ಜಪಾನೀಸ್ ಮಕ್ಕಳು ಖುಷ್ ಖುಷಿಯಾಗಿರೋದು ಹೇಗೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 4:26 PM IST
Japan kids are the most happiest kids in the world
Highlights

ಮಕ್ಕಳು ಸದಾ ಖುಷಿಯಾಗಿಯೇ ಇರ್ತಾರೆ. ಪೋಷಕರು ಬೈದರೂ, ಆ ನೋವು ಇರುವುದು ಮಾತ್ರ ಕೆಲವೇ ಕ್ಷಣಗಳು. ಮತ್ತೆ ಮುಖದಲ್ಲಿ ನಗು ಹುಟ್ಟುತ್ತೆ. ಆದರೆ, ದೊಡ್ಡವರಾದ ಹಾಗೆ ಪೋಷಕರು ಮಕ್ಕಳನ್ನು ಖುಷಿಯಾಗಿಡಲು ಹರ ಸಾಹಸ ಪಡಬೇಕು! ಆದರೆ ಅದು ಕಷ್ಟವಲ್ಲ, ಹೇಗೆ?

ಜಪಾನ್‌ನಲ್ಲಿ ಹುಟ್ಟೋ ಮಕ್ಕಳು ಬೇರೆ ಮಕ್ಕಳಿಗಿಂತ ಹೆಚ್ಚು ಖುಷಿಯಾಗಿರುತ್ತವಂತೆ. ಅದಕ್ಕೆ ಬೇರೆ ದೇಶದ ಮಕ್ಕಳಿಗೆ ಹೋಲಿಸಿದಲ್ಲಿ, ಈ ದೇಶದ ಮಕ್ಕಳೂ ಆರೋಗ್ಯವಾಗಿರ್ತವಂತೆ. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ತೋರುವುದಲ್ಲದೇ, ಉತ್ತಮ ಬಾಂಧವ್ಯ ಹೊಂದಿರುವುದರಿಂದ ಮಕ್ಕಳ ಖುಷಿ ಲೆವೆಲ್ ಹೆಚ್ಚಾಗಿರುತ್ತಂತೆ! ಮಕ್ಕಳನ್ನು ಖುಷಿಯಾಗಿಡಲು ಅಲ್ಲಿನ ಪೋಷಕರೇನು ಮಾಡುತ್ತಾರೆ?

ಹೊಸ ರುಚಿ ಪ್ರಯೋಗ

ಒಂದೇ ಬಗೆಯ ಆಹಾರ ಸೇವಿಸಿದರೆ ಮತ್ತದನ್ನೇ ತಿನ್ನಲು ಮಕ್ಕಳು ರಚ್ಚೆ ಹಿಡಿಯುತ್ತಾರೆ. ಅದಕ್ಕೆ ವಾರ ವಾರವೂ ವಿಭಿನ್ನ ರುಚಿ ಅಡುಗೆ ಮಾಡುತ್ತಾರಂತೆ ಅಲ್ಲಿನ ಪೋಷಕರು. 

ತಿನ್ಲಿಕ್ಕೆ ಮಾಡೋಲ್ಲ ಫೋರ್ಸ್

ಮಕ್ಕಳು ತಾವು ಇಷ್ಟ ಪಟ್ಟ ರೀತಿಯಲ್ಲಿ ತಿನ್ನುವುದರಿಂದ ಊಟದ ಮೇಲೆ ಹೆಚ್ಚು ಪ್ರೀತಿ ಹುಟ್ಟುತ್ತದೆ. ಕಟ್ಟುನಿಟ್ಟಾಗಿ ವರ್ತಿಸಿದರೆ ಅವರು ಆಹಾರದ ಮೇಲೆ ಅಗೌರವ ತೋರುತ್ತಾರೆಂಬುವುದು ಅಲ್ಲಿನ ಪೋಷಕರು ಅರ್ಥ ಮಾಡಿಕೊಂಡಿದ್ದಾರೆ. 

ಚಿಕ್ಕ ತಟ್ಟೆಯಲ್ಲಿ ಆಹಾರ ನೀಡಿ

ದೊಡ್ಡದಾದ ತಟ್ಟೆ ಬಳಸುವುದರಿಂದ ಅದರಲ್ಲಿ ನೀಡಿದ ಆಹಾರ ಮಕ್ಕಳಿಗೆ ಹೆಚ್ಚೆನಿಸುತ್ತದೆ. ಚಿಕ್ಕ ತಟ್ಟೆಯಾದರೆ ಆಹಾರವು ಕಡಿಮೆ ಪ್ರಮಾಣದಂತೆ ಕಾಣುತ್ತದೆ. ಅವರಿಗೆಲ್ಲಿ ಇಷ್ಟವೋ ಅಲ್ಲಿ ಕೂತು ತಿನ್ನಲು ಅವಕಾಶ ಮಾಡಿ ಕೊಡಿ.

ಅಡುಗೆ ಮನೆಯಲ್ಲಿ ಮಕ್ಕಳಿರಲಿ...

ಅಡುಗೆ ತಯಾರಿಸುವಾಗ ಮಕ್ಕಳನ್ನು ಸೇರಿಸಿಕೊಳ್ಳಿ. ಅಡುಗೆ ಮಾಡುವುದ ನೋಡಿದಾಗ, ತಿನ್ನುವ ಆಸೆಯೂ ಹೆಚ್ಚುತ್ತೆ ಮಕ್ಕಳಿಗೆ. 

ಮಕ್ಕಳೊಂದಿಗೆ ಆಟವಾಡಿ..

ಮಕ್ಕಳೊಂದಿಗೆ ಹೆಚ್ಚಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ. ರನ್ನಿಂಗ್ ಮತ್ತು ಜಂಪಿಂಗ್ ಅನ್ನು ಮಕ್ಕಳು ಖುಷಿಯಾಗಿ ಮಾಡುತ್ತಾರೆ. ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಭಾಗಿಯಾಗುವಂತೆ ನೋಡಿಕೊಳ್ಳಿ. ಆಗ,  ಹಸಿವು ಹೆಚ್ಚಾಗಿ, ಚೆನ್ನಾಗಿ ಊಟ ಮಾಡುತ್ತಾರೆ.

loader