ಅರಿಶಿನ ಆ್ಯಂಟಿ ಬಯೋಟಿಕ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸಿದರೆ ಸಮಸ್ಯೆ ಕಾಡುತ್ತದೆ. ಇದು ತಂಡಿಗೆ ಮದ್ದಾಗುತ್ತದೆ. ಆದರೆ, ಉಷ್ಣತೆ ಹೆಚ್ಚಿರುವಾಗ ಅಲ್ಲ.
- ಚಳಿಗಾಲದಲ್ಲಿ ಅರಿಶಿನವನ್ನು ಹೆಚ್ಚು ಬಳಸುತ್ತಾರೆ. ಆದರೆ ಬಿಸಿಲು ಇರುವಾಗ ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತತ್ತದೆ. ಹಾಗಾಗಿ ಬಳಸಿದ್ದರೆ ಒಳ್ಳೆಯದು. 

- ಹಳದಿ ರೋಗ ಬಂದರೆ, ಕಿಡ್ನಿ ಸ್ಟೋನ್ ಆದಾಗ ಅರಿಶಿನವನ್ನು ಸೇವಿಸಬಾರದು.
-ರಕ್ತ ಹೀನತೆ ಅಥವಾ ರಕ್ತಸ್ರಾವ ಸಮಸ್ಯೆ ಇದ್ದವರು ಅರಿಶಿನವನ್ನು ಕಡಿಮೆ ಬಳಸಬೇಕು. 

ಬಿಡಿ ಅರಿಶಿನ ಬಳಕೆಯಿಂದ ಬರುತ್ತೆ ಕ್ಯಾನ್ಸರ್

- ಸಕ್ಕರೆ ಕಾಯಿಲೆ ಇರುವವರಿಗೂ ಅರಿಶಿನ ಮದ್ದಾಗುವುದಿಲ್ಲ. 
- ಗರ್ಭಿಣಿಯರು ಅರಿಶಿನದ ಸೇವಿಸುವುದು ಕಡಿಮೆ ಮಾಡಬೇಕು. 
- ಅರಿಶಿನ ಅಧಿಕ ಸೇವಿಸಿದರೆ ಹೊಟ್ಟೆಯಲ್ಲಿ ಉಷ್ಣ ಹೆಚ್ಚುತ್ತದೆ, ತಲೆ ತಿರುಗುವುದು ಮೊದಲಾದ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ. 

ಚಳಿಗೆ ಬೆಸ್ಟ್ ಮದ್ದು ಅರಿಶಿನ