ಮನೆ ಮುಂದಿರಲಿ ಆಕರ್ಷಕ ಅಂಗಳ...

ಚೆಂದದ ಆಕರ್ಷಕ ಮನೆ ಮುಂದೆ ಇರೋಸ ಅಲ್ಪ ಸ್ವಲ್ಪ ಜಾಗದಲ್ಲಿಯೇ ಕೆಲವು ಗಿಡಗಳನ್ನು ನೆಟ್ಟರೆ ಮನೆಯ ಸೌಂದರ್ಯವೇ ಹೆಚ್ಚುತ್ತದೆ. ಅಷ್ಟಕ್ಕೂ ಈ ಪುಟ್ಟ ಗಾರ್ಡನ್ ಹೇಗಿದ್ದ

How to keep garden and courtyard attractive

ಇಷ್ಟಪಟ್ಟು ಕಟ್ಟಿದ ಮನೆ ಚಂದವಾಗಿದ್ದರೆ ಸಾಕಾ? ಮನೆ ಮುಂದಿನ ಅಂಗಳವೂ ಕಲಾತ್ಮಕವಾಗಿರಬೇಡವೆ? ಅದರಿಂದ ಮನೆಯ ಶೋಭೆಯೂ ಹೆಚ್ಚುತ್ತದೆ. ಅಂಗಳವನ್ನು ಅಂದವಾಗಿಡಲು ಇಲ್ಲಿವೆ ಕೆಲವು ಟಿಪ್ಸ್...

  • ನಿತ್ಯವೂ ಬಣ್ಣಬಣ್ಣದ ಹೂವರಳಿಸುವ ಗಿಡಗಳು ಸಾಕಷ್ಟಿವೆ. ಅದನ್ನು ನೆಡುವುದರಲ್ಲೂ ಕಲಾತ್ಮಕತೆ ಇರಲಿ. 
  • ಪಾತ್ರೆ ತೊಳೆದು ದೂರ ಚೆಲ್ಲುವ ನೀರನ್ನೂ ಸರಿಯಾಗಿ ಬಳಸಿದರೆ ಅಂಗಳದ ಗಿಡಗಳ ಬದುಕಿಗೆ ದೊಡ್ಡ ಕೊಡುಗೆಯಾಗುತ್ತದೆ.
  • ಅಂಗಳದ ಅಲಂಕಾರ ಹೆಚ್ಚಲು ಸಹಕರಿಸುವ ಕಲ್ಲಿನ ಬಾನಿ ಕಡಮೆ ಬೆಲೆಗೆ ಸಿಗುತ್ತವೆ. 
  • ಕೊಂಚ ನೆರಳಿನಲ್ಲಿ ಬಾನಿಯನ್ನಿರಿಸಿ, ನೀರು ತುಂಬಿ ಪುಟ್ಟ ಜಾತಿಯ ವರ್ಣರಂಜಿತ ತಾವರೆಗಳನ್ನು ಬೆಳೆಯಿಸಿ. 
  • ಅಂತರಗಂಗೆಯಂಥ ನೀರಿನಲ್ಲಿಯೇ ಬೆಳೆಯುವ ಸಸ್ಯಗಳು ಅಂಗಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. 
  • ಬಣ್ಣದ ಎಲೆಗಳ ಕ್ರೋಟನ್, ಬೋನ್ಸಾಯ್ ಗಿಡಗಳು, ಗುಲಾಬಿ ಸೇವಂತಿಗೆ, ಮಲ್ಲಿಗೆ ಎಲ್ಲವೂ ಕಲ್ಲಿನ ಕುಂಡಗಳಲ್ಲಿ ಬೆಳೆದು ಹೂವರಳಿದರೆ ಅಂಗಳಕ್ಕೆ ಸಿಗುವ ಚಂದವೇ ಬೇರೆ. 
  • ನದಿಗಳಲ್ಲಿ ಸಿಗುವ ಕಲ್ಲು ಮತ್ತು ಕೊಂಚ ಸಿಮೆಂಟ್ ಬಳಸಿ ಕುಂಡಗಳನ್ನು ಸ್ವತಃ ತಯಾರಿಸಿಕೊಳ್ಳಬಹುದು.
  • ಮನೆ ಕಟ್ಟುವಾಗ ವ್ಯರ್ಥವೆಂದು ಬಿಸಾಡುವ ಜಂಬಿಟ್ಟಿಗೆಗಳು, ಗ್ರಾನೈಟಿನ ತುಂಡುಗಳು ಇವೆಲ್ಲವನ್ನೂ ಅಂಗಳದಲ್ಲಿಡಿ. 
  • ಹೂಗಿಡಗಳು ಅಥವಾ ಮರಗಳ ಬುಡಕ್ಕೆ ಆಧಾರವಾಗುವ ಚೆಲುವಾದ ಕಟ್ಟೆಗಳನ್ನು ನಿರ್ಮಿಸಿಕೊಳ್ಳಿ. 
  • ಇಟ್ಟಿಗೆಗಳಿಂದ ವಿಶಾಲವಾದ ವೃತ್ತಾಕಾರದ ಕಟ್ಟೆ ಕಟ್ಟಿ ಅದರ ನಡುವೆ ಒಂದು ಕಾರಂಜಿ ಹಾರುವಂತೆ ಹಾರಲು ಮಾಡಲು ಹೆಚ್ಚು ವ್ಯಯಿಸುವ ಅಗತ್ಯವಿಲ್ಲ.
  • ಎಲ್ಲಿ ಯಾವ ಹೂಗಿಡ ನೆಡಬೇಕೆಂದು ಯೋಚಿಸಿ, ನಿರ್ಧರಿಸಿ. 
  • ಹಸಿರುಡುಗೆಯ ಅಂಗಳ ಮನಸ್ಸಿಗೆ ಸದಾ ಮುದ ನೀಡಬಲ್ಲುದು.
  • ಹಳೆ ಪ್ಲಾಸ್ಟಿಕ್ ಬಕೆಟ್, ಮೆಡಿಕಲ್ ಶಾಪ್‌ನಲ್ಲಿ ಸಿಗುವ ನಿರುಪಯುಕ್ತ ಪ್ಲಾಸ್ಟಿಕ್ ಡಬ್ಬಿಗಳ ಒಡಲಲ್ಲಿಯೂ ಮಣ್ಣು ತುಂಬಿ, ಗಿಡ ನೆಡಿ.
  • ನೀರಿನ ಮಿತ ಬಳಕೆಗೆ, ಗೊಬ್ಬರದ ಅಪವ್ಯಯ ನಿವಾರಣೆಗೆ ಕುಂಡಗಳಲ್ಲಿ ಗಿಡ ನೆಡುವುದು ಯೋಗ್ಯ. ಅಲ್ಲದೇ ಬೇಕಾದಲ್ಲಿಗೂ ಅದನ್ನು ಒಯ್ಯಬಹುದು. 
  • ಕಡಿಮೆ ಜಾಗ ಬಳಸಿ, ಹೆಚ್ಚು ಗಿಡ ಬೆಳೆಯಲು ಹಾಗೂ ನಿರ್ವಹಣಾ ಕಾರ್ಯವನ್ನು ಸುಲಭಗೊಳಿಸುವಂತಿರಲಿ ನಿಮ್ಮ ಗಾರ್ಡನ್.  ಒಟ್ಟಿನಲ್ಲಿ ಜಾಣತನದಿಂದ ಅಂಗಳದ ಸೌಂದರ್ಯ ಹೆಚ್ಚಿಸಿ. ಗಾರ್ಡನ್‌ ಚೊಕ್ಕವಾಗಿಡಲು ಅಗತ್ಯ ವಸ್ತುಗಳು ನಿಮ್ಮ ಬಳಿ ಇರಲಿ...
Latest Videos
Follow Us:
Download App:
  • android
  • ios