ಕೊಳಕು ಕೈಯಲ್ಲಿ ನೇರವಾಗಿಯೇ ಮಕ್ಕಳು ಏನಾದ್ರೂ ತಿಂದು ಬಿಡುತ್ತಾರೆ. ಬುದ್ಧಿ ಬರೋವರೆಗೆ ಅವರನ್ನು ಹಿಡಿಯುವುದೇ ಕಷ್ಟ. ಆಗ ವಾಂತಿ-ಭೇದಿಯಂಥ ಸಮಸ್ಯೆಗಳು ಕಾಡುವುದು ಸಹಜ. ಅದಕ್ಕೇನು ಕಾರಣ? ಪರಿಹಾರವೇನು?

ಮಕ್ಕಳಲ್ಲಿ ಡೈಹೇರಿಯಾ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಮಕ್ಕಳು ತುಂಬಾ ಸೂಕ್ಷ್ಮವಾಗಿರೋದರಿಂದ ತಿನ್ನುವ ಆಹಾರಗಳು ಅವರಿಗೆ ಹಿಡಿಸುವುದಿಲ್ಲ. ಈ ಕಾರಣದಿಂದ ಡೈಹೇರಿಯಾ ಸಮಸ್ಯೆ ಕಾಡುತ್ತದೆ.

ಲಕ್ಷಣಗಳು :

  • ಹೆಚ್ಚು ಹೆಚ್ಚು ಬಾಯಾರಿಕೆ. 
  • ಕಿರಿಕಿರಿಯಾಗಿ ಮಕ್ಕಳು ಅಳುತ್ತವೆ. 
  • ಮಕ್ಕಳಿಗೆ ಆಯಾಸ ಹೆಚ್ಚುತ್ತದೆ. ದೇಹ ಒಣಗುತ್ತದೆ. 
  • ಬಾಯಿ, ಗಂಟಲು, ನಾಲಿಗೆ ಒಣಗಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ನೀಡಿ. 
  • ಡೈಹೇರಿಯಾ ಸಮಸ್ಯೆ ಹೆಚ್ಚಾದಲ್ಲಿ ಮಕ್ಕಳು ಮೂರ್ಛೆ ಹೋಗುವ ಸಾಧ್ಯತೆಯೂ ಇದೆ. 

ಏನು ಮಾಡಬೇಕು?

  1. ಮಕ್ಕಳಿಗೆ ಒಆರ್‌ಎಸ್ ನೀಡಿ. 
  2. ನೀರಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ನೀಡಿ. ಇದು ಮಕ್ಕಳ ದೇಹದಲ್ಲಿ ನೀರು ಹಾಗೆಯೇ ಉಳಿಯುವಂತೆ ಮಾಡುತ್ತದೆ. 
  3. ಬೇಯಿಸಿದ ಸಬ್ಬಕ್ಕಿ, ಉಪ್ಪು ಮಿಶ್ರಿತ ಮಜ್ಜಿಗೆ, ಎಳೆನೀರು, ನೀರು ಕ್ಯಾರೆಟ್ ಸೂಪ್‌ ನೀಡಿದರೆ ಮಕ್ಕಳಿಗೆ ಶಕ್ತಿ ಬರುತ್ತದೆ. 
  4. ಭೇದಿಯಿಂದ ಅನುಭವಿಸುವ ಮಕ್ಕಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಡಿ. ಬದಲಾಗಿ ಹೆಚ್ಚು ಹೆಚ್ಚು ದ್ರವಾಹಾರ ನೀಡಿ. 
  5. ಎದೆ ಹಾಲು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಆದುದರಿಂದ ಇದನ್ನು ಮಕ್ಕಳಿಗೆ ನೀಡುತ್ತಿರಿ. 
  6. ಮಕ್ಕಳು ತಿನ್ನಲು ಆರಂಭಿಸಿದ್ದರೆ, ಅಂಥ ಮಕ್ಕಳಿಗೆ ಡೈಹೇರಿಯಾ ಸಮಸ್ಯೆ ಉಂಟಾದಾಗ ಅನ್ನವನ್ನು ಚೆನ್ನಾಗಿ ಬೇಯಿಸಿ ಮುದ್ದೆ ಮಾಡಿ ನೀಡಿ. 
  7. ಸಮಸ್ಯೆಯ ತೀವ್ರತೆ ಹೆಚ್ಚಾದರೆ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಆರಂಭಿಸಿ.