ಬೆಲ್ಲ ಕಾಳುಮೆಣಸಿನ ಪಾನಕ ಮಾಡೋದು ಹೇಗೆ?

life | Thursday, March 15th, 2018
Suvarna Web Desk
Highlights

ಬೇಸಿಗೆ ಕಾಲಿಟ್ಟಾಗಿದೆ. ತಂಪು ತಂಪು ಪಾನೀಯಗಳನ್ನು ಎಷ್ಟು ಕುಡಿದರೂ ಸಾಕೋಗೋಲ್ಲ. ಎಳ್ಳನೀರು ಹಾಗೂ ಹೊರಗೆ ಸಿಗುವ ನೈಸರ್ಗಿಕ ಪಾನೀಯಗಳಿಗೋ ಸಿಕ್ಕಾಪಟ್ಟೆ ಬೆಲೆ. ಅದರ ಬದಲು ಮನೆಯಲ್ಲಿಯೇ ಕೆಲವು ಪಾನಕಗಳನ್ನು ಮಾಡಿ ಕುಡಿಯಬಹುದು. ರುಚಿಯೊಂದಿಗೆ ಬೇಸಿಗೆಯಲ್ಲಿ ಕಾಡುವ ಪಿತ್ತ ಸಂಬಂಧಿ ರೋಗಗಳಾದಿಯಾಗಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೂ ಈ ಪಾನಕ ಮನೆಮದ್ದಾಗುತ್ತದೆ.

ಈ ದೇಸೀ ಪಾನಿಯಗಳಲ್ಲಿ ಕಾಳುಮೆಣಸು, ಬೆಲ್ಲದ ಪಾನಕವೂ ಒಂದು. ಇದನ್ನು ಮಾಡೋದು ಹೇಗೆ?

ಬೇಕಾಗೋ ಸಾಮಾಗ್ರಿಗಳು

ಬೆಲ್ಲ (ಜೋನಿ ಬೆಲ್ಲವಾದರೆ ಒಳಿತು)-1 ಅಥವಾ ಸಿಹಿಗೆ ತಕ್ಕಷ್ಟು

ನಿಂಬೆ ಹಣ್ಣು-1 

ಕಾಳುಮೆಣಸಿನ ಪುಡಿ-1 ಟೀ ಸ್ಪೂನ್‌

ಕೇಸರಿ ದಳ ಮತ್ತು ಏಲಕ್ಕಿ ಪುಡಿ-ಸ್ವಲ್ಪ

ಉಪ್ಪು-ರುಚಿಗೆ ತಕ್ಕಷ್ಟು

ಮಾಡೋದು ಹೇಗೆ?

ಒಂದು ಲೀಟರ್‌ ನೀರಿಗೆ ಬೆಲ್ಲ ಪುಡಿ ಮಾಡಿ ಹಾಕಿ, ಜೋನಿ ಬೆಲ್ಲವಾದರೆ ಚೆನ್ನಾಗಿ ಕರಗಿಸಿ. ಇದಕ್ಕೆ ಕಾಳು ಮೆಣಸಿನ ಪುಡಿಯನ್ನೂ ಸೇರಿಸಿ. ನಂತರ ಕೇಸರಿ ದಳ ಹಾಗೂ ನಿಂಬೆ ರಸ ಸೇರಿಸಿ ಕುಡಿಯಿರಿ.

Comments 0
Add Comment

    Related Posts