ಕಿವಿ ತುರಿಕೆ ನಿವಾರಿಸಲು ಕೈ ಬೆರಳನ್ನು ಕಿವಿಗೆ ಹಾಕಿ ತುರಿಸುತ್ತಾರೆ. ಅಲ್ಲದೆ ತುರಿಕೆ ಕಡಿಮೆ ಮಾಡಲು ಕಡ್ಡಿಯನ್ನೂ ಹಾಕಲು ಹಿಂದು ಮುಂದು ನೋಡುವುದಿಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇನ್ಫೆಕ್ಷನ್ ಆಗಬಹುದು. ಕಿವಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಸೃಷ್ಟಿಯಾಗಬಹುದು. ಈ ಸಮಸ್ಯೆಗೆ ಮನೆ ಮದ್ದೂ ಇವೆ...

ಯಾವುದೇ ವ್ಯಕ್ತಿಯಲ್ಲಿ ಅಲ್ಟ್ರಾ ಸೆನ್ಸಿಟಿವ್ ನ್ಯೂರೋಲಾಜಿಕಲ್ ಫೈಬರ್ಸ್ ಇರುವ ಕಾರಣ ತುರಿಕೆಯಾಗುತ್ತದೆ. ಇವು ಕಿವಿಯ ಹೊರ ಭಾಗದಲ್ಲಿ ಉಂಟಾಗುತ್ತದೆ. ಸೆನ್ಸಿಟಿವಿಟಿ ಹೆಚ್ಚಿದ್ದರೆ ತುರಿಕೆಯೂ ಕಾಡುತ್ತದೆ. ಇದಕ್ಕಿಲ್ಲಿದೆ ಪರಿಹಾರ... 

ಅಲೋವೆರಾ:  ಅಲೋವೆರಾದಲ್ಲಿ ಆ್ಯಂಟಿ ಇನ್‌ಫ್ಲಾಮೇಟರಿ ಗುಣವಿದೆ. ಇವು ಕಿವಿ ತುರಿಕೆ ಮತ್ತು ಒಣಗುವಿಕೆಯನ್ನು ದೂರ ಮಾಡುತ್ತದೆ. ಅದಕ್ಕಾಗಿ ಕಿವಿಗೆ ಅಲೋವೆರಾ ಜೆಲ್‌ನ 3-4 ಹನಿ ಹಾಕಿ. ಇದರಿಂದ ಅದು ಆಳದವರೆಗೆ ಇಳಿದು ತುರಿಕೆ ಕಡಿಮೆ ಮಾಡುತ್ತದೆ. 

ಎಣ್ಣೆ: ತೆಂಗಿನೆಣ್ಣೆ ಹಾಗೂ ಆಲೀವ್ ಆಯಿಲ್‌ನಂಥ ಎಣ್ಣೆಗಳು ತುರಿಕೆಯಂಥ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಕಿವಿಯೊಳಗೆ ಎಣ್ಣೆ ಬಿಟ್ಟುಕೊಳ್ಳುವುದನ್ನು ವೈದ್ಯರು ವಿರೋಧಿಸುತ್ತಾರೆ. ಕಿವಿಯ ಹೊರ ಭಾಗದಲ್ಲಿ ತುರಿಕೆ ಇದ್ದರೆ ಇದು ಒಳ್ಳೆ ಔಷಧಿ. ತಮಟೆ ಭಾಗಕ್ಕೆ ಎಣ್ಣೆ ತಾಗದಂತೆ ಜಾಗರೂಕರಾಗಿರಿ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕ ಅಂಶವನ್ನು ಹೊಂದಿದೆ. ಅದಕ್ಕಾಗಿ ಬಿಸಿ ಎಣ್ಣೆಯಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಹಾಕಿ. ನಂತರ ಬೆಳ್ಳುಳ್ಳಿಯನ್ನು ತೆಗೆದು, ಕಿವಿ ಹೊರಭಾಗಕ್ಕೆ ಹಚ್ಚಕೊಂಡರೆ ಪರಿಣಾಮಕಾರಿ.