ನೆಗಟಿವ್ ಎನರ್ಜಿ ಓಡಿಸುತ್ತೆ ಉಪ್ಪಿನ ಹೊಗೆ

First Published 31, Jan 2018, 7:40 PM IST
How to remove negative energy burning salt
Highlights

ಮನೆಯಲ್ಲಿ ಯಾವುದೋ ನೆಗಟಿವ್ ಎನರ್ಜಿ ನಮಗೆ ಗೊತ್ತಿಲ್ಲದಂತೆ ಬಂದು ಸೇರಿರುತ್ತೆ. ಮನೆಯಲ್ಲಿ ಮಾತ್ರವಲ್ಲ ನಮ್ಮ ದೇಹದಲ್ಲಿಯೂ, ಕಚೇರಿಯಲ್ಲೂ ಇಂಥದ್ದೊಂದು ಶಕ್ತಿ ನಮ್ಮ ಮೇಲೆ ಪ್ರಭಾವ ಬೀರಬಹುದು. ಇದನ್ನು ಹೋಗಲಾಡಿಸುವುದು ಹೇಗೆ?

ಮನೆಯಲ್ಲಿ ಕಾರಣವಿಲ್ಲದೇ ಮಗು ಅಳ್ಲಿಕ್ಕೆ ಆರಂಭಿಸುತ್ತೆ. ಅದೇನೋ ಕಸಿವಿಸಿ. ವಿನಾಕಾರಣ ದಾಂಪತ್ಯದಲ್ಲಿ ವಿರಸ, ಮನೆಯವರೊಂದಿಗೆ ಕಲಹ. ಕಾರಣವೇನೆಂದು ಕಂಡು ಹಿಡಿಯಲಾಗುವುದಿಲ್ಲ. ಆದರೆ, ಋಣಾತ್ಮಕ ಚಿಂತನೆಗಳು, ಘಟನೆಗಳನ್ನು ಮನೆಯವರೆಲ್ಲರನ್ನೂ ಕಾಡ್ಲಿಕ್ಕೆ ಆರಂಭವಾಗುತ್ತೆ. ಇದಕ್ಕೆ ಕಾರಣವೇನು? ಇದೇ ಕಾರಣವೆಂದು ಹೇಳ್ಲಿಕ್ಕೆ ಆಗದಿದ್ದರೂ, ಯಾವುದೋ ನೆಗಟಿವ್ ಎನರ್ಜಿ ಮನೆ ಅಥವಾ ಕಚೇರಿಯಲ್ಲಿದೆ ಎನ್ನಲಾಗುತ್ತದೆ. ಸುಖಾ  ಸುಮ್ಮನೆ ಬೇಡದ ಪ್ರಭಾವ ನಮ್ಮನ್ನು ಆಳ್ಲಿಕ್ಕೆ ಆರಂಭವಾಗಿ ಬಿಡುತ್ತೆ.

ಮನೆಯಲ್ಲಿರುವ ಕರ್ಟನ್‌, ಬಟ್ಟೆಗಳು ಹಾಗೂ ಜನರಲ್ಲಿಯೂ ಈ ಋಣಾತ್ಮಕ ಶಕ್ತಿ ಅಡಗಿ ಕುಳಿತಿರಬಹುದು. ಅದು ಹೇಗೆ, ಏಕೆ ಬರುತ್ತೆ ಎನ್ನೋ ಕಾರಣ ಹುಡುಕ್ಲಿಕ್ಕೆ ಆಗೋಲ್ಲ. ಆದರೆ, ಮನೆಯಲ್ಲಿ ಸೇರಿಕೊಂಡ ಬೇಡದ ಪ್ರಭಾವಗಳನ್ನು ಆಗಾಗ ತೆಗೆದು ಹಾಕಬೇಕು. ಆಗ ಮಾತ್ರ ಮನೆ ಮಂದಿ ಸಾಮರಸ್ಯದಿಂದ ಬಾಳೋದು ಸಾಧ್ಯ. 

ಮನೆಯಲ್ಲಿ ಧೂಪ ಬೆಳಗಿದರೆ, ಋಷಿ ಎಲೆಗಳ ಹೊಗೆ ಹಾಕಿದರೆ, ಗಂಟೆ ಬಾರಿಸಿದರೆ....ಹೀಗೆ ವಿಧವಿಧವಾಗಿ ಕೆಲವು ಪ್ರಕ್ರಿಯೆಗಳನ್ನು ನಡೆಸುವುದರಿಂದ ಆ ಋಣಾತ್ಮಕ ಪ್ರಭಾವನ್ನು ಕಡಿಮೆ ಮಾಡಿಕೊಳ್ಳಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ ಹರಳುಪ್ಪಿನ ಹೊಗೆ ಹಾಕೋದ್ರಿಂದ ಮನೆಯಲ್ಲಿ ಧನಾತ್ಮಕ ಪ್ರಭಾವನ್ನು ಸೃಷ್ಟಿಸಬಹುದು. ಆದರೆ, ಈ ಹೊಗೆ ಹಾಕುವಾಗ ತುಸು ಕೇರ್‌ಫುಲ್ ಆಗಿರೋದು ಅಗತ್ಯ.

ಕೈ ಸುಡದಂಥ ಪಾತ್ರೆ ಹಿಡಿದು, ಮನೆ ಪೂರ್ತಿ ಹೊಗೆ ಆವರಿಸುವಂತೆ ಹೊಗೆ ಹಾಕಿದರೊಳಿತು. ಜ್ವಾಲೆ ಹೆಚ್ಚಾಗದಂತೆ ಗಮನ ಹರಿಸಿ. ಹೊಗೆ ಮನೆ ತುಂಬಲಿ. ನಂತರ ಆ ಉಪ್ಪನ್ನು ಟಾಯ್ಲೆಟ್‌ ಹಾಕಬೇಕು. ಫ್ಲಷ್ ಮಾಡೋ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರ ಹಾಕಬೇಕು. ಈ ಪ್ರಕ್ರಿಯೆಯಿಂದ ತಕ್ಷಣವೇ ಮನೆಯಲ್ಲಿದ್ದ ನೆಗಟಿವ್ ಪ್ರಭಾವ ಕಡಿಮೆಯಾಗಿದ್ದು ನಿಮ್ಮ ಗಮನಕ್ಕೆ ಬರುತ್ತದೆ. ಮನಸ್ಸು ಹಗುರಾಗುತ್ತದೆ. 
 

loader