ಚಳಿಗಾಲದಲ್ಲಿ ರಾತ್ರಿ  ಏನು ಧರಿಸಿ ಮಲಗಬೇಕು? 99 ರಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ

Nightwear for Winter: ಚಳಿಗಾಲದಲ್ಲಿ ರಾತ್ರಿ ಮಲಗುವಾಗ ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ರೀತಿಯ ಬಟ್ಟೆಗಳು ಆರಾಮದಾಯಕ ತಾಪಮಾನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

How to sleep at night in winter 99 percent of people don t know

Cloths For Winter Night: ಕಳೆದ 10 ದಿನಗಳಿಂದ ದೇಶದಲ್ಲಿ ಚಳಿಯ ಪ್ರಮಾಣ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಜನರು ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಉಣ್ಣೆ ಮತ್ತು ದಪ್ಪ  ಉಡುಪುಗಳನ್ನು ಬಳಸುತ್ತಾರೆ. ಇನ್ನು ಕೆಲವರು ಒಂದರ ಮೇಲೊಂದರಂತೆ ಎರಡ್ಮೂರು ಬಟ್ಟೆಗಳನ್ನು ಹಾಕಿಕೊಂಡು ಹೊರಗೆ ಬರುತ್ತಾರೆ. ಆರೋಗ್ಯ ತಜ್ಞರು, ಶೀತಗಾಳಿ ಇರುವ ಸಂದರ್ಭದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ರಾತ್ರಿ ಮಲಗುವಾಗ ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಇದರಿಂದಾಗಿ ರಾತ್ರಿಯಿಡೀ ನಡಗುತ್ತಾ ನಿದ್ದೆ ಮಾಡುತ್ತಾರೆ. 

ಸಾಮಾನ್ಯವಾಗಿ ಬಹುತೇಕರು ದಪ್ಪ/ಉಣ್ಣೆಯ ಬಟ್ಟೆ ಧರಿಸುತ್ತಾರೆ. ಆದ್ರೆ ಚಳಿಗಾಲದಲ್ಲಿ ಯಾವ ರೀತಿಯ ಬಟ್ಟೆ ಧರಿಸಿದ್ರೆ ಶೀತದಿಂದ ರಕ್ಷಣೆ ಪಡೆಯಬಹುದು ಎಂಬ ವಿಷಯ ಗೊತ್ತಿರಲ್ಲ. ಇನ್ನು ಕೆಲವರು ಚಳಿಯಿಂದ ರಕ್ಷಣೆ ಪಡೆಯಲು ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ತಜ್ಞರ ಪ್ರಕಾರ, ಈ ವಿಧಾನ ತಪ್ಪು. ಚಳಿಗಾಲದಲ್ಲಿ ರಾತ್ರಿ ಸಡಿಲವಾದ ಬಟ್ಟೆ ಧರಿಸಬೇಕು ಎಂದು ಹೇಳುತ್ತಾರೆ. ಸಡಿಲವಾದ, ಗಾಳಿಯಾಡುವ ಕಾಟನ್ ಪೈಜಾಮಾಗಳನ್ನು ಧರಿಸುವುದರಿಂದ ಆರಾಮವಾಗಿ ಮಲಗಲು ಸಾಧ್ಯವಾಗುತ್ತೆ ಎಂಬುವುದು ತಜ್ಞರ ಸಲಹೆಯಾಗಿದೆ.

ರಾತ್ರಿ ನಿದ್ದೆ ಮಾಡುವಾಗ ದೇಹ   ನೈಸರ್ಗಿಕವಾಗಿ ತಾಪಮಾನವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ತುಂಬಾ ದಪ್ಪ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುವ ಬದಲು, ಆರಾಮದಾಯಕ ಮತ್ತು ತೇವಾಂಶ-ನಿರೋಧಕ ಬಟ್ಟೆಗಳನ್ನು ಧರಿಸಬೇಕು ಎಂದು ತಜ್ಞರು ಹೇಳುತ್ತಾರೆ. ರಾತ್ರಿ ಒಂದರ ಮೇಲೊಂದರಂತೆ ಹೆಚ್ಚು ಬಟ್ಟೆಗಳನ್ನು ಧರಿಸೋದರಿಂದ ಬೆವರು ಬಂದು ನಿದ್ದೆಯಿಂದ ಎಚ್ಚರವಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಬೆವರು ಬಂದಾಗ ಹಸಿವು ಸಹ ಆಗುತ್ತದೆ. ಆದ್ದರಿಂದ ತೇವಾಂಶ ಹೀರಿಕೊಳ್ಳುವ ಕಾಟನ್ ಬಟ್ಟೆ ಧರಿಸೋದರಿಂದ ರಾತ್ರಿಯಿಡೀ  ಆರಾಮದಾಯಕ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಆಗುತ್ತದೆ. ಇದರಿಂದ ಚಳಿಯ ಅನುಭವ ಕಡಿಮೆಯಾಗುತ್ತದೆ. 

ಇದನ್ನೂ ಓದಿ: ಚಳಿಗಾಲದಲ್ಲಿ ಕೂದಲಿಗೆ ಹೆನ್ನಾ/ಮೆಹಂದಿ ಹಚ್ಚುವ ಮೊದಲು ಈ 5 ವಿಚಾರ ಗಮನದಲ್ಲಿರಲಿ

ಕೆಲವರಿಗೆ ಚಳಿಯಿಂದ ಪಾದಗಳು ತುಂಬಾ ತಂಪಾಗುತ್ತವೆ. ಅದರಲ್ಲೂ ಮಲಗುವ ಮುನ್ನ ನೀರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚು ಚಳಿಯ ಅನುಭವವಾಗುತ್ತದೆ. ಈ ಸಂದರ್ಭದಲ್ಲಿ ತೆಳುವಾದ ಉಣ್ಣೆಯ ಸಾಕ್ಸ್ ಅಥವಾ ಉದ್ದವಾದ ಪೈಜಾಮಾ ಧರಿಸಬಹುದು. ಇದು ನಿಮ್ಮ ಪಾದಗಳಿಗೆ ಚಳಿಯಿಂದ ರಕ್ಷಣೆ ನೀಡುತ್ತದೆ. ರೇಷ್ಮೆ ಮಾದರಿಯ ಉಡುಪುಗಳು ದೇಹದ ಉಷ್ಣತೆಯನ್ನೂ ನಿಯಂತ್ರಣದಲ್ಲಿಡುತ್ತದೆ. ನೀವು ಆರ್ಥಿಕವಾಗಿ ಸದೃಢರಾಗಿದ್ದರೆ ರೇಷ್ಮೆಯ ಬಟ್ಟೆ/ ಶಾಲ್ ಉಪಯೋಗಿಸಬಹುದು. ರಾತ್ರಿ ಮಲಗಲು ಬಳಸುವ ಹಾಸಿಗೆ ಸಹ ಮೃದುವಾಗಿರುವಂತೆ ನೋಡಿಕೊಳ್ಳಿ. ಇದು ನಿಮ್ಮ ಚರ್ಮಕ್ಕೂ ಒಳ್ಳೆಯದು. 

ಚಳಿ ಹೆಚ್ಚಾಗುತ್ತಿರೋದರಿಂದ ಜನರು ಹೀಟರ್ ಸಹ ಬಳಕೆ ಮಾಡುತ್ತಾರೆ. ಸಂಜೆಯಾಗುತ್ತಲೇ ಮನೆಯ ಕಿಟಲಿ, ಬಾಗಿಲು ಮುಚ್ಚಿಕೊಳ್ಳುತ್ತಾರೆ. ಕಪ್ಪು ಬಣ್ಣದ ಬಟ್ಟೆ ಬಳಕೆ ಮಾಡೋದರಿಂದ ಚಳಿಯ ಅನುಭವ ಕಡಿಮೆಯಾಗುತ್ತೆ ಅಂತಾನೂ ಹೇಳುತ್ತಾರೆ.  Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

ಇದನ್ನೂ ಓದಿ: ಚಳಿಗಾಲ ಅಂತ ಸುಡು ಬಿಸಿನೀರಿನಲ್ಲಿ ಸ್ನಾನ ಮಾಡ್ತೀರಾ? ಆ ಆಸಕ್ತಿಯೇ ಹೊರಟುಹೋದೀತು ಹುಷಾರ್!

Latest Videos
Follow Us:
Download App:
  • android
  • ios