Asianet Suvarna News Asianet Suvarna News

Indian Law : ಪ್ರಕರಣ ಎಷ್ಟೇ ಗಂಭೀರವಾಗಿರಲಿ, ಸಂಜೆ ನಂತ್ರ ಮಹಿಳೆ ಬಂಧನಕ್ಕಿಲ್ಲ ಅವಕಾಶ!

ಭಾರತದ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕು, ಕರ್ತವ್ಯಗಳನ್ನು ನೀಡಲಾಗಿದೆ. ಭಾರತದಲ್ಲಿ ನೆಲೆ ನಿಂತ ವ್ಯಕ್ತಿ ಇದ್ರ ಬಗ್ಗೆ ಮಾಹಿತಿ ತಿಳಿದಿರಬೇಕು. ತನಗೆ ಸಿಕ್ಕಿರುವ ಹಕ್ಕನ್ನು ಬಳಸುವುದು ತಿಳಿದಿರಬೇಕು. 
 

Interesting Fact Of Indian Laws know rules to arrest women and benefits
Author
First Published Aug 26, 2022, 4:25 PM IST

ನಿಮ್ಮ ಹಕ್ಕನ್ನು ಕೇಳಿ, ನಿಮ್ಮ ಹಕ್ಕಿಗಾಗಿ ಹೋರಾಡಿ ಎಂದು ಭಗವಂತ ಶ್ರೀಕೃಷ್ಣ ಕೂಡ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಭೂಮಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಇಲ್ಲಿ ವಾಸಿಸುವ ಹಕ್ಕಿದೆ. ಮನುಷ್ಯನ ವಿಷ್ಯಕ್ಕೆ ಬಂದ್ರೆ ಮನುಷ್ಯ ಹುಟ್ಟುವ ಮೊದಲೇ ಕೆಲ ಹಕ್ಕು ಹೊಂದಿರ್ತಾನೆ. ಹುಟ್ಟಿದ್ಮೇಲೆ ಮತ್ತೊಂದಿಷ್ಟು ಹಕ್ಕುಗಳು ಸಿಗುತ್ತವೆ. ಬೆಳೆದು ದೊಡ್ಡವನಾಗ್ತಿದ್ದಂತ, ಸಮಾಜದ ಮಧ್ಯೆ, ಕುಟುಂಬದಲ್ಲಿ ಹೀಗೆ ಎಲ್ಲೆಡೆ ಹಕ್ಕುಗಳನ್ನು ಪಡೆಯುತ್ತ ಹೋಗ್ತಾನೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಕ್ಕುಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಭಾರತದಲ್ಲಿ ಕಾನೂನು ಜಾರಿಯಲ್ಲಿದೆ. ಭಾರತದ ಸಂವಿಧಾನದಲ್ಲಿ ಹಕ್ಕುಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಇಲ್ಲಿದ್ದುಕೊಂಡು ಇಲ್ಲಿನ ಹಕ್ಕುಗಳನ್ನು ತಿಳಿದಿಲ್ಲವೆಂದ್ರೆ ಜೀವನ ಕಷ್ಟವಾಗ್ಬಹುದು. ನಾವಿಂದು ಭಾರತದ ಕಾನೂನಿನಲ್ಲಿರುವ ಕೆಲ ಮಹತ್ವದ ಹಕ್ಕುಗಳ ಬಗ್ಗೆ ನಿಮಗೆ ಹೇಳ್ತೇವೆ.

ಭಾರತೀಯ ನಾಗರಿಕ ತಿಳಿಯಲೇಬೇಕಾದ ಹಕ್ಕುಗಳ ವಿವರ :

ಸಿಲಿಂಡರ್ (Cylinder) ಸ್ಪೋಟಗೊಂಡ್ರೆ ಪರಿಹಾರ : ಪಬ್ಲಿಕ್ ಲಯಾಬಿಲಿಟಿ ಪಾಲಿಸಿ (Public Liability Policy) ಅಡಿಯಲ್ಲಿ ಯಾವುದೇ ಕಾರಣಕ್ಕಾಗಿ ನಿಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡರೆ ಮತ್ತು ಜೀವ ಮತ್ತು ಆಸ್ತಿ ನಷ್ಟವಾದ್ರೆ ನಿಮಗೆ ಪರಿಹಾರ ಸಿಗುತ್ತದೆ. ನೀವು ಆ ತಕ್ಷಣ ಸಿಲಿಂಡರ್ ಕಂಪನಿಯಿಂದ ವಿಮಾ ರಕ್ಷಣೆಯನ್ನು ಪಡೆಯಬಹುದು. ಗ್ಯಾಸ್ ಕಂಪನಿ ನಿಮಗೆ 40 ಲಕ್ಷದವರೆಗೆ ಪರಿಹಾರ ಹಣವನ್ನು ನೀಡುತ್ತದೆ.  ಒಂದ್ವೇಳೆ ಗ್ಯಾಸ್ ಕಂಪನಿ ನಿಮಗೆ ಪರಿಹಾರ ನೀಡಲು ನಿರಾಕರಿಸಿದ್ರೆ ನೀವು ಈ ಬಗ್ಗೆ ದೂರು ನೀಡುವ ಹಕ್ಕನ್ನು ಹೊಂದಿರುತ್ತೀರಿ. ಗ್ಯಾಸ್ ಕಂಪನಿ ತಪ್ಪು ಮಾಡಿದೆ ಎಂಬುದು ಸಾಬೀತಾದ್ರೆ ಅದ್ರ ಪರವಾನಗಿ ರದ್ದಾಗುತ್ತದೆ.

ಪೊಲೀಸ (Police) ರು ದೂರು ನಿರಾಕರಿಸುವಂತಿಲ್ಲ : ಪೊಲೀಸ್ ಠಾಣೆಯಲ್ಲಿ ಪ್ರತಿಯೊಬ್ಬ ಭಾರತೀಯ ಕೂಡ ದೂರು ದಾಖಲಿಸುವ ಅಧಿಕಾರ ಹೊಂದಿದ್ದಾನೆ. ನೀವು ಪೊಲೀಸ್ ಠಾಣೆಯಲ್ಲಿ ಯಾವುದೇ ವ್ಯಕ್ತಿ ಅಥವಾ ವಿಷ್ಯದ ಬಗ್ಗೆ ದೂರು ನೀಡ್ಬಹುದು. ಒಂದ್ವೇಳೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ರೆ ನೀವು ಮೇಲಿನ ಅಧಿಕಾರಿಗೆ ದೂರು ನೀಡಬಹುದು. ಪೊಲೀಸ್ ಸಿಬ್ಬಂದಿ ತಪ್ಪೆಸಗಿದ್ದಾರೆ ಎಂಬುದು ಸ್ಪಷ್ಟವಾದ್ರೆ ಕನಿಷ್ಠ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇಲ್ಲವೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಐಪಿಸಿ  ಸೆಕ್ಷನ್ 166A ಪ್ರಕಾರ ಯಾವುದೇ ದೂರು ದಾಖಲಿಸಲು ನಿರಾಕರಿಸುವಂತಿಲ್ಲ.

Indian Law : ಸಲಿಂಗ ದಂಪತಿ ಮಕ್ಕಳನ್ನು ದತ್ತು ಪಡೀಬಹುದಾ?

ಯಾವುದೇ ಹೊಟೇಲ್ ನಲ್ಲಿ ನೀರು ಕುಡಿಬಹುದು, ವಾಶ್ ರೂಮ್ ಬಳಸ್ಬಹುದು : ದೇಶದ ಯಾವುದೇ ಹೊಟೇಲ್ ಗೆ ಹೋಗಿ ನೀರು ಕೇಳಿದಾಗ ಹೊಟೇಲ್ ಸಿಬ್ಬಂದಿ ನೀರು ನೀಡಲು ನಿರಾಕರಿಸುವಂತಿಲ್ಲ. ಹಾಗೆಯೇ ನೀವು ಉಚಿತವಾಗಿ ವಾಶ್ ರೂಮ್ ಕೂಡ ಬಳಸಬಹುದು. ಇಂಡಿಯನ್ ಸಿರೀಸ್ ಆಕ್ಟ್ 1887ರ ಪ್ರಕಾರ ಸಾಮಾನ್ಯ ಹೊಟೇಲ್ ಇರಲಿ, ಫೈವ್ ಸ್ಟಾರ್ ಹೊಟೇಲ್ ಇರಲಿ, ನೀರು ನೀಡಲು ನಿರಾಕರಿಸುವಂತಿಲ್ಲ. ಒಂದ್ವೇಳೆ ಅವರು ನಿರಾಕರಿಸಿದ್ರೆ ನೀವು ದೂರು ನೀಡ್ಬಹುದು. ಹೊಟೇಲ್ ಪರವಾನಗಿ ರದ್ದಾಗುತ್ತದೆ.

ಸಂಜೆ ಮೇಲೆ ಮಹಿಳೆಯರನ್ನು ಬಂಧಿಸುವಂತಿಲ್ಲ : ಕ್ರಿಮಿನಲ್ ಪ್ರೊಸೀಜರ್ ಕೋಡ್  ಸೆಕ್ಷನ್ 46 ರ ಅಡಿಯಲ್ಲಿ, ಎಂಥ ಗಂಭೀರ ಪ್ರಕರಣವಾಗಿದ್ದರೂ ಮಹಿಳೆಯರನ್ನು ಸಂಜೆ ನಂತ್ರ ಬಂಧಿಸುವಂತಿಲ್ಲ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅವರನ್ನು ಬಂಧಿಸುವ ಅವಕಾಶವಿಲ್ಲ. ಒಂದ್ವೇಳೆ ಪೊಲೀಸರು ಈ ಸಮಯದಲ್ಲಿ ಮಹಿಳೆಯನ್ನು ಬಂಧಿಸಿದ್ರೆ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಾಗುವುದು. 

ಹದಿ ವಯಸ್ಸಿನ ಗರ್ಭಧಾರಣೆ ಹೆಚ್ಚಳ, ಗರ್ಭಪಾತದ ಬಗ್ಗೆ Indian Law ಹೇಳೋದೇನು ?

ಗರ್ಭಿಣಿಯರಿಗಿದೆ ಈ ಹಕ್ಕು : ಭಾರತದ ಸಂವಿಧಾನದಲ್ಲಿ ಗರ್ಭಿಣಿಯರಿಗೂ ಕೆಲ ಅಧಿಕಾರ ನೀಡಲಾಗಿದೆ. ಮೆಟರ್ನಿಟಿ ಬೆನಿಫಿಟ್ ಆಕ್ಟ್ 1961ರ ಪ್ರಕಾರ ಗರ್ಭಿಣಿಯನ್ನು ಕೆಲಸದಿಂದ ತೆಗೆದು ಹಾಕುವ ಹಕ್ಕಿಲ್ಲ. ಎಲ್ಲರಂತೆ ಆಕೆಗೂ ಮೂರು ತಿಂಗಳ ಮೊದಲೇ ನೊಟೀಸ್ ನೀಡ್ಬೇಕು. ಹಾಗೆಯೇ ಗರ್ಭಿಣಿಯರಿಗೆ ಖರ್ಚಿನ ಕೆಲ ಭಾಗವನ್ನು ಪಾವತಿಸಬೇಕು. 
 

Follow Us:
Download App:
  • android
  • ios