ಹುಳ ಕಚ್ಚಿದಾಗ ಏನಾಗುತ್ತದೆ?

  • ತುರಿಕೆ
  • ಹೃದಯದ ಬಡಿತ ಏರಿಳಿತ
  • ಉರಿ
  • ಉಸಿರಾಟದ ತೊಂದರೆ
  • ಸಂಧು ನೋವು

ಪರಿಹಾರವೇನು?

ಈರುಳ್ಳಿ

ಒಂದು ಚಮಚ ಈರುಳ್ಳಿ ರಸ ಹಾಗೂ ನಿಂಬೆ ರಸ ಸೇರಿಸಿ, ನಂತರ ಹತ್ತಿಯಿಂದ ಹುಳು ಕಚ್ಚಿದ ಜಾಗಕ್ಕೆ ಹಚ್ಚಬೇಕು. 15 ನಿಮಿಷಗಳ ನಂತರ ತೊಳೆಯಬೇಕು. 2 ದಿನಗಳ ಕಾಲ ಇದೇ ರೀತಿ ಮಾಡಿದರೆ ನಂಜಾಗುವುದಿಲ್ಲ. 

ಐಸ್ ಪ್ಯಾಕ್ 

ಬಟ್ಟೆಯಲ್ಲಿ ಐಸ್ ಕ್ಯೂಬ್ ತುಂಬಿ, ಗಾಯದ ಮೇಲಿಡಿ.

ಜೇನು ತುಪ್ಪ

ಎರಡು ಚಮಚ ಜೇನು ಹಾಗು ಅರಿಶಿಣ ಬೆರೆಸಿ, ಗಾಯದ ಮೇಲೆ ಲೇಪಿಸ ಬೇಕು, ಒಂದು ಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. 

ಬೆಳ್ಳುಳ್ಳಿ

ಬೆಳ್ಳುಳ್ಳಿ ಪೇಸ್ಟ್ ಮಾಡಿಕೊಂಡು, ಗಾಯದ ಮೇಲೆ ರಾತ್ರಿ ಇಡೀ ಬಿಡಬೇಕು. ಇದನ್ನು 2-3 ದಿನಗಳ ಕಾಲ ಮಾಡಬೇಕು.

ಕೊತ್ತಂಬರಿ 

ಕೊತ್ತಂಬರಿ ಕಾಳಿನ ಪೇಸ್ಟ್ ಮಾಡಿಕೊಂಡು, ಗಾಯದ ಮೇಲೆ ಹಚ್ಚಿ 20-30 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. 

ಬೇಕಿಂಗ್ ಸೊಡಾ

ನೀರಿನೊಂದಿಗೆ ಬೆರೆಸಿ ಗಾಯಕ್ಕೆ 2-3 ದಿನ ಹಚ್ಚಿದರೆ, ಹುಳು ಕಚ್ಚಿದ ಕಿರಿಕಿರಿ ಇಲ್ಲವಾಗುತ್ತದೆ.