ಕಂದಮ್ಮನ ಕೋಪ ಕಂಟ್ರೋಲ್ ಮಾಡೋದು ಹೇಗೆ?

How to control kids arrogant behaviour
Highlights

ಮಾತು ಮಾತಿಗೂ ಸಿಟ್ಟಾಗುವ, ಹೊಡೆದಾಡುವ, ಆಟದ ಸಾಮಾನುಗಳನ್ನು ತುಂಡರಿಸುವ ಮಕ್ಕಳ ಕುರಿತು ಅವರ ಪೋಷಕರು ಚಿಂತಿತರಾಗುವುದು ಸಹಜ. ಹೀಗೆ ವರ್ತಿಸುವ ಮಕ್ಕಳ ಕುರಿತು ಹೆಚ್ಚು ಗಮನ ಹರಿಸುವುದು ಅತಿ ಅಗತ್ಯ. ಸಾಮಾನ್ಯವಾಗಿ ಮಕ್ಕಳು ಅವರ ಬೇಡಿಕೆಗಳನ್ನು ಪೂರೈಸದಿರುವಾಗ ಮಕ್ಕಳು ಈ ರೀತಿ ವರ್ತಿಸುತ್ತಾರೆ. ಹೀಗಿರುವಾಗ ಪೋಷಕರು ಮಕ್ಕಳ ಬೇಡಿಕೆಗಳನ್ನು ಪೂರೈಸುತ್ತಾ ಹೋಗುತ್ತಾರೆ. ಇದರಿಂದ ಮಕ್ಕಳು ಇನ್ನಷ್ಟು ಹಠವಾದಿಗಳಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹತೋಟಿಗೆ ತರಲು ಇಲ್ಲಿವೆ ಟಿಪ್ಸ್...

 ಮಕ್ಕಳಿಗೆ ಉದಾಹರಣೆ ಮೂಲಕ ಇಂಥ ಸಿಟ್ಟು ಪ್ರದರ್ಶಿಸುವುದು ಒಳ್ಳೆಯದಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

  • -ಮಕ್ಕಳಿರುವಾಗ ಹಿಂಸಾತ್ಮಕ ದೃಶ್ಯಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ನೋಡಬೇಡಿ. ಮಕ್ಕಳು ಬೇಗ ಅವುಗಳನ್ನು ಗ್ರ್ಯಾಸ್ಪ್ ಮಾಡಿಕೊಳ್ಳುತ್ತಾರೆ. 
  •  ಮಕ್ಕಳನ್ನು ಪದೇ ಪದೇ ಸಿಟ್ಟುಗೊಳ್ಳುವವರೊಂದಿಗೆ ಹೆಚ್ಚು ಬೆರೆತುಕೊಳ್ಳದಂತೆ ನೋಡಿಕೊಳ್ಳಿ. ವಿಶೇಷವಾಗಿ ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿರುವವರೊಂದಿಗೆ ಹೆಚ್ಚು ಬೆರೆತುಕೊಳ್ಳದಂತೆ ನಿಗಾವಹಿಸಿ.
  • ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸದಿರಿ. ಇದರಿಂದ ಅವರ ಕೋಪಕ್ಕೆ ನೀವು ಪ್ರೋತ್ಸಾಹಿಸಿದಂತಾಗುತ್ತದೆ.
  • ಮಕ್ಕಳಿಗೆ ದೈಹಿಕವಾಗಿ ಹಿಂಸಿಸದಿರಿ, ಇದರಿಂದ ಮಕ್ಕಳು ಇನ್ನಷ್ಟು ಹಠಮಾರಿಗಳಾಗುತ್ತಾರೆ.
  • ಮಕ್ಕಳ ಕೋಪಕ್ಕೆ ಕಾರಣವೇನೆಂಬುವುದನ್ನು ತಿಳಿದುಕೊಳ್ಳಲು ಯತ್ನಿಸಿ, ಕೆಲವೊಂದು ಬಾರಿ ಮಕ್ಕಳು ನಿಮ್ಮ ಗಮನವನ್ನು ತನ್ನತ್ತ ಸೆಳೆಯಲು ಹಾಗೆ ವರ್ತಿಸಬಹುದು.
  • ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ತೋರಿಸುವುದು ಅತಿ ಅಗತ್ಯ. ನೀವು ಅವರನ್ನು ಪ್ರೀತಿಸುತ್ತೀರಿ ಎಂಬುವುದನ್ನು ಮನವರಿಕೆಯಾಗುವಂತೆ ಮಾಡಿ. ಕೇಳಿದ್ದನ್ನೆಲ್ಲ ಕೊಡಿಸಿದರೆ ಮಾತ್ರ ಮಕ್ಕಳ ಮೇಲೆ ಪ್ರೀತಿ ತೋರುತ್ತಿದ್ದೀರಿ ಎಂದರ್ಥವಲ್ಲ ಎಂಬುವುದು ನೆನಪಿರಲಿ.
loader