Asianet Suvarna News Asianet Suvarna News

ಸಿಟ್ಯಾಕೆ ಸಿಡುಕ್ಯಾಕೆ?

ಬದಲಾದ ಜೀವನ ಶೈಲಿಯಿಂದ ನಾವು ಸಿಟ್ಟಿನ ದಾಸರಾಗುತ್ತಿದ್ದೇವೆ. ಪ್ರತಿ ದಿನದ ಆಗುಹೋಗುಗಳಲ್ಲಿ, ಮನಸ್ಸಿನ ಒತ್ತಡವೇ ಸಿಟ್ಟಿಗೆ ಮೂಲ ಕಾರಣ. ಈ ಸಿಟ್ಟು ನಮ್ಮ ಆರೋಗ್ಯವನ್ನಲ್ಲದೇ, ನಮ್ಮ ಸುತ್ತಮುತ್ತಲಿರುವವರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಿಪಿ, ಶುಗರ್‌ನಂಥ ರೋಗಗಳು ಕಾಡುವುದೂ ಹೆಚ್ಚುತ್ತದೆ. 

How to control anger

* ಸಿಟ್ಟು ಬರುತ್ತಿದೆ ಅಥವಾ ಬಂದಾಗಿದೆ ಎಂಬುವುದು ಅರಿವಿಗೆ ಬರುತ್ತಿದ್ದಂತೆ 1...2...3...4 ಹೇಳಲು ಸ್ಟಾರ್ಟ್ ಮಾಡಿ. ಪ್ರತಿ ಒಂದು ಕೌಂಟ್ ಬಂದಾಗ ಹಾಸ್ಯಾಸ್ಪದ ವಿಚಾರಗಳನ್ನು ನೆನಪಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಗು ಬಂದು, ಕೋಪ ಕೊನೆಗೊಳ್ಳುತ್ತದೆ. 

* ವಿನಾ ಕಾರಣ ನಿಮ್ಮ ಗೆಳೆಯರ, ಕುಟುಂಬದ ಸದಸ್ಯರ ಮೇಲೆ ರೇಗಾಡುವುದರಿಂದ, ಕೋಪದಿಂದ ಬಾಗಿಲನ್ನು ಬಡಿಯುವುದರಿಂದ ಯಾವುದೇ ಸಮಸ್ಯೆಗೂ ಸಿಗೋಲ್ಲ ಪರಿಹಾರ. ಒಂದು ವೇಳೆ ಈ ರೀತಿಯ ವರ್ತನೆ ನೀವು ತೋರುವುರಾದರೆ ಇದು ಇತರರ ಕೋಪಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಹೀಗಾಗಿ ಸಿಟ್ಟು ಬಂದ ವೇಳೆ ಏಕಾಂತವಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮ್ಮ ಕೋಪವನ್ನು ನಿಮ್ಮಿಷ್ಟದಂತೆ ಹೊರ ಹಾಕಿ. ಅಥವಾ ಮನಸಾರೆ ಅತ್ತು ಬಿಡಿ. ಮನೆ ಮಹಡಿ ಇದಕ್ಕೆ ಸೂಕ್ತ ಸ್ಥಳ. 

* ಆಫೀಸ್‌ನಲ್ಲಿ ನಿಮ್ಮ ಇಂದಿನ ದಿನ ಚೆನ್ನಾಗಿಲ್ಲ ಎಂಬ ಕಾರಣಕ್ಕೂ ಕೋಪ ಬರುತ್ತೆ. ಇಂಥ ಸಂದರ್ಭಗಳಲ್ಲಿ ನಿಮ್ಮ ಆಫೀಸ್ ಟೆನ್ಷನ್‌ಗಳನ್ನು ಮನೆಯಿಂದ ದೂರವಿಡಲು ಯತ್ನಿಸಿ. ಕೆಲವು ಸಮಯ ನಿಮ್ಮೊಂದಿಗೆ ನೀವು ಕಳೆದು, ನಿಮ್ಮನ್ನು ನೀವೇ ಸಂತೈಸಿಕೊಳ್ಳಿ. ಇಲ್ಲವಾದರೆ ಮಸಾಜ್ ಮಾಡಿಸಿಕೊಳ್ಳಿ, ಶಾಪಿಂಗ್‌ಗೆ ಹೋಗಿ. ಇವೆಲ್ಲವೂ ನಿಮಗೆ ಉತ್ತಮ ಭಾವನೆ ಮೂಡಿಸುವುದರೊಂದಿಗೆ, ರಿಲ್ಯಾಕ್ಸ್ ಆಗಲು ಸಹಕರಿಸುತ್ತದೆ.

* ದೈಹಿಕ ವ್ಯಾಯಾಮ ನಮ್ಮ ಮೆದುಳಿನಲ್ಲಿ ಎಂಡೋರ್ಫಿನ್ ಎಂಬ ಅಂಶವನ್ನು ಬಿಡುಗಡೆಗೊಳಿಸುತ್ತದೆ. ಇದು ನಮ್ಮ ಬಗ್ಗೆ ನಾವು ಒಲವು ಮೂಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಜೀವನ ಕ್ರಮದಲ್ಲಿ ಪ್ರತಿದಿನ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಕೋಪ ತಡೆಗಟ್ಟುವುದರೊಂದಿಗೆ, ಅದನ್ನು ಎದುರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ. 

* ನಮ್ಮ ಕೋಪವನ್ನು ಇತರರ ಮೇಲೆ ತೋರಿಸುವುದು ಬಹಳ ಸುಲಭ. ಆದರೆ ಈ ರೀತಿ ನಡೆದುಕೊಳ್ಳುವ ಬದಲು ಆ ಕ್ಷಣ ನೀವಿದ್ದ ಸ್ಥಳದಿಂದ ಎದ್ದು, ಸ್ವಲ್ಪ ಹೊತ್ತು ಹೊರಗೆ, ತಿರುಗಾಡಿ ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಿ.

* ನಿಮ್ಮ ಕೋಪ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಹಾಗೂ ಈ ಕೋಪ ನಿಮ್ಮ ಸಂಬಂಧಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದಾದರೆ ಆಪ್ತ ಸಲಹೆ ಪಡೆಯಿರಿ. ಹಾಗಂತ ಆಪ್ತ ಸಲಹೆಗಾಗಿ ಮನಃಶಾಸ್ತ್ರರ ಬಳಿ ಹೋಗಬೇಕೆಂದೇನೂ ಇಲ್ಲ. ನಿಮ್ಮ ಆಪ್ತರ ಬಳಿ ಹೇಳಿ ಕೊಂಡರೂ ಸಾಕು. 

ಈ ಸಿಂಪಲ್ ಟಿಪ್ಸ್ ಅನುಸರಿಸಿ, ಕೋಪ ತಾಪಕ್ಕೆ ಬ್ರೇಕ್ ಹಾಕಿ. ಕೋಪವಿಲ್ಲವೆಂದರೆ ಸಾಕಷ್ಟು ಸಮಸ್ಯೆಗಳೂ ದೂರವಾಗುವುದರಲ್ಲಿ ಅನುಮಾನವೇ ಇಲ್ಲ.

 

Follow Us:
Download App:
  • android
  • ios