ಎದೆ ಹಾಲುಣಿಸುವುದು ತಾಯಿಗೂ ಮಗುವಿಗೂ ಇರುವ ನಂಟಷ್ಟೇ ಎಂದರೆ ಅದು ಶುದ್ಧ ಸುಳ್ಳು ಎನ್ನಬಹುದು. ಮಗುವಿಗೆ ಹಾಲುಣಿಸುವುದರಲ್ಲಿ ತಂದೆಯ ಪಾತ್ರವೂ ಪ್ರಮುಖವಾದುದಾಗಿದೆ. 

ಎದೆ ಹಾಲುಣಿಸುವುದು ತಾಯಿಗೂ ಮಗುವಿಗೂ ಇರುವ ನಂಟಷ್ಟೇ ಎಂದರೆ ಅದು ಶುದ್ಧ ಸುಳ್ಳು ಎನ್ನಬಹುದು. ಮಗುವಿಗೆ ಹಾಲುಣಿಸುವುದರಲ್ಲಿ ತಂದೆಯ ಪಾತ್ರವೂ ಪ್ರಮುಖವಾದುದಾಗಿದೆ. 

ತಂದೆಯ ಪಾತ್ರವೇನು..?

ತಾಯಿ ಆರೋಗ್ಯವಾಗಿದ್ದಲ್ಲಿ ಮಗುವಿನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ತಾಯಿಯ ಊಟ, ತಿಂಡಿ, ಆಕೆಯ ಆರೋಗ್ಯ, ವಿಶ್ರಾಂತಿ ಪ್ರತಿಯೊಂದರಲ್ಲಿಯೂ ತಂದೆಯ ಪಾತ್ರದಿಂದ ಆಗ ಮಗುವಿಗೆ ಹೆಚ್ಚಿನ ಸಮಯವನ್ನು ತಾಯಿ ನೀಡಲು ಸಾಧ್ಯವಾಗುತ್ತದೆ. ಇದರಿಂದ ಮಗುವಿಗೆ ಹಾಲುಣಿಸುವುದರಲ್ಲಿಯೂ ತಂದೆ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ.

  • ತಂದೆಯಾದವನು ತನ್ನ ಸಂಗಾತಿ ಮಗುವಿಗೆ ಹಾಲುಣಿಸಲು ಪ್ರೋತ್ಸಾಹ ನೀಡಬೇಕು
  • ಮಗುವಿನ ವಿವಿಧ ಕೆಲಸಗಳಲ್ಲಿ ನೆರವಾಗಬೇಕು
  • ಮನೆಗೆಲಸಗಳಲ್ಲಿ ನೆರವು ನೀಡುವುದರಿಂದ ಮಗುವಿಗೆ ತಾಯಿಯಾದವಳು ಹೆಚ್ಚಿನ ಸಮಯ ನೀಡಲು ಸಾಧ್ಯ
  • ಆರೋಗ್ಯವಂತರಾಗಿಲು ನಿಮ್ಮ ಸಂಗಾತಿಗೆ ಉತ್ತಮ ಆಹಾರ ಸೇವೆನೆಯಲ್ಲಿಯೂ ನೀವು ಮುಖ್ಯ ಪಾತ್ರ ವಹಿಸಬೇಕು. ಆಗ ಆಕೆಗೂ ಕೂಡ ಮನೋಸ್ಥೈರ್ಯವು ಹೆಚ್ಚುತ್ತದೆ
  • ಹಾಲುಣಿಸುವುದರ ಬಗ್ಗೆ ನಿಮ್ಮ ಸಂಗಾತಿಗೆ ಸಕಾರಾತ್ಮಕವಾದ ಭಾವನೆಗಳು ಮೂಡುವಂತೆ ಮಾಡಿ