Asianet Suvarna News Asianet Suvarna News

ಅಳುವ ಕಂದನ ರಮಿಸೋದು ಹೇಗೆ: ಮಕ್ಕಳ ವೈದ್ಯರ ವಿಡಿಯೋ ಸಖತ್ ವೈರಲ್

ಮಕ್ಕಳ ವೈದ್ಯರೊಬ್ಬರು ಕೂಸೊಂದನ್ನು ನಿರಾಳವಾಗಿ ಸಮಾಧಾನಪಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದನ್ನು ಬರೋಬ್ಬರಿ ನಾಲ್ಕು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

How to comfort crying infant, physician video goes viral akb
Author
First Published Sep 26, 2022, 5:18 PM IST

ಬೆಂಗಳೂರು: ಮಗು ನಗು ನಗುತ್ತಾ ಸಮಾಧಾನವಾಗಿದ್ದರಷ್ಟೇ ಪೋಷಕರಿಗೆ ನಿರಾಳ. ಮಗು ರಚ್ಚೆ ಹಿಡಿದು ಅಳಲು ಶುರು ಮಾಡಿದರೆ ಪೋಷಕರಿಗೆ ಅದೇ ಒಂದು ದೊಡ್ಡ ತಲೆನೋವು. ಮೊದಲನೆಯದಾಗಿ ಮಾತು ಬಾರದ ಕಂದ ಏಕೆ ಅಳುತ್ತಿದ್ದಾನೆ/ದ್ದಾಳೆ ಎಂಬುದರ ಅರಿವಾಗದೇ ಇರುವುದು ಇದಕ್ಕೆ ಮುಖ್ಯ ಕಾರಣ ಎದೆ ಹಾಲು ಕುಡಿಯುವ ಹಾಲುಗಲ್ಲದ ಕಂದ ಅತ್ತರೆ ಏಕೆ ಅಳುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಪೋಷಕರಿಗೆ ಬಹಳ ಸಮಯ ಹಿಡಿಯುವುದು. ಅದರಲ್ಲೂ ಮನೆಯಲ್ಲಿ ಹಿರಿ ಜೀವಗಳು ಇಲ್ಲದೇ ಹೋದರೆ, ಚೊಚ್ಚಲ ಬಾರಿ ತಾಯಿಯಾಗಿದ್ದರೆ ಕತೆ ಮುಗಿದೇ ಹೋಯ್ತು ಮಗುವಿನೊಂದಿಗೆ ತಾಯಿಯೂ ಕೂತು ಅಳುವಂತಹ ಸ್ಥಿತಿ ಬರುವುದು. 

ಆದರೆ ಕೆಲವು ವೈದ್ಯರು (Doctors) ಅದರಲ್ಲೂ ವಿಶೇಷವಾಗಿ ಮಕ್ಕಳ ತಜ್ಞರು (Pediatrician) ಮಕ್ಕಳನ್ನು ಮುಟ್ಟಿದ ಕೂಡಲೇ ಮಂತ್ರಿಸಿದಂತೆ ತಕ್ಷಣವೇ ಮಕ್ಕಳು ನಿರಾಳ ಸ್ಥಿತಿ ಅನುಭವಿಸುತ್ತಾರೆ. ತಕ್ಷಣವೇ ಅಳು ನಿಲ್ಲಿಸಿ ನಗಲು ಶುರು ಮಾಡುತ್ತವೆ. ಮಕ್ಕಳ ತಾಯಂದಿರಿಗೂ ಇದೊಂದು ಅಚ್ಚರಿ ಎಂಬಂತೆ ಭಾಸವಾಗುತ್ತದೆ. ಅದೇ ರೀತಿ ಇಲ್ಲೊಂದು ಕ್ಲಿನಿಕ್‌ನಲ್ಲಿ ವೈದ್ಯರು ರಚ್ಚೆ ಹಿಡಿದು ಅಳುತ್ತಿರುವ ಕಂದನನ್ನು ಸೆಕೆಂಡುಗಳಲ್ಲಿ ಸಮಾಧಾನಪಡಿಸುತ್ತಿದ್ದಾರೆ. ಮಕ್ಕಳ ವೈದ್ಯರೊಬ್ಬರು ಕೂಸೊಂದನ್ನು ಹೀಗೆ ನಿರಾಳವಾಗಿ ಸಮಾಧಾನಪಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದನ್ನು ಬರೋಬ್ಬರಿ ನಾಲ್ಕು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.


ಈ ವಿಡಿಯೋದಲ್ಲಿ ಮಕ್ಕಳ ವೈದ್ಯರೊಬ್ಬರು ಮಕ್ಕಳು (Children) ಅಳುತ್ತಿದ್ದರೆ ಅವರನ್ನು ಹೇಗೆ ಹಿಡಿದುಕೊಳ್ಳಬೇಕು. ಹೇಗೆ ಸಮಾಧಾನಪಡಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕವಾಗಿ ತೋರಿಸುತ್ತಿದ್ದಾರೆ. ಜೋರಾಗಿ ಅಳುತ್ತಿರುವ ಕಂದನನ್ನು ಕೈಗೆ ಎತ್ತಿಕೊಂಡ ವೈದ್ಯರು, ತಮ್ಮ ಎಡಕೈಯನ್ನು ಮಗುವಿನ ಕುತ್ತಿಗೆಗೆ ಆಧಾರವಾಗಿ ಇಟ್ಟು ತಮ್ಮ ಮತ್ತೊಂದು   ಮಗುವಿನ ಹಿಂಭಾಗದಿಂದ ತಂದು ಕಾಲುಗಳ ಮಧ್ಯದಲ್ಲಿ ಹಿಡಿದು ಮಗುವನ್ನು ಎತ್ತಿ ಆಡಿಸುತ್ತಾರೆ. ಈ ವೇಳೆ ಅಳುತ್ತಿರುವ ಮಗು ಸೆಕೆಂಡುಗಳಲ್ಲಿ ಅಳು ನಿಲ್ಲಿಸಿ ಸಮಾಧಾನಗೊಳ್ಳುತ್ತದೆ. ವಾಲಾ ಅಫ್ಸರ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ (Twitter) ಪೋಸ್ಟ್ ಮಾಡಿದ್ದು, ಅಳುವ ಮಗುವನ್ನು ಹೇಗೆ ಸಮಾಧಾನಪಡಿಸಬಹುದು ಎಂಬುದನ್ನು ವೈದ್ಯರೊಬ್ಬರು ತೋರಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

ಹೊಟ್ಟೆಪಾಡು: ಸೊಂಟಕ್ಕೆ ಮಗು ಕಟ್ಟಿಕೊಂಡು ರಿಕ್ಷಾ ಚಾಲನೆ ಮಾಡುತ್ತಿರುವ ತಾಯಿ


ಈ ವಿಡಿಯೋ ಹೀಗೆ ವೈರಲ್ ಆಗಿರುವುದು ನೋಡಿದರೆ ಎಷ್ಟೊಂದು ಮಕ್ಕಳ ತಾಯಂದಿರು ಈ ರೀತಿಯ ಮಗು ಅಳುವ ಸಂದಿಗ್ಧ ಸ್ಥಿತಿಯನ್ನು ಅನುಭವಿಸಿರಬಹುದು ಎಂಬುದನ್ನು 
ತಿಳಿಯಬಹುದಾಗಿದೆ. ಮಗು ಅಳುತ್ತಿದ್ದರೆ ತಾಯಿ ನೆಮ್ಮದಿಯಾಗಿ ಕೂರಲು ಸಾಧ್ಯವೇ ಇಲ್ಲ. ಇದು ಬಹುತೇಕ ತಾಯಿಯರ ಮನದಾಳ. ಹೊಟ್ಟೆತುಂಬ ತಿಂದು ತನ್ನಷ್ಟಕ್ಕೆ ಮಗು ಆಟವಾಡುತ್ತಿದ್ದರೆ ತಾಯಿ (Mother) ಸಂಪೂರ್ಣ ನಿರಾಳರಾಗುತ್ತಾಳೆ. ಆದರೆ ಈ ಯೋಗ ಎಲ್ಲ ತಾಯಂದಿರಿಗೆ ಇಲ್ಲ ಬಿಡಿ. ಆದರೆ ಈಗ ವೈರಲ್ ಆಗಿರುವ ಈ ವಿಡಿಯೋ ಪುಟ್ಟ ಮಕ್ಕಳ ತಾಯಂದಿರಿಗೆ ಸ್ವಲ್ಪ ಸಮಾಧಾನ ನೀಡಿದರೆ ಅಚ್ಚರಿ ಏನಿಲ್ಲ. 

ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲವಾ? ಜೋರಾಗಿ ಓದಲು ಕಲಿತು ನೋಡಿ

Follow Us:
Download App:
  • android
  • ios