Asianet Suvarna News Asianet Suvarna News

ಗರ್ಭಿಣಿ ಲೈಂಗಿಕ ಕ್ರಿಯೆ ನಡೆಸಿದರೆ ಪ್ರಸವ ಸುಲಭವಾಗುತ್ತಾ?

ಗರ್ಭ ಧರಿಸುವಿಕೆಯಿಂದ ಹೆರಿಗೆ ಆಗುವವರೆಗಿನ ಅವಧಿ ಬಹಳ ಸೂಕ್ಷ್ಮದ್ದು. ಆ ಹೊತ್ತಲ್ಲಿ ಗರ್ಭಿಣಿ ಅನುಭವಿಸುವ ಸಂಕಟ ನಿವಾರಣೆಯಿಂದ, ಬದಲಾಗಬೇಕಾದ ಆಹಾರ ಪದ್ಧತಿವರೆಗಿನ ಸಂದೇಹಗಳಿಗೆ ತಜ್ಞ ವೈದ್ಯರು ಉತ್ತರಿಸಿದ್ದಾರೆ. 

is it okay if pregnancy woman having sex

- ಡಾ. ಶ್ರೀಪ್ರದಾ

ಗರ್ಭ ಧರಿಸುವಿಕೆಯಿಂದ ಹೆರಿಗೆ ಆಗುವವರೆಗಿನ ಅವಧಿ ಬಹಳ ಸೂಕ್ಷ್ಮದ್ದು. ಆ ಹೊತ್ತಲ್ಲಿ ಗರ್ಭಿಣಿ ಅನುಭವಿಸುವ ಸಂಕಟ ನಿವಾರಣೆಯಿಂದ, ಬದಲಾಗಬೇಕಾದ ಆಹಾರ ಪದ್ಧತಿವರೆಗಿನ ಸಂದೇಹಗಳಿಗೆ ತಜ್ಞ ವೈದ್ಯರು ಉತ್ತರಿಸಿದ್ದಾರೆ. 

ಗರ್ಭಿಣಿ ಆರಂಭಿಕ ದಿನಗಳಲ್ಲಿ ದೈಹಿಕ, ಮಾನಸಿಕ ಸಮಸ್ಯೆ ಅನುಭವಿಸೋದು ಅನಿವಾರ್ಯವಾ?
ಈ ಸಮಸ್ಯೆ ಎಲ್ಲರಿಗೂ ಬರುತ್ತೆ ಅನ್ನಲಿಕ್ಕಾಗದು. ಆದರೆ ಹೆಚ್ಚಿನವರಿಗೆ ವಾಂತಿ, ಮಾರ್ನಿಂಗ್ ಸಿಕ್‌ನೆಸ್, ಆಯಾಸ ಎಲ್ಲ ಇರುತ್ತೆ. ವಾಂತಿಯಾದರೆ ಅದಕ್ಕೆ ಔಷಧ ಇದೆ. ಇದಲ್ಲದೇ ಕೆಲವು ಟಿಪ್ಸ್‌ಗಳಿವೆ. ಬೆಳಗ್ಗೆ ಬಾಯಿಗೆ ನೀರು ಹಾಕಿದ ಕೂಡಲೇ ವಾಕರಿಕೆ ಬರುತ್ತೆ. ಬೆಳಗ್ಗೆ ಸಾಧ್ಯವಾದಷ್ಟು ಜ್ಯೂಸ್ ಐಟಂ ಕಡಿಮೆ ಮಾಡಿ. ಬೆಡ್ ಪಕ್ಕ ಡ್ರೈಫ್ರೂಟ್ಸ್ ಅಥವಾ ಬಿಸ್ಕೆಟ್ ಇಟ್ಕೊಂಡಿರಿ. ಬೆಳಗ್ಗೆ ಎದ್ದಕೂಡಲೇ ಇದನ್ನ ತಿನ್ನಿ. ಏನೂ ಕುಡಿಯೋದು ಬೇಡ. ಆಮೇಲೆ ಬ್ರಶ್ ಮಾಡಿ. ಹಾಗೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಧ್ಯರಾತ್ರಿ ಎದ್ದು ಏನಾದ್ರೂ ತಿನ್ನಬೇಕು. ಇಲ್ಲವಾದರೆ ರಾತ್ರಿಯಿಂದ ಬೆಳಗಿನವರೆಗೂ ಹೊಟ್ಟೆ ಖಾಲಿ ಇಟ್ಟು ಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ. ರಾತ್ರಿ ಎದ್ದು ಏನಾದರೂ ತಿಂದರೆ ಮಾರ್ನಿಂಗ್ ಸಿಕ್‌ನೆಸ್ ಹತೋಟಿಗೆ ಬರುತ್ತೆ. ಇವೆಲ್ಲ ಇದ್ದೂ ಅಲ್ಪಸ್ವಲ್ಪ ಸಮಸ್ಯೆ ಉಳಿಯಬಹುದು. ಆದರೆ ಹೆಚ್ಚಿನವನ್ನು ನಿವಾರಿಸಬಹುದು. 

ಆದರೆ ಗರ್ಭಿಣಿಯರು ವಾಂತಿ ಮಾಡಿದರೆ ಆರೋಗ್ಯಕರ ಅನ್ನುತ್ತಾರಲ್ಲ?
ನಿಜ, ಗರ್ಭ ಧರಿಸಿದಾಗ ವಾಂತಿ ಮಾಡೋದು ಹೆಲ್ದಿ ಪ್ರೆಗ್ನೆನ್ಸಿ ಲಕ್ಷಣ. ಹಾಗಂತ ವಾಂತಿ ಮಾಡಲೇ ಬೇಕು ಅಂತಿಲ್ಲ. ವಾಂತಿ, ಆಯಾಸದಂಥ ಲಕ್ಷಣ ಇಲ್ಲದೆಯೂ ಆರೋಗ್ಯಕರ ಗರ್ಭ ಧರಿಸಿರಬಹುದು. ವಿಪರೀತ ವಾಂತಿಗೆ ಔಷಧ ಸೇವಿಸಬಹುದು ಹಾಗೇ ಬಿಟ್ಟರೆ ವೀಕೆನೆಸ್ ಬರುತ್ತೆ.

ಗರ್ಭಿಣಿಯರ ಚರ್ಮದ ಬಣ್ಣ ಯಾಕೆ ಬದಲಾಗುತ್ತೆ?
ಇದು ಸಹಜ ಬೆಳವಣಿಗೆ. ಹಾರ್ಮೊನಲ್ ವ್ಯತ್ಯಾಸಗಳಿಂದ ಹೀಗಾಗುತ್ತೆ. ಆದರೆ ಚರ್ಮದ ಬಣ್ಣ ಬದಲಾವಣೆಗೂ ಹೊಟ್ಟೆಯೊಳಗಿರುವ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಮಗು ಹುಟ್ಟಿದ ಮೇಲೆ ಚರ್ಮ ಸಹಜ ಬಣ್ಣಕ್ಕೆ ತಿರುಗುತ್ತೆ.

ಅಬಾರ್ಶನ್ ಯಾಕಾಗುತ್ತೆ?
ಕಾರಣಗಳು ಬಹಳ ಇವೆ. ಮೂರು ತಿಂಗಳ ಮೊದಲು ಅಬಾರ್ಶನ್ ಆದರೆ ಮಗುವಿಗೆ ಜೆನೆಟಿಕ್ ಡಿಫೆಕ್ಟ್ ಕಾರಣ. ಈ ಪರಿಸರದಲ್ಲಿ ಬೆಳೆಯಲಾರದ ದುರ್ಬಲ ಭ್ರೂಣವದು. ಪ್ರಕೃತಿಯೇ ಅದನ್ನು ನಿವಾರಿಸುತ್ತೆ. ಆದರೆ ಮೂರು ಸಲಕ್ಕಿಂತ ಹೆಚ್ಚು ಪದೇ ಪದೇ ಅಬಾರ್ಶನ್ ಆಗ್ತಿದ್ರೆ ನಾವು ರಿಸ್ಕ್ ಫ್ಯಾಕ್ಟರ್ ಏನು ಅಂತ ನೋಡ್ತೀವಿ. ಆಮೇಲಿನ ತಿಂಗಳಲ್ಲಿ ಗರ್ಭಪಾತವಾಗಲು ಗರ್ಭಿಣಿಯರ ಶುಗರ್, ಬಿಪಿ, ಥೈರಾಯ್ಡ್ ಸಮಸ್ಯೆ ಕಾರಣವಾಗುತ್ತೆ. ವಯಸ್ಸಾದ ಮೇಲೆ ಗರ್ಭ ಧರಿಸೋದೂ ಒಂದು ಕಾರಣ. 

ಮಜ್ಜಿಗೆ, ಎಳನೀರು ಕುಡಿಯೋದರಿಂದ ಹೆರಿಗೆ ಸುಲಭವಾಗುತ್ತೆ ಅನ್ನೋದು?
ನಿಜ ಅಲ್ಲ. ಇವೆಲ್ಲ ಏನೂ ಹೆಲ್ಪ್ ಆಗಲ್ಲ. 

ಹಿಪ್ನೋ ಬರ್ತಿಂಗ್‌ನಂಥ ಥೆರಪಿಗಳು ಹೆರಿಗೆ ನೋವನ್ನು ಕಡಿಮೆ ಮಾಡುತ್ತಾ?
ಹೆರಿಗೆ ನೋವು ಹಾಗೇ ಇರುತ್ತೆ. ಆದರೆ ಈ ಥೆರಪಿಗಳು ಆ ನೋವನ್ನು ತಡೆದುಕೊಳ್ಳುವ, ಹೆಚ್ಚು ಗಾಬರಿ ಪಟ್ಟುಕೊಳ್ಳದ ಹಾಗೆ ಮಾಡಬಹುದಷ್ಟೇ.  

ಗರ್ಭಿಣಿ ಲೈಂಗಿಕ ಕ್ರಿಯೆ ನಡೆಸಬಹುದಾ? ಇದರಿಂದ ಹೆರಿಗೆ ಸುಲಭವಾಗುತ್ತಾ?
ಲೈಂಗಿಕ ಕ್ರಿಯೆ ನಡೆಸಬಹುದು. ಅದಕ್ಕೆ ರಿಸ್ಟ್ರಿಕ್ಷನ್ ಇಲ್ಲ. ಹಾಗಂತ ಅದು ಕಡ್ಡಾಯ ಏನಲ್ಲ. ಇದರಿಂದ ಹೆರಿಗೆ ಸುಲಭವಾಗತ್ತೆ ಅನ್ನೋದೆಲ್ಲ ಸತ್ಯಕ್ಕೆ ದೂರವಾದದ್ದು.

ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮಾಡಬೇಕಾದ್ದು?
ಗರ್ಭಿಣಿಯರಿಗೆಂದೇ ಇರುವ ಬಟರ್‌ಫ್ಲೈ ಎಕ್ಸರ್‌ಸೈಸ್‌ನಂಥ ವ್ಯಾಯಾಮ ಮಾಡಿ. ಕರಿದ, ಮಸಾಲೆ ಪದಾರ್ಥ ತಿನ್ನಬೇಡಿ. ಆರೋಗ್ಯಕರ ಆಹಾರವನ್ನೇ ತಿನ್ನಿ. ದ್ರವಾಹಾರ ಹೆಚ್ಚೆಚ್ಚು ಸೇವಿಸಿ. ಆದಷ್ಟು ಚಟುವಟಿಕೆಯಿಂದಿರಿ.   
 

Follow Us:
Download App:
  • android
  • ios