ಗಾಢ ಬಣ್ಣದ ಒಳ ಉಡುಪು ಬಳಸುವ ಮಹಿಳೆಯರು ಒಳ ವಸ್ತ್ರದಲ್ಲಿ ಬ್ಲೀಚ್ ಕಲೆಯಾಗಿದ್ದನ್ನು ನೋಟಿಸ್ ಮಾಡಿರಬಹುದು. ಇದು ನಿಮ್ಮ ಆತಂಕಕ್ಕೂ ಕಾರಣವಾಗಿರಬಹುದು. ಆದರೆ ಹೆದರುವ ಅವಶ್ಯಕತೆ ಇಲ್ಲ. ಇದಕ್ಕೆ ಕಾರಣ ವಜೈನಲ್ ಡಿಸ್ಚಾರ್ಜ್. 

ವಜೈನಲ್ ಡಿಸ್ಚಾರ್ಜ್‌ನಲ್ಲಿರುವ ಅಸಿಡಿಕ್ ಗುಣ ಪ್ಯಾಂಟಿಯಲ್ಲಿ ಕೇಸರಿ ಅಥವಾ ಬಿಳಿ ಕಲೆಯನ್ನು ಉಂಟು ಮಾಡುತ್ತದೆ. ಆದರೆ ನೀವು ಇದಕ್ಕೆ ಭಯ ಪಡಬೇಕಾಗಿಲ್ಲ. ಸಾಮಾನ್ಯವಾಗಿ ವಜೈನಾದಲ್ಲಿ ಅಸಿಡಿಕ್ ಅಂಶ ಇರುತ್ತದೆ. ಅದರಲ್ಲಿ ಲೋ ಪಿಎಚ್ ಲ್ಯಾಕ್ಟೋಬ್ಯಾಸಿಲಿ ಇರುತ್ತದೆ. ವಜೈನದಲ್ಲಿರುವ ಗುಡ್ ಬ್ಯಾಕ್ಟೀರಿಯಾ ಪಿಎಚ್ ಲೆವೆಲ್ ಸರಿಯಾಗಿರುವಂತೆ ಹಾಗೂ ಯಾವುದೇ ಇನ್ಫೆಕ್ಷನ್ ಬಾರದಂತೆ ನೋಡಿಕೊಳ್ಳುತ್ತದೆ. ಇದರಿಂದಲೇ ಅಂಡರ್‌ವೇರ್‌ನಲ್ಲಿ ಬ್ಲೀಚ್ ಕಲೆ ಕಾಣಿಸಿಕೊಳ್ಳುತ್ತದೆ.  

ಯೋನಿ ಬಗ್ಗೆ ನೀವು ನಂಬಿರುವ ಸುಳ್ಳುಗಳಿವು

ಇದು ಸಮಸ್ಯೆಯೇ? 

ಈ ರೀತಿ ಆಗುವುದರಿಂದ ಏನಾದರೂ ಸಮಸ್ಯೆ ಇದೆಯೇ ಎಂದು ನಿಮಗೆ ಅನಿಸಬಹುದು. ಖಂಡಿತಾ ಇಲ್ಲ, ಎನ್ನುತ್ತಾರೆ ವೈದ್ಯರು. ಆದರೆ, ಕೆಟ್ಟ ಸ್ಮೆಲ್ ಬರಬಾರದು. ಜೊತೆಗೆ ಬೇರೆ ಬಣ್ಣದಲ್ಲಿದ್ದರೆ ಮಾತ್ರ ಅಲರ್ಟ್ ಆಗಬೇಕು. ಇಲ್ಲವಾದರೆ ಇದು ವಜೈನಾವನ್ನು ಕ್ಲೀನ್ ಮಾಡುವ ಒಂದು ನೈಸರ್ಗಿಕ ವಿಧಾನವಷ್ಟೇ.

ವೆಜೈನಲ್ ಇನ್ಫೆಕ್ಷನ್; ಪರಿಹಾರ ಏನು?

ಇದರಿಂದ ನಿಮ್ಮ ಪ್ಯಾಂಟಿ ಹಾಳಾಗುತ್ತದೆ ಎಂದು ನಿಮಗೆ ಅನಿಸಿದರೆ ಪ್ಯಾಂಟಿ ಲೈನರ್ ಬಳಸಿ. ಅಥವಾ ತಿಳಿ ಬಣ್ಣದ ಅಂಡರ್ ವೇರ್ ಬಳಸಿದರೆ ಕಲೆಯಾಗಿದ್ದು ಗೊತ್ತಾಗುವುದಿಲ್ಲ.