ಜೀನ್ಸ್ ಬಳಕೆ ಮಾಡುತ್ತಾ ಬರುತ್ತಿದ್ದಂತೆ ಕಲರ್ ಫೇಡ್ ಆಗುತ್ತೆ, ಆಕರ್ಷಣೆ ಕಳೆದುಕೊಳ್ಳುತ್ತದೆ. ಹಳೇ ಜೀನ್ಸ್ ಹಾಕಿದರೆ ಲುಕ್ ಸಿಗುತ್ತಿಲ್ಲ ಅನ್ನೋ ಕೊರಗು ಬೇಡ. ಈ ಸಿಂಪಲ್ ಟ್ರಿಕ್ ಫಾಲೋ ಮಾಡಿದರೆ ಸಾಕು, ಜೀನ್ಸ್ ಹೊಚ್ಚ ಹೊಸದಾಗಿರುತ್ತದೆ.
ಪ್ರತಿ ದಿನ ಧರಿಸುವ ಭಟ್ಟೆ ಶುಭ್ರವಾಗಿರಬೇಕು, ಉತ್ತಮವಾಗಿರಬೇಕು ಹಾಗೂ ಹೊಸದಾಗಿ ಕಾಣಬೇಕು. ಇದು ಎಲ್ಲರ ಅಜೆಂಡಾ. ಆದರೆ ಒಂದು ಬಟ್ಟೆಯನ್ನು ಹಲವು ಭಾರಿ ಧರಿಸಿದಾಗ ದಿನ ಕಳೆದಂತೆ ಕಲರ್ ಫೇಡ್ ಆಗುವುದು ಸಹಜ. ಇನ್ನು ಬಟ್ಟೆ ಹರಿದು ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಜೀನ್ಸ್ ಹಾಳಾಗದಂತೆ, ಕಲರ್ ಫೇಡ್ ಆಗದಂತೆ ಅದೆಷ್ಟೇ ವರ್ಷ ಕಳೆದರೂ ಹೊಸತಾಗಿ ಇರಲು ಕೆಲ ಸಿಂಪಲ್ ಟ್ರಿಕ್ ಫಾಲೋ ಮಾಡಿದರೆ ಸಾಕು. ಪ್ರಮುಖವಾಗಿ ಜೀನ್ಸ್ ಒಗೆಯುವಾಗ, ಒಣಗಿಸುವಾಗ ಕೆಲ ತಪ್ಪುಗಳನ್ನು ಮಾಡದಿದ್ದರೆ ಸಾಕು.
ಗಾಳಿಯಲ್ಲಿ ಒಣಗಿಸುವುದು ಬೆಸ್ಟ್
ಜೀನ್ಸ್ ಬಟ್ಟೆಗಳನ್ನು ಬಿಸಿಲಿನ ಬದಲು, ಡ್ರೈಯರ್ ಬದಲು ಗಾಳಿಯಲ್ಲಿ ಒಣಗಿಸಬೇಕು. ಜೀನ್ಸ್ ಬಟ್ಟೆ ಒಗೆದ ಬಳಿಕ ಗಾಳಿಯಲ್ಲಿ ಒಣಗಲು ಬಿಡಬೇಕು. ಗಾಳಿಯಲ್ಲಿ ಜೀನ್ಸ್ ಬಟ್ಟೆ ಒಣಗಿಸಿದರೆ ಜೀನ್ಸ್ ಕಲರ್ ಫೇಡ್ ಆಗುವುದಿಲ್ಲ, ಬಟ್ಟೆಯ ಗುಣಮಟ್ಟ ಕಳೆದುಕೊಳ್ಳುವುದಿಲ್ಲ, ಗುಣಮಟ್ಟವೂ ಹಾಗೇ ಇರುತ್ತದೆ. ಜೀನ್ಸ್ ಒಣಗಿಸಲು ಡ್ರೈಯರ್ ಮಶಿನ್ ಅಥವಾ ಡ್ರೈಯರ್ ಗಾಳಿ ಬಳಸಿದರೆ ಜೀನ್ಸ್ ಬೇಗನೆ ಮಾಸುತ್ತದೆ. ಕಲರ್ ಫೇಡ್ ಆಗುತ್ತದೆ. ಡ್ರೈಯರ್ ಮಶಿನ್ ಬಟ್ಟೆಗೆ ಶಾಖ ನೀಡುತ್ತದೆ. ಇದರಿಂದ ಬಟ್ಟೆ ಬೇಗನೆ ಒಣಗುತ್ತದೆ. ಆದರೆ ಇದು ಜೀನ್ಸ್ ಬಟ್ಟೆಯ ನಾರುಗು ಅಥವಾ ದಾರ ಸಡಿಲಗೊಂಡು ಶೇಪ್ ಕಳೆದುಕೊಳ್ಳುತ್ತದೆ. ಗುಣಮಟ್ಟ ಹಾಳಾಗುತ್ತದೆ.
ಗಾಳಿಯಲ್ಲಿ ಒಣಗಿಸಿದರೆ ಜೀನ್ಸ್ ಬಟ್ಟೆ ಕುಗ್ಗುವುದಿಲ್ಲ. ನೈಸರ್ಗಿಕವಾಗಿ ಬಟ್ಟೆ ಒಣಗಲಿದೆ. ಹೀಗಾಗಿ ಯಾವುದೇ ಇತರ ಪರಿಣಾಮಗಳು ಬಟ್ಟೆ ಮೇಲೆ ಬೀರುವುದಿಲ್ಲ. ಈ ವಿಧಾನದಿಂದ ಜೀನ್ಸ್ ಹೆಚ್ಚು ಕಾಲ ಹೊಸದಾಗಿ ಕಾಣುತ್ತದೆ.
ನೇರ ಬಿಸಿಲಿಗೆ ಹಾಕಬೇಡಿ
ಜೀನ್ಸ್ ಒಣಗಿಸುವಾಗ ನೇರವಾಗಿ ಬಿಸಿಲಿಗೆ ಹಾಕಬೇಡಿ. ಇದರಿಂದ ಬಹುಬೇಗ ಜೀನ್ಸ್ ಬಣ್ಣ ಮಾಸುತ್ತದೆ. ಬಿಸಿಲಿಗೆ ಜೀನ್ಸ್ ತರಗೆಲೆಗಳಂತೆ ಆಗುತ್ತದೆ. ಬಿಸಿಲಿಗಿಂತ ಗಾಳಿಯಾಡುವ ಪ್ರದೇಶದಲ್ಲಿ ನೆರಳಿನಲ್ಲಿ ಜೀನ್ಸ್ ಒಣಗಿಸುವುದು ಸೂಕ್ತ. ಒಂದು ವೇಳೆ ಬಿಸಿಲಿಗೆ ಜೀನ್ಸ್ ಒಣಗಿಸುತ್ತಿದ್ದರೆ ಉಲ್ಟಾ ಮಾಡಿ ಒಣಗಿಸಿ.
ಡ್ರೈಯರ್ ಬಳಕೆ ಬೇಡ
ಜೀನ್ಸ್ ಒಣಗಿಸಲು ಡ್ರೈಯರ್ ಬಳಸುವುದು ಸಾಮಾನ್ಯ. ಡ್ರೈಯರ್ನಿಂದ ಬಹು ಬೇಗನೆ ಜೀನ್ಸ್ ಒಣಗುತ್ತದೆ. ಸಾಮಾನ್ಯವಾಗಿ ವಾಶಿಂಗ್ ಮಶಿನ್ನಲ್ಲಿ ಬಟ್ಟೆ ಒಗೆದು ಕೊನೆಗೆ ಡ್ರೈಯರ್ ಮಾಡಿ ನೀಡುತ್ತದೆ. ಈ ಪೈಕಿ ವಾಶಿಂಗ್ ಮಶಿನ್ನಲ್ಲಿ ಬಟ್ಟೆ ಒಗೆಯಲು ಮಾತ್ರ ಸೂಚನೆ ನೀಡಿದರೆ ಸಾಕು. ಡ್ರೈಯರ್ ಬದಲು ಗಾಳಿಯಲ್ಲಿ ಹಾಕಿ ಒಣಗಿಸಿದರೆ ಜೀನ್ಸ್ ವರ್ಷ ಕಳೆದರೂ ಹೊಸದಾಗಿ ಕಾಣಿಸುತ್ತದೆ.


