ಇದೀಗ, ಮೊಬೈಲ್`ಗಳಲ್ಲೆ ಇಂಟರ್ನೆಟ್ ಲಭ್ಯವಿದ್ದು, ಹದಿಹರೆಯದಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪೋರ್ನೋಗ್ರಫಿಗೆ ಮುಗಿಬೀಳುತ್ತಿದ್ದಾರೆ.

ಲಂಡನ್(.28):ತಂತ್ರಜ್ಙಾನಬೆಳೆದಂತೆ ಅನುಕೂಲತೆಗಳ ಜೊತೆ ಅನಾನುಕೂಲತೆಗಳು ಹೆಚ್ಚಾಗುತ್ತಿವೆ. ಇದಕ್ಕೆ ತಾಜಾಉದಾಹರಣೆ ಇಂಟರ್ನೆಟ್. ಇಂಟರ್ನೆಟ್`ನಿಂದ ಜ್ಞಾನಾರ್ಜನೆ ಸೇರಿದಂತೆ ಇನ್ನಿತರೆ ಹಲವುಪ್ರಯೋಜನಗಳಿವೆ. ಅದರ ಜೊತೆಗೆ ಅನಾನುಕೂಲತೆಗಳೂ ಇಲ್ಲದಿಲ್ಲ. ಇಂಟರ್ನೆಟ್ ಭರಾಟೆಯಲ್ಲಿಪೋರ್ನ್ ವೀಕ್ಷಣೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ, ಮೊಬೈಲ್`ಗಳಲ್ಲೆ ಇಂಟರ್ನೆಟ್ ಲಭ್ಯವಿದ್ದು, ಹದಿಹರೆಯದಿಂದ ಹಿಡಿದು ವಯೋವೃದ್ಧರವರೆಗೆಪ್ರತಿಯೊಬ್ಬರೂ ಪೋರ್ನೋಗ್ರಫಿಗೆ ಮುಗಿಬೀಳುತ್ತಿದ್ದಾರೆ. ಅಮೆರಿಕ ಪೋರ್ನ್ ಇಂಡಸ್ಟ್ರೀಯವಾರ್ಷಿಕ ವಹಿವಾಟು 13 ಬಿಲಿಯನ್ ಡಾಲರ್`ಗೆ ಮುಟ್ಟಿರುವುದು ಇದರ ಬೇಡಿಕೆ ಎಷ್ಟಿದೆಎಂಬುದನ್ನ ಸಾಬೀತುಪಡಿಸುತ್ತಿದೆ.

ಅಮೆರಿಕದಲ್ಲಿ 18 ವರ್ಷದೊಳಗಿನ ಯುವಕರ ಪೈಕಿ 10ರಲ್ಲಿ 9 ಮಂದಿ 18ರ ಗಡಿ ದಾಟುವ ಮುನ್ನವೇಪೋರ್ನೋಗ್ರಫಿ ವೀಕ್ಷಿಸುತ್ತಿದ್ದಾರೆ. ಪೋರ್ನೋಗ್ರಫಿಯಿಂದ ಲೈಂಗಿಕ ಜ್ಞಾನಹೆಚ್ಚುತ್ತದೆಯಾದರೂ ಅದರ ದುಷ್ಪರಿಣಾಮಗಳೇ ಜಾಸ್ತಿ ಎನ್ನುತ್ತೆ ಸಮೀಕ್ಷೆ.

ಪೋರ್ನೋಗ್ರಫಿವೀಕ್ಷಣೆಯಿಂದ ವೈವಾಹಿಕ ಯಾತನೆ, ಬೇರಾಗುವುದು, ಲೈಂಗಿಕಾಸಕ್ತಿ ಕುಂದುವುದು, ರೊಮ್ಯಾಂಟಿಕ್ ಜೀವನದಲ್ಲಿ ಅನ್ಯೋನ್ಯತೆ ಕುಂದುವುದು, ಲೈಂಗಿಕ ಅತೃಪ್ತಿ, ದಾಂಪತ್ಯದಲ್ಲಿವಂಚನೆ ಪ್ರೌವೃತ್ತಿ ಇವೇ ಮುಂತಾದ ಸಮಸ್ಯೆ ಉಂಟಾಗುತ್ತೆ ಎನ್ನುತ್ತೆ ಸಮೀಕ್ಷೆ.