ರಾಧಿಕಾ ಆಪ್ಟೆ ಹೇಗೆ ವರ್ಕ್ಔಟ್ ಮಾಡ್ತಾರೆ ಗೊತ್ತಾ?

First Published 5, Feb 2018, 7:35 PM IST
How Radhika Apte work out daily
Highlights

ಬಾಲಿವುಡ್‌ನ ಬಿಂದಾಸ್ ಹುಡುಗಿ ರಾಧಿಕಾ ಆಪ್ಟೆ ಸದ್ಯಕ್ಕೀಗ 'ಪ್ಯಾಡ್‌ಮ್ಯಾನ್' ಚಿತ್ರದಲ್ಲಿ ಬ್ಯುಸಿ. 'ಮಧ್ಯಾಹ್ನಕ್ಕೆ ಟೊಮ್ಯಾಟೋ ಜ್ಯೂಸ್, ರಾತ್ರಿಗೆ ಹುರಿದ ಮಾಂಸ ನನ್ನ ಸದ್ಯದ ಡಯೆಟ್' ಅಂದಾಕೆಯ ಫಿಟ್‌ನೆಸ್ ಡೀಟೈಲ್ಸ್ ಇಲ್ಲಿದೆ. 

ಬಾಲಿವುಡ್‌ನ ಬಿಂದಾಸ್ ಹುಡುಗಿ ರಾಧಿಕಾ ಆಪ್ಟೆ ಸದ್ಯಕ್ಕೀಗ 'ಪ್ಯಾಡ್‌ಮ್ಯಾನ್' ಚಿತ್ರದಲ್ಲಿ ಬ್ಯುಸಿ. 'ಮಧ್ಯಾಹ್ನಕ್ಕೆ ಟೊಮ್ಯಾಟೋ ಜ್ಯೂಸ್, ರಾತ್ರಿಗೆ ಹುರಿದ ಮಾಂಸ ನನ್ನ ಸದ್ಯದ ಡಯೆಟ್' ಅಂದಾಕೆಯ ಫಿಟ್‌ನೆಸ್ ಡೀಟೈಲ್ಸ್ ಇಲ್ಲಿದೆ. 

ಹಾಲು ಕುಡಿಯೋ ಚಟ

ಬೆಳ್ಳಂಬೆಳಗ್ಗೆ ಎದ್ದು ಉಳಿದ ಬಾಲಿವುಡ್ ಸೆಲೆಬ್ರಿಟಿಗಳು, ನಿಂಬೆ ರಸ, ಬಿಸಿ ನೀರು ಡಯೆಟ್ ನಲ್ಲಿ ಮುಳುಗಿ ಹೋದ್ರೆ ಈ ಬೆಡಗಿ ಮಾತ್ರ ಹಲ್ಲುಜ್ಜಿದ ತಕ್ಷಣ ಬಿಸಿಬಿಸಿ ಹಾಲು ಕುಡಿಯೋದು ನನ್ನ ಖಯಾಲಿ ಅಂತಾರೆ. ಮಧ್ಯಾಹ್ನ ಟೊಮ್ಯಾಟೋ ಜ್ಯೂಸ್ ಅಥವಾ 2 ರೋಟಿ ತರಕಾರಿ ತಿಂತಾರೆ. ರಾತ್ರಿಗೆ ಮಾತ್ರ ಫಿಶ್ ಅಥವಾ ಚಿಕನ್ ಇರಲೇ ಬೇಕು. ಬೆಡ್‌ಗೆ ಹೋಗೋ ಮೊದಲು ಗ್ರೀನ್ ಟೀ ಕುಡೀತಾರೆ.

ವಾರದಲ್ಲಿ ನಾಲ್ಕು ದಿನ 1 ಗಂಟೆ ಜಿಮ್‌ನಲ್ಲಿ ವರ್ಕೌಟ್. ಇದರ ಜೊತೆಗೆ ಓಟ, ಸೈಕ್ಲಿಂಗ್ ಮಾಡ್ತಾರೆ. ವಾರದಲ್ಲೊಮ್ಮೆ ಮನಸಾರೆ ಈಜು ಹೊಡಿಯೋದು ಈಕೆಗಿಷ್ಟ. 
 
loader