ಅಂದವೆಂದರೆ ಹೊರಗಿನಿಂದ ಚೆನ್ನಾಗಿ ಕಾಣಿಸುವುದಲ್ಲ, ಅಥವಾ ಮುಖದ ಕಲೆಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುವುದಲ್ಲ. ಒಳಗಿನಿಂದ ಆರೋಗ್ಯ, ನೆಮ್ಮದಿಯಿದ್ದಾಗ ಅದು ನಿಮ್ಮ ಮುಖದಲ್ಲೂ ಪ್ರತಿಫಲಿಸುತ್ತದೆ. ಮೊಡವೆಗಳು, ಕಲೆ, ಬ್ಲ್ಯಾಕ್‌ಹೆಡ್ಸ್ ಎಲ್ಲವೂ ಒಳಗಿನಿಂದ ಏನೋ ಸರಿಯಿಲ್ಲ ಎಂಬುದನ್ನು ದೇಹ ನಿಮಗೆ ಸೂಚಿಸುವ ಪರಿ. ಕ್ರೀಮ್‌ಗಳು ಮೇಲಿನಿಂದ ಬ್ಲ್ಯಾಕ್‌ಹೆಡ್ಸ್ ತೆಗೆದುಹಾಕಬಹುದು.

ಫೇಶಿಯಲ್, ಪೀಲ್ಸ್ ಸ್ವಲ್ಪ ಮಟ್ಟಿಗೆ ಸಹಾಯಕವಾಗಬಹುದು. ಆದರೆ ಅವು ಅಲ್ಲಿಗೆ ಮುಗಿದುಹೋಯ್ತೆಂದು ಸಮಾಧಾನ ಪಡುವಂತಿಲ್ಲ. ಏಕೆಂದರೆ ಒಳಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೂ ಅವು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಈ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬ್ಲ್ಯಾಕ್‌ಹೆಡ್ಸ್ ಸೇರಿದಂತೆ ಮುಖದ ಕಲೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

1. ಸರಿಯಾದ ಡಯಟ್

ಸರಿಯಾದ ಡಯಟ್ ಎಂದರೆ ಹೆಚ್ಚು ಹೆಚ್ಚು ತರಕಾರಿ, ಹಣ್ಣುಗಳು, ನಟ್ಸ್ ಹಾಗೂ ಸೀಡ್ಸ್. ಮೊಸರು ಹಾಗೂ ಹಣ್ಣುಗಳಿಂದ ಸ್ಮೂತಿ ತಯಾರಿಸಿಕೊಂಡು ಸೇವಿಸಿ, ಡ್ರೈಫ್ರೂಟ್ ಲಡ್ಡು ತಿನ್ನಿ, ಇವುಗಳನ್ನು ಹೇಗೆ ಬೇಕೋ ಹಾಗೆಲ್ಲ ಬಳಸಿ. ನಟ್ಸ್‌ಗಳಲ್ಲಿರುವ ಅಧಿಕ ಆ್ಯಂಟಿಆಕ್ಸಿಡೆಂಟ್ಸ್ ಚರ್ಮದಿಂದ ಕಲೆಕೊಳೆಗಳನ್ನು ಹೊರಹಾಕುತ್ತವೆ. ಕುಂಬಳಕಾಯಿ  ಬೀಜಗಳು ಹಾಗೂ ಬ್ರೆಜಿಲ್ ನಟ್ಸ್‌ಗಳಲ್ಲಿ ಜಿಂಕ್ ಅಪಾರ ಪ್ರಮಾಣದಲ್ಲಿದ್ದು, ಅವು ಬ್ಲ್ಯಾಕ್‌ಹೆಡ್ಸ್‌ನಿಂದ ನಿಮ್ಮನ್ನು ದೂರವಿಡುತ್ತವೆ. ಜಂಕ್ ಫುಡ್, ಎಣ್ಣೆಪದಾರ್ಥಗಳನ್ನು ದೂರವಿಡಿ. ಅದರಲ್ಲೂ ಎಣ್ಣೆಚರ್ಮದವರು ಎಣ್ಣೆಪದಾರ್ಥಗಳನ್ನು ಸೇವಿಸಿದರೆ ಮುಖದಲ್ಲಿ ಹೆಚ್ಚು ಮೊಡವೆಗಳು ಸೇರಿದಂತೆ ಎಲ್ಲ ಕಲೆಗಳು ಉದ್ಭವಿಸುತ್ತವೆ.

ಕಂಪ್ಯೂಟರ್ ನೋಡಿ ಕತ್ತು ನೋವು ಓಡಿಸಲು ಇಲ್ಲಿವೆ ಸರಳ ಕಸರತ್ತು

2. ನೀರು

ಕೋಲಾ, ಕೋಕ್ ಹಾಗೂ ಇತರೆ ಸಿಂಥೆಟಿಕ್ ಜ್ಯೂಸ್‌ಗಳು ಜನರಿಗೆ ನೀರು ಕುಡಿಯುವುದನ್ನೇ ಮರೆಯುವಂತೆ ಮಾಡಿವೆ. ಆದರೆ, ಅವುಗಳು ಸಕ್ಕರೆ ತುಂಬಿದ ಜಂಕ್ ಹೊರತು ಬೇರೆಯೇನಲ್ಲ. ನಮ್ಮ ದೇಹದ ಶೇ.70ರಷ್ಟು ಭಾಗ ಕೇವಲ ನೀರಿನಿಂದಲೇ ತುಂಬಿದೆ. ನೀರು ದೇಹದಿಂದ ಟಾಕ್ಸಿನ್ಸ್ ಹೊರ ಹಾಕುತ್ತದೆ. ಹೀಗಾಗಿ, ಹೆಚ್ಚಾಗಿ ನೀರು ಸೇವಿಸುತ್ತಿದ್ದರೆ ಅದು ನೈಸರ್ಗಿಕವಾಗಿಯೇ ಬ್ಲ್ಯಾಕ್‌ಹೆಡ್ಸ್‌ಗಳನ್ನು ಕೂಡಾ ತೆಗೆಯುತ್ತದೆ. ಅಲ್ಲದೆ, ಈ ಟಾಕ್ಸಿನ್‌ಗಳೇ ಬ್ಲ್ಯಾಕ್‌ಹೆಡ್ಸ್ ಹುಟ್ಟಲು ಕಾರಣವಾಗುವುದು. ಜೊತೆಗೆ, ಚರ್ಮವು ಡಿಹೈಡ್ರೇಟ್ ಆಗುವುದು ತಪ್ಪಿಸಿ ಮಾಯಿಶ್ಚರ್ ಒದಗಿಸುತ್ತದೆ. ಒಣಚರ್ಮದಿಂದ ಮುಕ್ತಿ ನೀಡುತ್ತದೆ. ಅಲ್ಲದೆ, ನೀರು ಡೆಡ್‌ಸ್ಕಿನ್ ಸೆಲ್‌ಗಳನ್ನೂ ಹೊರ ಹಾಕುವುದರಿಂದ ಕಟ್ಟಿಕೊಂಡ ರಂಧ್ರಗಳು ತೆರೆದುಕೊಳ್ಳುತ್ತವೆ. ತನ್ನಂತಾನೇ ಬ್ಲ್ಯಾಕ್‌ಹೆಡ್ಸ್, ವೈಟ್‌ಹೆಡ್ಸ್ ಹೊರಹೋಗುತ್ತವೆ. 

3. ಪ್ರೊಬಯೋಟಿಕ್ಸ್

ನಮ್ಮ ದೇಹ ಕೋಟಿಗಟ್ಟಲೆ ಬ್ಯಾಕ್ಟೀರಿಯಾಗಳನ್ನು ಹೊಂದಿದ ಮಿನಿ ಎಕೋಸಿಸ್ಟಂ ಇದ್ದಂತೆ. ಅಲ್ಲಿ ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳೆರಡೂ ಇವೆ. ಯಾವಾಗ ಒಳ್ಳೆಯದಕ್ಕಿಂತ ಕೆಟ್ಟ ಬ್ಯಾಕ್ಟೀರಿಯಾಗಳೇ ಹೆಚ್ಚುತ್ತವೋ, ಆದಾಗ ಆರೋಗ್ಯವೂ ಕೆಡುತ್ತದೆ, ಬ್ಲ್ಯಾಕ್‌ಹೆಡ್ಸ್ ಕೂಡಾ ಏಳುತ್ತದೆ. ಗುಡ್ ಬ್ಯಾಕ್ಟೀರಿಯಾ ಹೆಚ್ಚಿಸಲು ನೀವು ಪ್ರೊಬಯೋಟಿಕ್ಸ್ ಸೇವನೆ ಹೆಚ್ಚು ಮಾಡಬೇಕು. ಬಾಳೆಹಣ್ಣು, ಈರುಳ್ಳಿ, ಜೇನುತುಪ್ಪಗಳಲ್ಲಿ ಪ್ರೊಬಯೋಟಿಕ್ಸ್ ಹೆಚ್ಚಾಗಿರುತ್ತದೆ.

ಒಣ ತ್ವಚೆಯ ಒದ್ದೋಡಿಸೋಕೆ ಇವನ್ನು ತಪ್ಪದೇ ತಿನ್ನಿ!

4. ಒತ್ತಡ

ಒತ್ತಡವು ಸಾಮಾನ್ಯವಾಗಿ ಮುಖದ ಕಲೆ, ಮೊಡವೆ, ಬ್ಲ್ಯಾಕ್‌ಹೆಡ್ಸ್ ಎಲ್ಲಕ್ಕೂ ಕಾರಣವಾಗುತ್ತದೆ. ನೀವು ಸ್ಟ್ರೆಸ್‌ಗೆ ಒಳಗಾದಾಗ ದೇಹದಲ್ಲಿ ಹಾರ್ಮೋನುಗಳು ಏರುಪೇರಾಗುತ್ತವೆ ಜೊತೆಗೆ ಸೆಬಮ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಇದು ಚರ್ಮದ ಮೇಲಿನ ರಂಧಗಳನ್ನು ಮುಚ್ಚಿ ಬ್ಲ್ಯಾಕ್‌ಹೆಡ್ಸ್ ಹುಟ್ಟಲು ಕಾರಣವಾಗುತ್ತದೆ. ಹೀಗಾಗಿ, ನೀವು ಸ್ಟ್ರೆಸ್‌‌ ಹೋಗಿಸಿಕೊಂಡು ಸಂತೋಷವಾಗಿದ್ದರೆ ನೈಸರ್ಗಿಕವಾಗಿಯೇ ಮುಖ ಕಲೆರಹಿತವಾಗಿ ಸಂತೋಷವನ್ನು ಪ್ರತಿಫಲಿಸುತ್ತದೆ.