವರ್ಕ್‌ಶಾಪ್‌ ಅವರಿಗೆ ಈ ಸೂಟ್ ಅನ್ನು ರಚಿಸಿದ್ದು, ಎಂಜಿನಿಯರ್ ಕಥೆ ಈಗ ಮತ್ತೆ ವೈರಲ್ ಆಗಿದೆ.  ಕಂಪನಿಯ ನಾಲ್ಕು ಉದ್ಯೋಗಿಗಳು ತೋಳದ ಸೂಟ್‌ ರೆಡಿ ಮಾಡಲು 7 ವಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ದೊಡ್ಡ ವೆಚ್ಚದ ಹೊರತಾಗಿಯೂ, ಟೋರು ಉಯೆಡಾ ಅವರು ಅಲಂಕಾರಿಕ ಡ್ರೆಸ್ ಪಾರ್ಟಿಗಳಿಗೆ ಅದನ್ನು ಧರಿಸುವುದಿಲ್ಲ ಎಂದು ತಿಳಿದುಬಂದಿದೆ. ಏಕೆಂದರೆ, ತೋಳದ ಸೂಟ್‌ನಲ್ಲಿ ನಡೆಯೋಕೆ ನನಗೆ ಅನಾನುಕೂಲವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

ಆದರೆ, ವಿಶ್ರಾಂತಿ ಪಡೆಯಲು ಮತ್ತು ತಮ್ಮ ತೊಂದರೆಗಳನ್ನು ಮರೆಯಲು ಮನೆಯಲ್ಲಿ ಆ ವೇಷ ತೊಡುತ್ತೇನೆ ಎಂದು 32 ವರ್ಷದ ವ್ಯಕ್ತಿ ಹೇಳಿಕೊಂಡಿದ್ದಾರೆ. "ನಾನು ನನ್ನ ವೇಷಭೂಷಣವನ್ನು ಧರಿಸಿದಾಗ ನಾನು ಇನ್ನು ಮುಂದೆ ಮನುಷ್ಯನಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಟೋರು ಉಯೆಡಾ ಜನವರಿಯಲ್ಲಿ ಟೈಮ್ಸ್‌ಗೆ ತಿಳಿಸಿದ್ದರು.
ಅಲ್ಲದೆ, ಆ ವೇಳೆ "ನಾನು ಮಾನವ ಸಂಬಂಧಗಳಿಂದ ಮುಕ್ತನಾಗುತ್ತೇನೆ. ಕೆಲಸ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳನ್ನು ನಾನು ಮರೆತುಬಿಡಬಹುದು" ಎಂದೂ ಅವರು ಹೇಳಿದರು.

ಅಲ್ಲದೆ, ತೋಳದ ಸೂಟ್‌ ಧರಿಸುವುದು ತನಗೆ "ಶಕ್ತಿಯುತ ಅನುಭವ" ಎಂದೂ ಅವರು ಹೇಳಿದರು. "ನಾನು ಕನ್ನಡಿಯಲ್ಲಿ ನೋಡಿದಾಗ, ನಾನು ತೋಳವನ್ನು ನೋಡುತ್ತೇನೆ. ಆದರೆ, ನಾನು ವಿಯರ್‌ವುಲ್ಫ್‌ ಅಲ್ಲ  - ಅದು ಒಂದು ರೀತಿಯ ಮಾನ್ಸ್ಟರ್‌. ಮತ್ತು ನಾನು  ಮಾನ್ಸ್ಟರ್‌ ಅಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!
.
ಇನ್ನು, ಜೆಪ್ಪೆಟ್ ತಂಡದೊಂದಿಗಿನ ಸಭೆಗಳ ಸಂದರ್ಭದಲ್ಲಿ, ಟೋರು ಉಯೆಡಾ ಅವರು ಮಾನವ ಗಾತ್ರದ ಸೂಟ್ ಸಾಧ್ಯವಾದಷ್ಟು ವಾಸ್ತವಿಕವಾಗಿರಬೇಕೆಂದು ಬಯಸಿದ್ದರು. ಅಲ್ಲದೆ, ಸಾಮಾನ್ಯವಾಗಿ ನಡೆಯಲು ಸಾಧ್ಯವಾಗುವಂತೆ ಮಾಡಲೂ ಸಹ ಅವಕಾಶ ಕೋರಿದ್ದರಂತೆ. 

ಈ ಮಧ್ಯೆ, ಅದೇ ಕಂಪನಿಯು ಜಪಾನ್‌ನಲ್ಲಿ ನಾಯಿಯಂತೆ ಕಾಣಲು ಬಯಸುವ ಇನ್ನೊಬ್ಬ ವ್ಯಕ್ತಿಗೆ ಸೂಟ್ ಮಾಡಿದೆ. ಹೈಪರ್ ರಿಯಲಿಸ್ಟಿಕ್ ವೇಷಭೂಷಣವು ಮನುಷ್ಯನನ್ನು ತನ್ನ ಗುರುತು ಮರೆಯಾಗಿ ಉಳಿಯುವಂತೆ ಮಾಡುತ್ತದೆ. ಹಾಗೂ, ಈ ವೇಷಭೂಷಣವು ಹರ್ಡಿಂಗ್ ನಾಯಿಗಳ ತಳಿಯಾದ ಕೋಲಿಯಂತೆ ಕಾಣುವಂತೆ ಮಾಡಿತು.

ಈ ವ್ಯಕ್ತಿ ಇತ್ತೀಚೆಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಹೆಜ್ಜೆ ಹಾಕುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವೀಕ್ಷಕರು ಮಾನವ ಕೋಲಿಯನ್ನು ನೋಡಿ ಭಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

Latest Videos
Follow Us:
Download App:
  • android
  • ios