ಅಡುಗೆಗೆ ರೋಬೋಟ್ ಬಳಕೆ, ಕೆಲಸದವರನ್ನು ಮನೆಗೆ ಕಳಿಸಿದ ಸಾಫ್ಟ್‌ವೇರ್ ಉದ್ಯೋಗಿ; 9000 ರೂ ಉಳಿತಾಯ!

Synopsis
ಕೃಷಿ ಮಾಡಲು ಜನರು ಸಿಗ್ತಿಲ್ಲ ಎನ್ನೋ ಆರೋಪ ಇದೆ, ಇನ್ನು ನಗರಗಳಲ್ಲಿ ಕೂಡ ಮನೆಗೆಲಸ ಮಾಡೋದು ಕಷ್ಟ ಆಗಿದೆ. ಹೀಗಿರುವಾಗ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೋರ್ವರು ರೋಬೋಟ್‌ನಿಂದ ಅಡುಗೆ ಮಾಡುತ್ತಿದ್ದಾರೆ.
ಇಂದು ಕೆಲಸಕ್ಕೆ ಜನರು ಸಿಗೋದು ಕಷ್ಟ ಆಗಿದೆ. ಅದರಲ್ಲಿಯೂ ಸಿಲಿಕಾನ್‌ಸಿಟಿಯಲ್ಲಿ ಎಲ್ಲದಕ್ಕೂ ದುಪ್ಪಟ್ಟು ದರ. ಹೀಗಾಗಿ ಬೆಂಗಳೂರಿನಲ್ಲಿ ಜನರು ನಂಬೋದು ಕಷ್ಟ ಆಗಿದೆ. ಅದರಲ್ಲಿಯೂ ಮನೆಗೆಲಸದವರು ಚಿನ್ನ ಕದ್ದರು, ಹಣ ಕದ್ದರು, ಕೆಲಸ ಸರಿಯಾಗಿ ಮಾಡಿಲ್ಲ, ನಮ್ಮ ಪತಿ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ತಾರೆ ಎಂದು ಹೇಳುವವರು ಇರುತ್ತಾರೆ. ಈ ಮಧ್ಯೆ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೋರ್ವರು ಮನೆಗೆಲಸ ಮಾಡಿಕೊಳ್ಳಲು ರೋಬೋಟ್ ಬಳಕೆ ಮಾಡುತ್ತಿದ್ದಾರೆ.
ಮನೆಗೆಲಸ ಮಾಡಲು ರೋಬೋಟ್ ಬಳಕೆ!
ಇಂದು ಕೆಲಸಕ್ಕೆ ಜನರು ಸಿಗೋದು ಕಷ್ಟ ಆಗಿದೆ. ಅದರಲ್ಲಿಯೂ ಸಿಲಿಕಾನ್ ಸಿಟಿಯಲ್ಲಿ ಎಲ್ಲದಕ್ಕೂ ದುಪ್ಪಟ್ಟು ದರ. ಹೀಗಾಗಿ ಬೆಂಗಳೂರಿನಲ್ಲಿ ಜನರು ನಂಬೋದು ಕಷ್ಟ ಆಗಿದೆ. ಅದರಲ್ಲಿಯೂ ಮನೆಗೆಲಸದವರು ಚಿನ್ನ ಕದ್ದರು, ಹಣ ಕದ್ದರು, ಕೆಲಸ ಸರಿಯಾಗಿ ಮಾಡಿಲ್ಲ, ನಮ್ಮ ಪತಿ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ತಾರೆ ಎಂದು ಹೇಳುವವರು ಇರುತ್ತಾರೆ. ಈ ಮಧ್ಯೆ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೋರ್ವರು ಮನೆಗೆಲಸ ಮಾಡಿಕೊಳ್ಳಲು ರೋಬೋಟ್ ಬಳಕೆ ಮಾಡುತ್ತಿದ್ದಾರೆ.
ರೋಬೋಟ್ ಮೇಲೆ ಯುವತಿಯರ ಒಲವು! ಯುವಕರ ಮದ್ವೆ ಇನ್ನು ಬರೀ ಕನಸಾ? ಶಾಕಿಂಗ್ ವರದಿ ಡಿಟೇಲ್ಸ್ ಇಲ್ಲಿದೆ...
ಹೈಟೆಕ್ ಕಿಚನ್ ರೋಬೋಟ್ ಬಳಕೆ ಮಾಡಿದ ಹುಡುಗಿ!
ಹೆಬ್ಬಾಳದ ಮನಿಷಾ ರಾಯ್ ಅವರು ಹೈಟೆಕ್ ಕಿಚನ್ ರೋಬೋಟ್ ಬಳಕೆ ಮಾಡಲು ಆರಂಭಿಸಿದರು. ಇದು ನಿಜಕ್ಕೂ ಅವರ ಪಾಲಿಗೆ ಒಂದು ಗೇಮ್‌ಚೇಂಜರ್ ಆಗಿತ್ತು. "ಅಡುಗೆ ರೆಡಿಯಾಗುವಾಗ ನಾನು ಉಳಿದ ಮನೆಗೆಲಸ ಮಾಡ್ತೀನಿ. ನನ್ನ ಅಡುಗೆ ಹಾಳಾಗಲ್ಲ ಅಂತ ಗೊತ್ತಿದೆ. ರೋಬೋಟ್‌ನಿಂದ ನನ್ನ ಅಡುಗೆ ಬೇಗ, ಸುಲಭವಾಗಿ, ಫನ್ ಆಗಿ ಆಗುವುದು" ಎಂದು ಮನಿಷಾ ಹೇಳಿದ್ದಾರೆ.
ರೋಬೋಟ್ ಕೆಲಸ ಮಾಡುವಾಗ ನಾನು ಇರಬೇಕು ಅಂತೇನಿಲ್ಲ!
“ತರಕಾರಿ ಕಟ್ ಮಾಡುವುದರಿಂದ ಹಿಡಿದು, ಫ್ರೈ ಮಾಡುವುದು, ಬೇಯಿಸುವುದು, ಚಪಾತಿ ನಾದುವುದು ಎಲ್ಲವನ್ನು ರೋಬೋಟ್ ಮಾಡುತ್ತದೆ. ನಾನು ಪದಾರ್ಥಗಳನ್ನು ಹಾಕಿ ಬಿಡ್ತೀನಿ ಅಷ್ಟೇ. ಇದೆಲ್ಲವೂ ಪ್ರೀ ಪ್ರೋಗ್ರಾಮಿಂಗ್ ಅಷ್ಟೇ. ರೋಬೋಟ್ ಈ ಕೆಲಸಗಳನ್ನು ಮಾಡುವಾಗ ನಾನು ಅಲ್ಲಿ ಇರಬೇಕು ಅಂತ ಕೂಡ ಇಲ್ಲ. ಸಮಯ ಉಳಿತಾಯ ಒಂದೇ ಅಲ್ಲದೆ ಹಣ ಉಳಿತಾಯ ಆಗುವುದು” ಎಂದು ಮನಿಷಾ ಹೇಳಿದ್ದಾರೆ. ಅಂದಹಾಗೆ ಈ ರೋಬೋಟ್‌ಗೆ 40000 ರೂಪಾಯಿ ಎನ್ನಲಾಗಿದೆ. ಒನ್‌ಟೈಮ್ ಇನ್‌ವೆಸ್ಟ್‌ಮೆಂಟ್ ಇದು ಎಂದು ಮನಿಷಾ ಹೇಳುತ್ತಾರೆ.
ಮಹಿಳೆಯರು 2025ರ ವೇಳೆಗೆ ಪುರುಷರಿಗಿಂತ ಹೆಚ್ಚು ರೋಬೋಟ್ ಜೊತೆಗೆ ಲೈಂಗಿಕತೆ ಬಯಸುತ್ತಾರೆ!
ಎಷ್ಟು ಹಣ ಉಳಿತಾಯ ಆಗುತ್ತದೆ?
"ನಮ್ಮ ಮನೆ ಕೆಲಸದವರಿಗೆ 2500 ರೂಪಾಯಿ ಕೊಡ್ತಿದ್ದೆ. ಆದರೆ ಸಾಕಷ್ಟು ಕೆಲಸ ನಾನೇ ಮಾಡಬೇಕಾಗಿ ಬರ್ತಿತ್ತು. ನಾನು ಈಗ ವರ್ಷಕ್ಕೆ 9000 ರೂಪಾಯಿ ಉಳಿತಾಯ ಮಾಡುತ್ತಿದ್ದೇನೆ” ಎಂದು ಮನಿಷಾ ಹೇಳಿದ್ದಾರೆ.
ಮನೆಗೆಲಸಕ್ಕೆ ರೋಬೋಟ್!
ಮೀರಾ ವಸುದೇವ್ ಎನ್ನುವ ಆರ್ಕಿಟೆಕ್ಟ್ ಕೂಡ ಕಳೆದ ಹದಿನೆಂಟು ತಿಂಗಳಿಂದ ಮನೆಕೆಲಸದವರನ್ನು ತಗೊಂಡಿಲ್ಲ. ಕಸ ಗುಡಿಸಿ, ನೆಲ ಒರೆಸಲು ಅವರು ರೋಬೋಟ್ ಬಳಸ್ತಾರೆ. ಮೊದಲು ರೋಬೋಟ್ ಮನೆಯನ್ನು ನ್ಯಾವಿಗೇಟ್ ಮಾಡುವುದು, ಆಮೇಲೆ ಫರ್ನೀಚರ್ ಕೆಳಗಡೆ ಹೋಗಿ ಕ್ಲೀನ್ ಮಾಡುವುದು. ಅಷ್ಟು ಕೆಲಸ ಮಾಡಿ ತನ್ನ ಜಾಗಕ್ಕೆ ಬಂದು ಚಾರ್ಜ್ ಆಗುವುದು.
ಅಡುಗೆ ಚೆನ್ನಾಗಿ ಆಗತ್ತೆ
ಇನ್ನು ಡೀಪ್ ಕ್ಲೀನಿಂಗ್ ಮಾಡಲು ಮೀರಾ ಅವರು ಈ ಕೆಲಸಗಾರರನ್ನು ಬಳಸಿಕೊಳ್ಳುತ್ತಾರಂತೆ. ರೋಬೋಟ್‌ಗಳು ದಿನಗೆಲಸವನ್ನು ಮಾಡುತ್ತಿವೆ, ಇದರಿಂದ ಪುರುಷರು ಕೂಡ ಕಿಚನ್‌ಗೆ ಬಂದು ಅಡುಗೆ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೆ ಅಡುಗೆ ಕೂಡ ಚೆನ್ನಾಗಿ ಆಗೋದರಿಂದ ರೋಬೋಟ್ ಇದ್ದವರು ಫುಲ್‌ಖುಷಿ ಆಗಿದ್ದಾರೆ. ಕೆಲಸಗಾರರು ನಮ್ಮ ಟೈಮ್‌ಗೆ ಸರಿಯಾಗಿ ಬಂದು ಕೆಲಸ ಮಾಡೋದಿಲ್ಲ ಎನ್ನುವ ಆರೋಪ ಕೂಡ ಇದೆ. ಹೀಗಾಗಿ ರೋಬೋಟ್‌ಗಳಿಂದ ಇನ್ನೊಂದಿಷ್ಟು ಉದ್ಯೋಗಗಳು ಕಡಿತ ಆಗುತ್ತದೆ ಅಂತಾಯ್ತು!