ಮಾಂಸಖಂಡಗಳಲ್ಲಿ ಸ್ನಾಯುಗಂಟು ಕಾಣಿಸಿಕೊಳ್ಳುವುದು ಹೆಚ್ಚುತ್ತಿದೆ. ಚರ್ಮ ಬಿಗಿದುಕೊಂಡರೆ, ಗಂಟಿರುವಂತೆಯೇ ಭಾಸವಾಗುತ್ತದೆ. ಇದರ ಮೇಲೆ ಹೆಚ್ಚು ಫೋರ್ಸ್ ಹಾಕಿದರೆ, ಅಕ್ಕ-ಪಕ್ಕದ ಚರ್ಮಕ್ಕೂ ನೋವು ಪಾಸ್ ಆಗುತ್ತದೆ. 

ಎಲ್ಲಿ ಕಾಣಿಸುತ್ತೆ ಈ ಸಮಸ್ಯೆ?

 • ಕೈ ಗಂಟು
 • ಸೊಂಟ
 • ಕುತ್ತಿಗೆ
 • ಕಾಲು
 • ಬುಜ
 •  

ಸೂಚನೆಗಳು:

 1. ದವಡೆ ನೋವು
 2. ಬೆನ್ನು ನೋವು
 3. ಕಿವಿ ನೋವು
 4. ತಲೆ ನೋವು
 5. ನೋವು ಬರಲು ಕಾರಣ?
 6. ಒತ್ತಡ ಮತ್ತು ಆತಂಕ
 7. ಹೆಚ್ಚಾಗಿ ಶ್ರಮ ಬಳಸಿ ವಸ್ತುಗಳನ್ನು ಎತ್ತುವುದು
 8.  ಸೂಕ್ತ ಭಂಗಿಯಲ್ಲಿ ಕೂರದಿರುವುದು 
 9. ಮೈ ಬಿಗಿಯಾಗಿಟ್ಟಿಕೊಂಡೇ ಇರುವುದು. 
 10. ಹೆಚ್ಚಾಗಿ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವರಲ್ಲಿ ಇಂಥ ಸಮಸ್ಯೆಗಳು ಹೆಚ್ಚು. 


ಪರಿಹಾರವೇನು?

* ನೋವಿನ ಪೂರ್ಣ ಇತಿಹಾಸ ಅರಿಯಬೇಕು.

* ಯಾವಾಗ, ಎಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

* ಕೆಲಸ ಮಾಡೋ ಸ್ಥಳ ಹಾಗೂ ಇತರೆ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಬೇಕು.

* ಮಲಗೋ ಭಂಗಿಯನ್ನು ಸುಧಾರಿಸಿಕೊಳ್ಳಬೇಕು.
 

ನಿಂತು ಕೆಲಸ ಮಾಡೋರು ಅನುಭವಿಸುವ ನೋವಿದು

* ರಕ್ತ ಪರೀಕ್ಷಿಸಿಕೊಂಡು, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪೂರೈಕೆಯಾಗುತ್ತಿದೆಯೋ, ಇಲ್ಲವೋ ಬಗ್ಗೆ ಗಮನಿಸಬೇಕು.

* ಆಗಾಗ ಅಗತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.  

* ಯೋಗ, ವ್ಯಾಯಾಮವನ್ನು ಮಿಸ್ ಮಾಡಿಕೊಳ್ಳಬೇಡಿ. ಅಗತ್ಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.

* ನಮ್ಮ ನೋವಿಗೆ ನಾವೇ ಚಿಕಿತ್ಸೆ ಕೊಡುವುದನ್ನು ಕಲಿತುಕೊಳ್ಳಬೇಕು. ಅಲ್ಲದೇ ನೋವು ಜಾಸ್ತಿಯಾದಾಗ ನಿಯಂತ್ರಿಸಿಕೊಳ್ಳಲು ನೆರವಾಗುವಂತೆ ಮನೆಯವರಿಗೂ ಹೇಳಿ ಕೊಟ್ಟಿರಬೇಕು. 

* ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ನೀವು ಕೇರ್ ತೆಗೆದುಕೊಳ್ಳುವುದು ಮುಖ್ಯ. 

ಮೈ ಕೈ ನೋವು ಹೋಗಲಾಡಿಸಲು ಸರಳ ಯೋಗ