ಕಾಫಿಯೂ ದೇಹದ ದುರ್ವಾಸನೆಗೆ ಕಾರಣವಂತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Nov 2018, 3:30 PM IST
Home Remedy to stop body odor
Highlights

ಕೆಲವರಿಗಂತೂ ದೇಹದಿಂದ ಏಕೆ ದುರ್ವಾಸನೆ ಬೀರುತ್ತದೆ ಎಂಬುವುದೇ ಅರ್ಥವಾಗುವುದಿಲ್ಲ. ಎಷ್ಟೇ ನೈರ್ಮಲ್ಯ ಕಾಪಾಡಿಕೊಂಡರೂ ಏಕೆ ಈ ಸಮಸ್ಯೆ ಕಾಡುತ್ತದೆ? ಅದಕ್ಕೇನು ಮದ್ದು?

ಬೇಸಿಗೆಯಲ್ಲಿ ಬೆವರು ವಾಸನೆ ತಡೆಯೋಕಾಗಲ್ಲ. ಚಳಿಯಲ್ಲಿ ಮತ್ತೊಂಥರಾ ದುರ್ವಾಸನೆ. ಇದರಿಂದ ಮೈ ವಾಸನೆ ಮಾತ್ರವಲ್ಲ, ಚರ್ಮವೂ ಹಾಳಾಗುತ್ತದೆ. ನಮಗೆ, ನಮ್ಮ ಪಕ್ಕದಲ್ಲಿರುವವರಿಗೆ  ಕಿರಿ ಕಿರಿ ಉಂಟು ಮಾಡುವ ಈ ವಾಸನೆಗೆ ಇಲ್ಲಿವೆ ಟಿಪ್ಸ್..... 

* ನಿಂಬೆ ಹಣ್ಣಿನಲ್ಲಿ ನ್ಯಾಚುರಲ್ ಡಿಯೊಡರೆಂಟ್ ಅಂಶವಿದ್ದು, ಅದನ್ನು ಸ್ನಾನ ಮಾಡುವ ನೀರೊಂದಿಗೆ 2 ಹನಿ ಬೆರೆಸಬೇಕು. ಹೀಗೆ ಮಾಡುವದರಿಂದ ಬೆವರುವುದು ಕಡಿಮೆಯಾಗುತ್ತದೆ. ಇದ್ದ ದುರ್ವಾಸನೆಯೂ ದೂರವಾಗುತ್ತದೆ.

* ಕಾಫಿ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚು ಸೇವನೆಯೂ ಬಾಡಿ ಆಡರ್‌ಗೆ ಕಾರಣವಾಗಬಲ್ಲದು. ಇವನ್ನು ಕಡಿಮೆ ಸೇವಿಸಿದರೆ ಒಳಿತು. 

*  ಕುಕಿಂಗ್ ಸೋಡಾಗೂ ಇದೆ ಮ್ಯಾಜಿಕಲ್ ಪವರ್. ಸ್ವಲ್ಪ ಗೋಧಿ ಹಿಟ್ಟು ಹಾಗೂ ಕುಕಿಂಗ್ ಸೋಡಾ ಮಿಕ್ಸ್ ಮಾಡಿ ಸ್ನಾನ ಮಾಡು ಮುನ್ನ ಕಂಕಳ ಕೆಳಗೆ ಹಚ್ಚಿ. 3 ನಿಮಿಷದ ನಂತರ ತೊಳೆಯಬೇಕು. ಇದು ಹೆಚ್ಚು ಪರಿಮಾಣಕಾರಿಯಾಗಬಲ್ಲದು.

* ಹ್ಯಾಂಡ್ ಸ್ಯಾನಿಟೈಸರ್ ಕೈಗೆ ಮಾತ್ರವಲ್ಲ, ಕಂಕುಳಿಗೂ ಬಳಸಬಹುದು. ಸ್ನಾನ ಮಾಡುವ ಮುನ್ನ ಕಂಕುಳ ಕೆಳಗೆ ಇದನ್ನು ಹಚ್ಚುವುದರಿಂದ  ವಾಸನೆ ಬರುವುದಿಲ್ಲ. 

* ಒಗೆದ ಬಟ್ಟೆಯನ್ನೇ ಬಳಸಿ. ಅತಿಯಾಗಿ ಬೆವರುವವರು ದಿನಕ್ಕೆರಡು ಸಲ ಬಟ್ಟೆ ಬದಲಾಯಿಸಿದರೆ ಒಳಿತು. ಬೇಸಿಗೆಯಲ್ಲಿ ಕಾಟನ್ ಅಥವಾ ಲೆನಿನ್, ಚಳಿಯಲ್ಲಿ ಬೆಚ್ಚಗಿರುವ ಬಟ್ಟೆಗಳನ್ನೇ ಧರಿಸಿ. 

loader