Asianet Suvarna News Asianet Suvarna News

American Research : ಸಾಂಗ್ ಹಿಟ್ ಆಗುತ್ತಾ? ಇನ್ಮುಂದೆ ಪತ್ತೆ ಹಚ್ಚೋದು ಸುಲಭ

ಎಲ್ಲ ಹಾಡುಗಳು ಎಲ್ಲರಿಗೂ ಇಷ್ಟವಾಗ್ಬೇಕೆಂದೇನಿಲ್ಲ. ಕೆಲ ಹಾಡುಗಳು ಎಲ್ಲರ ಮನಸ್ಸು ಕದಿಯಲು ಯಶಸ್ವಿಯಾಗುತ್ವೆ. ಎಂಥ ಹಾಡುಗಳು ಜನರಿಗೆ ಇಷ್ಟವಾಗುತ್ತೆ ಎಂಬುದನ್ನು ಪತ್ತೆ ಮಾಡೋದು ಕಷ್ಟ. ಆದ್ರೀಗ ಈ ಹಾಡು ಮುಂದೆ ಹಿಟ್ ಆಗ್ಬಹುದಾ ಅಂತಾ ಸುಲಭವಾಗಿ ಪತ್ತೆ ಮಾಡ್ಬಹುದು. 
 

Hit Songs Have A Different Effect On The Mind Revealed In Research In America roo
Author
First Published Jun 24, 2023, 11:21 AM IST

ಸಂಗೀತವನ್ನು ಇಷ್ಟಪಡದ ಜನರಿಲ್ಲ. ಕೆಲವರಿಗೆ ಶಾಸ್ತ್ರೀಯ ಸಂಗೀತ ಇಷ್ಟವಾದ್ರೆ ಮತ್ತೆ ಕೆಲವರು ಸಿನಿಮಾ ಹಾಡುಗಳನ್ನು ಕೇಳ್ತಾರೆ. ಇನ್ನು ಕೆಲವರು ಭಾವಗೀತೆ, ಜಾನಪದ ಗೀತೆಗಳ ಮೇಲೆ ಪ್ರೀತಿ ಹೊಂದಿದ್ದರೆ ಭಕ್ತಿಗೀತೆಯನ್ನು ಸದಾ ಕೇಳ್ತಿರುವ ಜನರಿದ್ದಾರೆ. ಸಂಗೀತಕ್ಕೆ ಮಾಂತ್ರಿಕ ಶಕ್ತಿಯಿದೆ. ಸಂಗೀತ ಕೆಲವೇ ಕ್ಷಣಗಳಲ್ಲಿ ನಿಮ್ಮ ಮನಃಸ್ಥಿತಿಯನ್ನು ಬದಲಾಯಿಸಬಲ್ಲದಾಗಿದೆ.

ಸಂಗೀತ (Music) ಕ್ಷೇತ್ರದಲ್ಲಿ ಸ್ಪರ್ಧೆ ಸಾಕಷ್ಟಿದೆ. ಕೆಲವೊಂದು ಹಾಡು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮತ್ತೆ ಕೆಲ ಹಾಡುಗಳು ಹೀಗೆ ಬಂದು ಹಾಗೆ ಹೋಗಿರುತ್ತವೆ. ಯಾವ ಹಾಡು ಹಿಟ್ ಆಗುತ್ತೆ ಅಂತಾ ಮೊದಲೇ ಹೇಳೋದು ಕಷ್ಟ. ಸಂಗೀತದ ಬಗ್ಗೆ ಈಗ ಹೊಸ ಅಧ್ಯಯನ (Study) ನಡೆದಿದೆ. ಹೊಸ ಹಾಡುಗಳು ನಿಮ್ಮ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಇದ್ರಲ್ಲಿ ಪತ್ತೆ ಮಾಡಲಾಗಿದೆ. ಅಧ್ಯಯನದಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ನೀತಾ ಅಂಬಾನಿ ಲಕ್ಸುರಿಯಸ್ ಹ್ಯಾಂಡ್‌ಬಾಗ್ ಬೆಲೆ ಭರ್ತಿ 3.2 ಕೋಟಿ ರೂ! ಅಂಥದ್ದೇನಿದೆ ಅದ್ರಲ್ಲಿ!

ಅಧ್ಯಯನದಲ್ಲಿ ಪತ್ತೆಯಾಗಿದ್ದು ಏನು? : ಅಮೆರಿಕಾ (America) ದಲ್ಲಿ ಹೊಸ ಸಂಗೀತ ಹೇಗೆ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಇದ್ರ ಮೂಲಕವೇ ಯಾವ ಹಾಡು ಹಿಟ್ ಆಗುತ್ತೆ ಎಂಬುದನ್ನು ಸುಲಭವಾಗಿ ಹೇಳಬಹುದು ಎನ್ನುತ್ತದೆ ಅಧ್ಯಯನ. ಸಂಗೀತವನ್ನು ಕೇಳುವ ಜನರ ದೇಹದ ಪ್ರತಿಕ್ರಿಯೆಯನ್ನು ವಿಶ್ಲೇಷಿಸಲು ಅಮೇರಿಕನ್ ಸಂಶೋಧಕರು ಯಂತ್ರ ಕಲಿಕೆ ಅಲ್ಗಾರಿದಮ್ ಅನ್ನು ರಚಿಸಿದ್ದಾರೆ. ಹೆಚ್ಚಿನ ಜನರು ಯಾವ ಸಂಗೀತ ಟ್ರ್ಯಾಕ್ ಅನ್ನು 97 ಪ್ರತಿಶತ ನಿಖರತೆಯೊಂದಿಗೆ ಬಯಸುತ್ತಾರೆ ಎಂಬುದನ್ನು ಕಂಡು ಹಿಡಿಯಲು ಇದು ಸಹಕಾರಿಯಾಗಿದೆ. ಇದ್ರಿಂದ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೆ ಹಾಡಿನಲ್ಲಿ ಮುಳುಗುತ್ತಾನೆ ಮತ್ತು ಎಷ್ಟು ಸಮಯ ಏಕಾಂತದಲ್ಲಿ ಇರುತ್ತಾನೆ ಎಂಬುದನ್ನು ಪತ್ತೆ ಮಾಡಬಹುದು. ಈ ಪತ್ತೆ ನಂತ್ರ ಆ ಹಾಡು ಹಿಟ್ ಆಗುತ್ತೋ ಇಲ್ವೋ ಎಂಬುದನ್ನು ಸುಲಭವಾಗಿ ಹೇಳಬಹುದು ಎನ್ನುತ್ತದೆ ಅಧ್ಯಯನ.

ಹಾಡು ಹೇಗಿದೆ ಅಂತಾ ಕೇಳ್ಬೇಕಾಗಿಲ್ಲ: ಹಾಡು ಹೇಗಿದೆ, ನಿಮಗೆ ಇಷ್ಟವಾಯ್ತಾ ಎಂದು ಪ್ರಶ್ನೆ ಮಾಡ್ತಾ, ಎಲ್ಲರ ಅಭಿಪ್ರಾಯ ಸಂಗ್ರಹಿಸುವ ಅವಶ್ಯಕತೆ ಇನ್ನು ಮುಂದೆ ಬರೋದಿಲ್ಲ. ನೀವು ಪ್ರಶ್ನೆ ಕೇಳಿ ಉತ್ತರ ಕಂಡುಕೊಳ್ಳುವ ಬದಲು ಯಂತ್ರ ಕಲಿಕೆ ಅಲ್ಗಾರಿದಮ್‌ ಉತ್ತಮ ವಿಧಾನವಾಗಿದೆ.  ನೀವು ಒಂದು ಹಾಡನ್ನು ಇಷ್ಟಪಟ್ಟು, ತಲ್ಲೀನರಾಗಿ ಕೇಳ್ತಿದ್ದೀರಿ ಅಂದ್ರೆ ಬೇರೆಯವರೂ ಹಾಗೆ ಕೇಳ್ಬೇಕು, ಅವರಿಗೆ ಇಷ್ಟವಾಗ್ಬೇಕು ಎಂದೇನಿಲ್ಲ. ಕೆಲವೊಮ್ಮೆ ಹಾಡಿನ ಬಗ್ಗೆ ನಮಗೆ ಗೊಂದಲವಿರುತ್ತದೆ. ಹಾಡು ನಮಗೆ ಇಷ್ಟವಾಯ್ತಾ ಇಲ್ವಾ ಎಂಬುದನ್ನು ಹೇಳೋದು ಕಷ್ಟವಾಗುತ್ತದೆ. ಬಾಯ್ಬಿಟ್ಟು ಉತ್ತರ ನೀಡ್ಬೇಕು ಅಂದಾಗ ಅನೇಕರು ಗೊಂದಲಕ್ಕೊಳಗಾಗ್ತಾರೆ. ಸರಿಯಾಗಿ ಉತ್ತರ ನೀಡಲು ಸಮರ್ಧರಾಗೋದಿಲ್ಲ. ಆದ್ರೆ ನಮ್ಮ ಉಪಪ್ರಜ್ಞೆ ಸ್ಥಿತಿ ಹಾಗಲ್ಲ. ಅದು ಸ್ಪಷ್ಟವಾಗಿರುತ್ತದೆ. ಅದನ್ನು ಯಂತ್ರ ಕಲಿಕೆ ಅಲ್ಗಾರಿದಮ್‌ ಅಳವಡಿಸಿ ನಾವು ತಿಳಿಯಬಹುದು. ಪ್ರೇಕ್ಷಕನಿಗೆ ಹಾಡು ಹೇಗಿತ್ತು ಎಂದು ಪ್ರಶ್ನೆ ಕೇಳುವ ಬದಲು ಈ ವಿಧಾನ ಅಳವಡಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಬ್ಬಬ್ಬಾ..ಜಸ್ಟ್ ನಾಯಿ ನೋಡಿಕೊಳ್ಳೋದಷ್ಟೇ ಕೆಲ್ಸ, ತಿಂಗಳಿಗೆ ಭರ್ತಿ 1 ಕೋಟಿ ರೂ.ಸಂಬಳ!

ಒಂದು ನಿಮಿಷದ ಡೇಟಾದಿಂದ ಇಷ್ಟೊಂದು ನಿಖರ ಸೂಚನೆ: ಅಲ್ಗಾರಿದಮ್‌ಗೆ ಹಾಡನ್ನು ಕೇಳಲು ಕೇವಲ ಒಂದು ನಿಮಿಷದ ಡೇಟಾವನ್ನು ನೀಡಲಾಗಿದೆ. ಇಷ್ಟಕ ಕಡಿಮೆ ಸಮಯದಲ್ಲೂ ಅದು ಶೇಕಡಾ 82ರಷ್ಟು ಸರಿಯಾದ ಮುನ್ಸೂಚನೆ ನೀಡಿದೆ. ಸದ್ಯ ಈಗಿರುವ ಎಲ್ಲ ವಿಧಾನಗಳೂ ಶೇಕಡಾ 50ರಷ್ಟು ಮಾತ್ರ ನಿಖರತೆ ನೀಡುತ್ತವೆ. ಅಂದ್ರೆ ಹಾಡು ಹಿಟ್ ಆಗುತ್ತೋ ಇಲ್ವೋ ಎನ್ನುವ ಬಗ್ಗೆ ಶೇಕಡಾ 50ರಷ್ಟು ಮಾತ್ರ ನಿಖರ ಮಾಹಿತಿ ನೀಡ್ತಾಯಿತ್ತು. ಅಲ್ಗಾರಿದಮ್ ಶೇಕಡಾ 82ರಷ್ಟು ನಿಖರತೆ ನೀಡುತ್ತದೆ. ಮುಂದಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿ ಸೇರಿದಂತೆ ಎಲ್ಲ ಮನರಂಜನೆ ಕ್ಷೇತ್ರದಲ್ಲಿ ಹಾಡುಗಳು ಎಷ್ಟರ ಮಟ್ಟಿಗೆ ಹಿಟ್ ಆಗುತ್ವೆ ಎಂಬುದನ್ನು ಪತ್ತೆ ಹಚ್ಚಲು ಅಲ್ಗಾರಿದಮ್ ಬಳಸುವ ಸಾಧ್ಯತೆ ಹೆಚ್ಚಿದೆ.  

Follow Us:
Download App:
  • android
  • ios