ಫ್ರಿಡ್ಜ್ ಬಾಳಿಕೆ ಬರ್ಬೇಕು ಅಂದ್ರೆ ದಿನಕ್ಕೊಮ್ಮೆ ಸ್ವಿಚ್ ಆಫ್ ಮಾಡ್ಬೇಕಾ?

Synopsis
ಉಳಿದ ಆಹಾರವನ್ನೆಲ್ಲ ಫ್ರಿಡ್ಜ್ ಗೆ ಸೇರಿಸೋ ನಮಗೆ ಫ್ರಿಡ್ಜ್ ಹೇಗೆ ಬಳಸ್ಬೇಕು ಎಂಬ ಮಾಹಿತಿ ಇಲ್ಲ. ಅದು ಹೆಚ್ಚು ದಿನ ಬಾಳಿಕೆ ಬರ್ಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ?
ತಂಗಳು ಪೆಟ್ಟಿಗೆ ಎಂದೇ ಫ್ರಿಡ್ಜ್ (Fridge) ಪ್ರಸಿದ್ಧಿ ಪಡೆದಿದೆ. ಹಾಲು, ಹಣ್ಣು, ಬೇಳೆ ಕಾಳು ಸೇರಿದಂತೆ ಅದೆಷ್ಟೋ ದಿನಗಳ ಹಿಂದೆ ತಂದ ಆಹಾರ (food) ಫ್ರಿಡ್ಜ್ ನಲ್ಲಿ ಇರುತ್ತೆ. ಆಹಾರವನ್ನು ಹಾಳಾಗದೆ ರಕ್ಷಿಸಬಹುದು ಎನ್ನುವ ಕಾರಣಕ್ಕೆ ಈಗ ಬಹುತೇಕ ಎಲ್ಲರ ಅಡುಗೆ ಮನೆಯಲ್ಲಿ ಫ್ರಿಡ್ಜ್ ಜಾಗ ಪಡೆದಿದೆ. ದುಬಾರಿ ಹಣ ನೀಡಿ ಖರೀದಿ ಮಾಡಿದ ಫ್ರಿಡ್ಜ್, ಬಹುಕಾಲ ಬಾಳಿಕೆ ಬರಲಿ ಅನ್ನೋದು ಪ್ರತಿಯೊಬ್ಬರ ಆಸೆ. ಆರ್ಥಿಕ ಸ್ಥಿತಿಗೆ ತಕ್ಕಂತೆ ಹಣ ಹೊಂದಿಸಿ ಫ್ರಿಡ್ಜ್ ಖರೀದಿ ಮಾಡಿರ್ತೇವೆ. ಅದು ಪದೇ ಪದೇ ಹಾಳಾದ್ರೆ ರಿಪೇರಿಗೆ ಹಣ ಖರ್ಚು ಮಾಡ್ಬೇಕು. ಹೊಸ ಫ್ರಿಡ್ಜ್ಖರೀದಿ ಮಾಡೋಕೆ ಹಣ ಸಾಲೋದಿಲ್ಲ. ಹಾಗಾಗಿ ಜನರು ಫ್ರಿಡ್ಜ್ಹಾಳಾಗದಂತೆ ಎಚ್ಚರಿಕೆ ವಹಿಸ್ತಾರೆ. ಅವರ ಇವರ ಮಾತು ಕೇಳಿ ಫ್ರಿಡ್ಜ್ ಸ್ವಿಚ್ ಆಫ್ ಮಾಡ್ತಾರೆ. ದಿನದಲ್ಲಿ ಒಂದು ಗಂಟೆ ಫ್ರಿಡ್ಜ್ ಆಫ್ ಮಾಡ್ಬೇಕು, ಇಲ್ಲ ಅಂದ್ರೆ ಅದ್ರ ಮಷಿನ್ ಹಾಳಾಗುವ ಸಾಧ್ಯತೆ ಇದೆ ಅಂತ ಕೆಲವರು ಹೇಳೋದನ್ನು ನೀವು ಕೇಳಿರ್ಬಹುದು. ಮತ್ತೆ ಕೆಲವರು, ವಾರದಲ್ಲಿ ಒಮ್ಮೆಯಾದ್ರೂ ಫ್ರಿಡ್ಜ್ ಸ್ವಿಚ್ ಆಫ್ ಮಾಡಿ, ಫ್ರಿಜ್ ಗೆ ರೆಸ್ಟ್ ನೀಡಿ ಎನ್ನುತ್ತಾರೆ. ಹೊಸದಾಗಿ ಫ್ರಿಡ್ಜ್ ಖರೀದಿ ಮಾಡಿದೋರಿಂದ ಹಿಡಿದು, ಅನೇಕ ವರ್ಷದಿಂದ ಫ್ರಿಡ್ಜ್ ಬಳಸ್ತಿರುವವರೆಗೆ ಬಹುತೇಕ ಯಾರಿಗೂ ಫ್ರಿಡ್ಜ್ ಸ್ವಿಚ್ ಆಫ್ ಯಾವಾಗ ಮಾಡ್ಬೇಕು, ಅದಕ್ಕೆ ವಿಶ್ರಾಂತಿ ಅಗತ್ಯವಿದ್ಯಾ ಎನ್ನುವ ಪ್ರಶ್ನೆಗೆ ಉತ್ತರ ತಿಳಿದಿಲ್ಲ.
ನಿಮ್ಮ ಮನೆಯಲ್ಲೂ ಫ್ರಿಡ್ಜ್ಇದ್ದು, ನಿಯಮಿತ ರೂಪದಲ್ಲಿ ದಿನ ಅಥವಾ ವಾರಕ್ಕೆ ಒಮ್ಮೆ ನೀವು ಫ್ರಿಡ್ಜ್ ಸ್ವಿಚ್ ಆಫ್ ಮಾಡ್ತಿದ್ದರೆ ಇಂದೇ ನಿಲ್ಲಿಸಿ. ನೀವು ಫ್ರಿಡ್ಜ್ಒಳಗಿರುವ ಮಷಿನ್ ಗೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಈಗಿನ ರೆಫ್ರಿಜರೇಟರ್ಗಳನ್ನು ಗರಿಷ್ಠ ತಾಪಮಾನವನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ತಜ್ಞರ ಪ್ರಕಾರ ಫ್ರಿಡ್ಜ್ ಆಫ್ ಮಾಡ್ಬೇಕಾಗಿಲ್ಲ, ಮಾಡಲೂ ಬಾರದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಫ್ರಿಡ್ಜ್ ಸಾಗಿಸೋದಾದ್ರೆ, ಸ್ವಚ್ಛಗೊಳಿಸಲು ಅಥವಾ ದೀರ್ಘಕಾಲದವರೆಗೆ ಅದನ್ನು ನೀವು ಬಳಸುವುದಿಲ್ಲ ಎಂದಾದ್ರೆ ಆಫ್ ಮಾಡಿ. ಆಧುನಿಕ ರೆಫ್ರಿಜರೇಟರ್ ಗಳಿಗೆ ಥರ್ಮೋಸ್ಟಾಟ್ಗಳನ್ನು ನೀಡಲಾಗಿದೆ. ತಾಪಮಾನ ಕಾಪಾಡಿಕೊಳ್ಳಲು ಇವು ಸ್ವಯಂಚಾಲಿತವಾಗಿ ಆಫ್ ಮತ್ತು ಆನ್ ಆಗುತ್ವೆ. ನೀವು ಯಾವುದೇ ಹೆಚ್ಚುವರಿ ಕೆಲಸ ಮಾಡುವ ಅಗತ್ಯವಿಲ್ಲ.
ಗರ್ಭಿಣಿ ಮಿಕ್ಸರ್ ಗ್ರೈಂಡರ್ ಬಳಸಿದರೆ ಹೊಟ್ಟೆಯೊಳಗೆ ಮಗು ಹೆದರುತ್ತಾ?
ನೀವು ಫ್ರಿಡ್ಜ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅದ್ರ ಸ್ವಿಚ್ ಆಫ್ ಹಾಗೂ ಅನ್ ಮಾಡ್ತಾ ಇದ್ರೆ ಮಷಿನ್ ಹಾಳಾಗುವ ಸಾಧ್ಯತೆ ಇದೆ. ಶಕ್ತಿ ಹೆಚ್ಚಿನ ಮಟ್ಟದಲ್ಲಿ ವ್ಯಯವಾಗುತ್ತದೆ. ಇದ್ರಿಂದ ಫ್ರಿಡ್ಜ್ನಲ್ಲಿಟ್ಟ ಆಹಾರ ಬೇಗ ಹಾಳಾಗುತ್ತದೆ. ಫ್ರಿಡ್ಜ್ ಆಫ್ ಮತ್ತು ಆನ್ ಮಾಡಿದಾಗ ಫ್ರಿಡ್ಜ್ ತಾಪಮಾನ ಒಂದೇ ರೀತಿ ಇರುವುದಿಲ್ಲ. ಆನ್ ಮಾಡಿದಾಗ ಇದ್ದ ತಾಪಮಾನ ಆಫ್ ಮಾಡಿದಾಗ ಇರೋದಿಲ್ಲ. ಇದು ಆಹಾರದ ರುಚಿಯನ್ನು ಕೆಡಿಸುತ್ತದೆ. ಆಗಾಗ್ಗೆ ಆನ್ ಮತ್ತು ಆಫ್ ಮಾಡುವುದರಿಂದ ಕಂಪ್ರೆಸರ್ನ ಜೀವಿತಾವಧಿ ಕಡಿಮೆಯಾಗಬಹುದು. ನೀವು ಕೊಳಕಾದ ಫ್ರಿಡ್ಜ್ನ್ನು ಸ್ವಿಚ್ ಆಫ್ ಮಾಡಿ ಹಾಗೆ ಬಾಗಿಲು ಹಾಕಿದ್ರೆ ಅದ್ರಲ್ಲಿ ಫಂಗಸ್ ಬೆಳೆಯುವ ಅಪಾಯ ಇರುತ್ತದೆ.
ಅಡುಗೆಗೆ ರೋಬೋಟ್ ಬಳಕೆ, ಕೆಲಸದವರನ್ನು ಮನೆಗೆ ಕಳಿಸಿದ
ನಿಮ್ಮ ಮನೆಯಲ್ಲಿರುವ ಫ್ರಿಡ್ಜ್ಅನೇಕ ವರ್ಷ ಬಾಳಿಕೆ ಬರಬೇಕು ಅಂದ್ರೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಮತ್ತ್ಯಾವುದೇ ಕಾರಣಕ್ಕೂ ಫ್ರಿಡ್ಜ್ ಸ್ವಿಚ್ ಬಂದ್ ಮಾಡ್ಬೇಡಿ. ಅದು ಸದಾ ಆನ್ ಆಗಿರುವಂತೆ ನೋಡಿಕೊಳ್ಳಿ. ಟೆನ್ನಾಲಜಿ ಮೇಲೆ ಭರವಸೆ ಇಡಿ. ಆಫ್ ಮಾಡಿದ್ರೆ ಅನೇಕ ವರ್ಷ ಫ್ರಿಡ್ಜ್ ಬಾಳಿಕೆ ಬರುತ್ತೆ ಎನ್ನುವ ಭ್ರಮೆ ಬಿಡಿ.