ಭಾವುಕತೆಯನ್ನು ನಿಭಾಯಿಸುವುದು ಹೇಗೆ?

How to manage emotions
Highlights

ನಮ್ಮ ಹೆಚ್ಚಿನ ಭಾವುಕತೆಗೆ ದುಃಖಕ್ಕೆ ಕಾರಣ ನಮ್ಮ ಇಗೋ. ಅದಕ್ಕೆ ಸ್ವಾಭಿಮಾನದ ಬಣ್ಣ ಬಳಿಯುತ್ತಾರೆ ಕೆಲವರು. ಆದರೆ ಅಹಂಗೂ ಸ್ವಾಭಿಮಾನಕ್ಕೂ ಅಂತರವಿದ್ದೇ ಇದೆ. ಅಹಂ ನೆಗೆಟಿವ್ ಶೇಡ್‌ನಲ್ಲಿದ್ದರೆ ಸ್ವಾಭಿಮಾನ ಪಾಸಿಟಿವ್ ಶೇಡ್‌ನಲ್ಲಿರುತ್ತದೆ. ಜೆನ್ ಕತೆ ಓದಿದರೆ ಅದರಲ್ಲಿ ಬರುವ ಜೆನ್ ಸಂತರ ನಡವಳಿಕೆ ಅಹಂಅನ್ನು ಹೇಗೆ ನಿರ್ಲಕ್ಷಿಸಬೇಕು ಅನ್ನೋದನ್ನು ಹೇಳುತ್ತದೆ. 

‘ಭಾವುಕತೆ ಇರಬೇಕು. ಅದನ್ನು ಮ್ಯಾನೇಜ್ ಮಾಡುವುದೂ ಗೊತ್ತಿರಬೇಕು’  ನಮ್ಮ ಭಾವನೆಯನ್ನು ನಾವೇ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಅಥವಾ ನಮಗೆ ಹಿಡಿತವಿಲ್ಲದಿದ್ದರೆ ಈ ಅನಗತ್ಯ ಭಾವುಕತೆ ಮೂಗು ತೂರಿಸುತ್ತದೆ.

ಇಗೋ ಬಗ್ಗೆ ಹುಶಾರು

ನಮ್ಮ ಹೆಚ್ಚಿನ ಭಾವುಕತೆಗೆ ದುಃಖಕ್ಕೆ ಕಾರಣ ನಮ್ಮ ಇಗೋ. ಅದಕ್ಕೆ ಸ್ವಾಭಿಮಾನದ ಬಣ್ಣ ಬಳಿಯುತ್ತಾರೆ ಕೆಲವರು. ಆದರೆ ಅಹಂಗೂ ಸ್ವಾಭಿಮಾನಕ್ಕೂ ಅಂತರವಿದ್ದೇ ಇದೆ. ಅಹಂ ನೆಗೆಟಿವ್ ಶೇಡ್‌ನಲ್ಲಿದ್ದರೆ ಸ್ವಾಭಿಮಾನ ಪಾಸಿಟಿವ್ ಶೇಡ್‌ನಲ್ಲಿರುತ್ತದೆ. ಜೆನ್ ಕತೆ ಓದಿದರೆ ಅದರಲ್ಲಿ ಬರುವ ಜೆನ್ ಸಂತರ ನಡವಳಿಕೆ ಅಹಂಅನ್ನು ಹೇಗೆ ನಿರ್ಲಕ್ಷಿಸಬೇಕು ಅನ್ನೋದನ್ನು ಹೇಳುತ್ತದೆ.

‘ಹಸಿವಾದಾಗ ಊಟ, ದಣಿವಾದಾಗ ನಿದ್ದೆ .. ಇಷ್ಟೇ ಬದುಕು ಅನ್ನುತ್ತಾರವರು. ಅಲ್ಲಿ ಅಹಂನ ಮೂಗು ತೂರಿಸುವಿಕೆಯೇ ಇಲ್ಲ. ಅಹಂಗೆ ಘಾಸಿಯಾಗುವಂಥ ಮತ್ತೊಬ್ಬರು ಮಾಡುವ ಅವಮಾನ, ಬೈಗಳಗಳಿಗೆ ಅವರು ಪ್ರತಿಕ್ರಿಯಿಸುವುದೇ ಇಲ್ಲ. ಓಶೋ ಹೇಳ್ತಾರೆ, ಅಹಂನಿಂದ ಮುಕ್ತನಾದ ತಕ್ಷಣ ನಿನ್ನ ಬದುಕಿನಲ್ಲಿ ಆನಂದ ತುಂಬಿಕೊಳ್ಳುತ್ತದೆ ಅಂತ. ಹೀಗೆ ಅಹಂಅನ್ನು ಸಾಧ್ಯವಾದಷ್ಟು ನಿರ್ಲಕ್ಷಿಸಿ. ಆಗ ನೋವು ಕಡಿಮೆಯಾಗುತ್ತದೆ. ಭಾವುಕತೆ ಪಾಸಿಟಿವ್ ಆಗಿ ಪರಿವರ್ತನೆಯಾಗುತ್ತದೆ.  

ನೆಗೆಟಿವ್ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಆ ಭಾವನೆಗಳು ಹೇಗೆ ಬಂದವು ಅಂತ ಗುರುತಿಸಿ. ನಮ್ಮ ಆಸೆಗಳೇ ಬಹುಮುಖ್ಯ ಕಾರಣಗಳಾಗಿರುತ್ತವೆ. ಆಸೆಗಳು ಈಡೇರುವುದಿಲ್ಲ. ಆಗ ಮನಸ್ಸು ಉದ್ವಿಗ್ನವಾಗುತ್ತೆ. ಕೋಪ, ಸಿಟ್ಟಲ್ಲಿ ಕಣ್ಣೇ ಕಾಣುವುದಿಲ್ಲ. ಒಂದು ನಾಯಿಯನ್ನೇ ತೆಗೆದುಕೊಳ್ಳಿ, ಎಷ್ಟೇ ಸಿಟ್ಟಿದ್ದರೂ ನಾವೇನೂ ಮಾಡದಿದ್ದರೆ ಅದು ಕಚ್ಚಲು ಬರುವುದಿಲ್ಲ. ನಮ್ಮ ಕ್ರಿಯೆಗೆ ಮಾತ್ರ ಪ್ರತಿಕ್ರಿಯೆ ನೀಡುತ್ತದೆ. ನಾವು ಉದ್ವೇಗಕ್ಕೊಳಗಾಗಿ ಸಿಟ್ಟು ಹೆಚ್ಚಾದರೆ ಅದಕ್ಕೆ ಬಲಿಪಶು ನಮ್ಮ ಹೆಂಡತಿ/ಗಂಡ, ಮಕ್ಕಳು. ನೀವು ಬಹಳ ಪ್ರೀತಿಸುವ ಜೀವಗಳವು.

ಆಸೆಯೇ ದುಃಖಕ್ಕೆ ಕಾರಣ
ಇದನ್ನು ಬಹಳ ಹಿಂದೆ ಬುದ್ಧ ಹೇಳಿದ. ದುಃಖಕ್ಕೆ ಕಾರಣ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದರಿಂದ ಹೊರಬರೋದು ಯಾರಿಗೂ ಸಾಧ್ಯವಾಗುತ್ತಿಲ್ಲ.ಆಸೆಗಳು ಈಡೇರದಿದ್ದರೆ ಪರಿತಪಿಸಬೇಕು, ಅವುಗಳಿಗಾಗಿ ಹಂಬಲಿಸಬೇಕು. ಆಸೆಗಳು ಈಡೇರಿದರಷ್ಟೇ ಖುಷಿ ಪಡಬೇಕು ಅನ್ನುವ ನಿಯಮವನ್ನು ನಮಗೆ ನಾವೇ ಹೇರಿಕೊಂಡಿದ್ದೇವೆ. ಈ ನಿಯಮವನ್ನು ಮೊದಲು ಸಡಿಲಿಸಿ. ‘ಬೆಳಕನ್ನು ನೀನೇ ಕಂಡುಕೊಳ್ಳಬೇಕು. ಅದು ಇನ್ನೊಬ್ಬರಿಂದ  ಸಾಧ್ಯವಿಲ್ಲ’ ಅನ್ನುತ್ತಾನೆ ಬುದ್ಧ. ಭಾವುಕತೆಯ ಹರಿವು ನಮ್ಮ ಹತೋಟಿಯಲ್ಲಿದ್ದರೆ ಬೆಳಕು ಕಾಣುವುದು ಸುಲಭ. 

loader