ಸೋಲು-ಗೆಲುವು ಸಾಮಾನ್ಯ; ಹಿಮಗಡ್ಡೆಯಂತೆ ಮಾಯವಾಗುವ ಗೆಲುವನ್ನು ಹಿಡಿದಿಟ್ಟುಕೊಳ್ಳುವುದು ಹೀಗೆ

First Published 22, Jan 2018, 4:32 PM IST
How to Celebrate Success
Highlights

ಸಾಮಾನ್ಯವಾಗಿ ಗೆಲುವು ಅನೇಕ ರಹಸ್ಯಗಳನ್ನು ಹೊತ್ತು ತರುತ್ತದೆ. ಇದು ನಾಳೆ ನಮ್ಮ ಅಧೋಗತಿಗೆ ಮುನ್ನುಡಿ ಹಾಡುವ ಸೆಳೆತವಿರಬಹುದು. ಭೌತವಾದಿಗಳು ಗೆದ್ದಾಗ, ಅಹಂನಿಂದ ಮೆರೆಯುತ್ತಾರೆ. ಅವರ ಮನಸ್ಸಿನಲ್ಲಿ ಒಂದು ಗೋಡೆ. ಗೆಲುವು ಎಂದೆಂದೂ ಜೊತೆಗಿರುತ್ತೆ ಎಂಬ ಭ್ರಮೆ. ಅತಿ ಆತ್ಮವಿಶ್ವಾಸದಿಂದ, ಭವಿಷ್ಯವನ್ನು ಹಳದಿ ಕಣ್ಣಿನಿಂದ ನೋಡುತ್ತಾರೆ. ಅಂತಹವರ ಮುಖದ ಮೇಲೆ ಪೊಳ್ಳು ಧೈರ್ಯದ ಜೊತೆಗೆ ಕರಾಳ ಛಾಯೆ ಕಂಡುಬರುತ್ತದೆ. ಅವರು ಪಡೆದ ಗೆಲುವು ಆಧ್ಯಾತ್ಮಿಕ ದೃಷ್ಟಿಯಿಂದ ಗೆಲುವು ಎನ್ನಿಸಿಕೊಳ್ಳುವುದಿಲ್ಲ.

ಪ್ರಾಪಂಚಿಕ ಗೆಲುವನ್ನು ವಿಪರೀತ ಪ್ರಯತ್ನದಿಂದಲೋ, ಇಲ್ಲ ಅದೃಷ್ಟ ಕಣ್ಣು  ತೆರೆದಿದ್ದರಿಂದಲೋ ಪಡೆದಿರಬಹುದು. ಆ ರೀತಿಯ ಗೆಲುವನ್ನು ಪಡೆದವರು ತಮ್ಮ  ಕತೃತ್ವದ ಶಕ್ತಿಯಿಂದಷ್ಟೇ ತಾವು ಗೆದ್ದಿದ್ದು ಎಂದು ಹೇಳಿಕೊಳ್ಳುತ್ತಾರೆ. ಆ ಗೆಲುವು ತಮ್ಮ ಕೈಯಿಂದ ಜಾರಿ ಹೋಗದ ಹಾಗೆ ಅವರು ಪ್ರಯತ್ನಿಸುತ್ತಿದ್ದರೂ, ಅದು ಕೈಯಲ್ಲಿ ಹಿಡಿದ ಹಿಮದ ಗಡ್ಡೆಯ ಹಾಗೆ ಮಾಯವಾಗಿಬಿಡುತ್ತದೆ. ಗೆಲುವೇ ಎಲ್ಲಾ ಎಂಬ ಮನೋಭಾವವುಳ್ಳವರು ಅಕಸ್ಮಾತ್  ಸೋತಾಗ, ಕುಸಿದು ಬೀಳುತ್ತಾರೆ. ಕೆಲವರಲ್ಲಿ ವಿಪರೀತ ದೌರ್ಬಲ್ಯ ಕಾಣಿಸಬಹುದು. ಲೌಕಿಕ ಆಸಕ್ತಿ  ಹೊಂದಿರುವವರು ಗೆದ್ದಾಗ, ಆ ಗೆಲುವು ಅವರಿಗೆ ಶಾಂತಿಯನ್ನಾಗಲಿ, ಸಮೃದ್ಧಿಯನ್ನಾಗಲಿ ತಂದುಕೊಡುವುದಿಲ್ಲ. ಇದಕ್ಕೆ ಕಾರಣ, ಅವುಗಳನ್ನು ಸ್ವೀಕರಿಸಲು ಬೇಕಾದ ಮನೋಗುಣಗಳು ಅವರಲ್ಲಿ ಇರುವುದಿಲ್ಲ. ಇದಕ್ಕೆ ಬದಲಾಗಿ ಪ್ರಜ್ಞಾಪೂರ್ವಕವಾಗಿ ಗೆಲುವನ್ನು ಪಡೆದಾಗ, ಅದನ್ನು ವಿನಯದಿಂದ ಸ್ವೀಕರಿಸಿದಾಗ ಮನಸ್ಸು ಮತ್ತು ಶಕ್ತಿ ಕೇಂದ್ರೀಕೃತವಾಗಿದ್ದೂ ಸಹ ತೆರೆದ ಮನಸ್ಸಿನವರಾಗುತ್ತಾರೆ. ಹೀಗಾದಾಗ ಮಾತ್ರ ಗೆಲುವು ಅವರನ್ನು ಅರ್ಹರೆಂದು ಪರಿಗಣಿಸಿ ಆನಂದವನ್ನುಂಟುಮಾಡುತ್ತದೆ. ಆಸ್ವಾದಿಸುವಂತೆ ಮಾಡುತ್ತದೆ.ಶಾಶ್ವತವಾದ ಅತಿಥಿಯಾಗುತ್ತದೆ.ಎಂದೆಂದೂ ಜೊತೆಗಿರುವ ಪ್ರಿಯ ಸಂಗಾತಿಯಾಗುತ್ತದೆ.

ಯಾರು ಆಧ್ಯಾತ್ಮಿಕ ಪ್ರಜ್ಞೆಯನ್ನು ಅರಿತಿರುತ್ತಾರೋ ಅಂತಹವರ ಬಳಿ ಕೇಳದೆ ನಿಜವಾದ ಗೆಲುವು ಬರುತ್ತದೆ. ಅಂತಹವರು ತಮ್ಮ ನಂಬಿಕೆ, ಜ್ಞಾನ ಮತ್ತು ಮಿತಿಗಳನ್ನು ಆಧಾರವಾಗಿಟ್ಟುಕೊಂಡು ಅತ್ಯುತ್ತಮ ಮಟ್ಟದ ಪ್ರಯತ್ನವನ್ನು ಮಾಡಿ, ಗೆಲವಿಗೆ ಬೆಲೆ ತಂದಿರುತ್ತಾರೆ. ಅವರು ಈ ಪ್ರಯತ್ನದಲ್ಲಿ ಪರಿಸರದ ನಿಯಮವನ್ನಾಗಲೀ, ಬದಲಾಗುತ್ತಿರುವ ಪ್ರಪಂಚದ ಮಿತಿಗಳನ್ನಾಗಲೀ ಉಲ್ಲಂಘಿಸಲು ಹೋಗುವುದಿಲ್ಲ. ತೆರೆದ ಮನಸ್ಸಿನವರಾಗುತ್ತಾರೆ.ಗೆಲುವು-ಸೋಲು ಎರಡನ್ನೂ ಸಮಾನವಾಗಿ ಸ್ವಾಗತಿಸಿ ಪರಿಗ್ರಹಿಸುತ್ತಾರೆ. ಗೆಲುವು ಅಂತಹವರಲ್ಲಿ ಸ್ವಾರ್ಥವನ್ನಾಗಲೀ, ಅಹಂಕಾರವನ್ನಾಗಲೀ  ಅಥವಾ ಇನ್ನಾವುದೇ ನಕಾರಾತ್ಮಕ ಗುಣಗಳನ್ನು ಹುಟ್ಟಿಸುವುದಿಲ್ಲ. ಏಕೆಂದರೆ ಅವರು ತಮ್ಮ ಗೆಲುವಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಹಾಯ ಮಾಡಿದವರನ್ನು ನೆನೆಯುತ್ತಾರೆ. ಆಗಲೇ ಗೆಲುವು ಸಹ ಒಂದು ಸಹಜವಾದ ಆಧ್ಯಾತ್ಮಿಕತೆಯ ಲೇಪನ ಹೊಂದಿದ ಅಮೂಲ್ಯ ನಿಧಿಯಾಗುತ್ತದೆ.

loader