Asianet Suvarna News Asianet Suvarna News

ಯೋನಿ ಸುತ್ತ ತ್ವಚೆ ಕಳೆಗುಂದದಂತೆ ಹೀಗ್ ಮಾಡಿ..

ಮುಖದ ಸೌಂದರ್ಯ ಹೆಚ್ಚಿಸಲು ಹಲವಾರು ಮನೆ ಮದ್ದುಗಳಿವೆ. ಆದರೆ ಯೋನಿ ಸುತ್ತಲಿನ ಭಾಗದಲ್ಲಿ ಕಪ್ಪಾದರೆ, ಯಾರೊಂದಿಗೂ ಹೇಳಿ ಕೊಳ್ಳುವುದೂ ಇಲ್ಲ, ಕೇಳುವುದೂ ಇಲ್ಲ. ಆದರೆ ಅದಕ್ಕೂ ಮನೆಯಲ್ಲೇ ಇದೆ ಪರಿಹಾರ.....

Home remedy lighten your vagina
Author
Bengaluru, First Published Nov 10, 2018, 3:29 PM IST

ದೇಹದಲ್ಲೇ ಅತಿ ಹೆಚ್ಚು ಕಪ್ಪಾದ ಜಾಗ ಯೋನಿ ಸುತ್ತಲಿರೋ ಚರ್ಮ. ಈ ಭಾಗದಲ್ಲಿ ಬೆಳೆಯುವ ಕೇಶವನ್ನು ತೆಗೆಯಲು ಬಳಸುವ ಹಲವು ವಿಧಾನಗಳಿಂದ ಇಂಥ ಬಣ್ಣ ಬಂದಿರುತ್ತದೆ. ಅಲ್ಲದೇ ಪಿರಿಯಡ್ಸ್‌ನಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್, ಬಟ್ಟೆ, ಕ್ರೀಮ್, ಸೋಪ್ ಎಲ್ಲವೂ ಈ ಭಾಗದ ಚರ್ಮವನ್ನು ಕಪ್ಪಾಗುವಂತೆ ಮಾಡುತ್ತದೆ. ಒಬೆಸಿಟಿ ಹಾಗೂ ಪೋಷಕಾಂಶಗಳ ಕೊರತೆಯೂ ಚರ್ಮ ಹಾಳಾಗುವಂತೆ ಮಾಡುತ್ತದೆ. ಅದಕ್ಕೇನಿದೆ ಮದ್ದು?

ಲೋಳೇಸರ

1 ಚಮಚ ಲೋಳೇಸರ ಜೆಲ್ ಹಾಗೂ ಚಿಟಿಕೆ ಅರಿಶಿಣ ಬಳಸಿ ಪೇಸ್ಟ್ ಮಾಡಿ ಯೋನಿ ಸುತ್ತ ಚರ್ಮದ ಮೇಲೆ ದಿನಕ್ಕೆ 3 ಸಲ ಲೇಪಿಸಿ. ಪ್ರತಿ ಸಲ  30 ನಿಮಿಷಗಳ ಕಾಲ ಬಿಟ್ಟು, ನಂತರ ಬೆಚ್ಚಗಿರುವ ನೀರಿನಲ್ಲಿ ತೊಳೆಯಬೇಕು. 

ಮೊಸರು

ಯೋನಿಯ ಚರ್ಮಕ್ಕೆ ಮೊಸರು ಹಚ್ಚಿ, 15 ನಿಮಿಷ ಬಿಡಬೇಕು. ಅದಾದ ಮೇಲೆ ಬೆಚ್ಚಗಿರುವ ನೀರಿನಲ್ಲಿ ತೊಳೆಯಬೇಕು.

ಮೊಟ್ಟೆ ಬಿಳಿ ಭಾಗ

ಒಂದು ಬಟ್ಟಲಲ್ಲಿ ಮೊಟ್ಟೆ ಬಿಳಿ ಭಾಗವನ್ನು ಚೆನ್ನಾಗಿ ಅಲ್ಲಾಡಿಸಬೇಕು. ನೊರೆ ಮೂಡಿದಾಗ ಅದನ್ನು ಚರ್ಮಕ್ಕೆ ಹಚ್ಚಬೇಕು. ತೊಳೆಯುವಾಗ ತಣ್ಣಗಿರುವ ನೀರನ್ನು ಮಾತ್ರ ಬಳಸಬೇಕು.

ಶ್ರೀಗಂಧ

1 ಚಮಚ ಶ್ರೀಗಂಧ ಪುಡಿ ಹಾಗು 1 ಚಮಚ ಕಿತ್ತಲೆ ಸಿಪ್ಪೆ ಪುಡಿ ಹಾಗು 2 ಚಮಚ ಗುಲಾಬಿ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಹಚ್ಚಿದ 5 ನಿಮಿಷದಲ್ಲಿ ತಣ್ಣಗಿರುವ ನೀರಿನಿಂದ ತೊಳೆಯಬೇಕು.

ಹಸಿ ಹಾಲು

ಹತ್ತಿಯನ್ನು ತಣ್ಣಗಿರುವ ಹಾಲಿನಲ್ಲಿ ಅದ್ದಿ, ಚರ್ಮಕ್ಕೆ ಹಚ್ಚಿ. 10-15 ನಿಮಿಷದ ನಂತರ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಸಲ ಮಾಡುವುದು ಸೂಕ್ತ. 

ಆಲೂಗಡ್ಡೆ

ಟ್ಯಾನ್ ತೆಗೆಯುವುದರಲ್ಲಿ ಅಲೂಗಡ್ಡೆ ಬಹುಪಯೋಗಿ. ಸುಲಭವಾಗಿ ಲಭ್ಯವಿದ್ದು ತುಂಬಾ ಸರಳವಾಗಿ ಬಳಸಬಹುದು. ಒಂದು ಸಣ್ಣ ಸ್ಲೈಸ್ ಮಾಡಿಕೊಂಡು ಕಪ್ಪಾದ ಜಾಗಕ್ಕೆ ಉಜ್ಜಿ. ಇದನ್ನು ವಾರಕ್ಕೆ ಎರಡು ಸಲ ಮಾತ್ರ ಮಾಡಬೇಕು.

ನಿಂಬೆ ರಸ

1 ಚಮಚ ನಿಂಬೆ ರಸ ಹಾಗೂ ಕಾಲು ಕಪ್ ಗುಲಾಬಿ ಬೆರೆಸಿ. ಹತ್ತಿಯಿಂದ ಖಾಸಗಿ ಜಾಗದ ಸುತ್ತ ಹಚ್ಚಬೇಕು. 3 ರಿಂದ 5 ನಿಮಿಷ ಮಾತ್ರ ಬಿಟ್ಟು, ಬೆಚ್ಚಗಿರುವ ನೀರಿನಿಂದ ತೊಳೆಯಬೇಕು. 

ಸೌತೆಕಾಯಿ

ತುರಿದ ಸೌತೆಕಾಯಿಯನ್ನು ಚರ್ಮದ ಮೇಲೆ ಹಚ್ಚಿ, 20 ನಿಮಿಷಗಳ ನಂತರ ತೊಳೆಯಬೇಕು.

Follow Us:
Download App:
  • android
  • ios