ಪ್ರಜ್ವಲ್ ಓಕೆ, ರೇವಣ್ಣರನ್ನ ಸಿಲುಕಿಸಿರೋದು ಯಾಕೆ? ಮೌನ ಮುರಿದ ದೇವೇಗೌಡ!
ಪ್ರಜ್ವಲ್ ಮೇಲೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರು ಇಲ್ಲ, ಆದರೆ ರೇವಣ್ಣ ಏನು ಮಾಡಿದ್ರು? ಅವರ ಬಗ್ಗೆ ಸರ್ಕಾರ ಷಡ್ಯಂತ್ರ ಮಾಡಿರೋದು ರಾಜ್ಯದ ಜನರಿಗೆ ಗೊತ್ತಿದೆ. ಇದರಲ್ಲಿ ರೇವಣ್ಣರನ್ನ ಯಾವ ರೀತಿ ಸಿಲುಕಿಸಿದ್ದಾರೆ. ಕೇಸ್ ಹೇಗೆ ದಾಖಲು ಮಾಡಿದ್ದಾರೆ ಎಂಬುದು ತಿಳಿದಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ತಿಳಿಸಿದರು.
ಬೆಂಗಳೂರು (ಮೇ.18): ಪ್ರಜ್ವಲ್ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ಅವರ ಬಗ್ಗೆ ಒಂದು ಘಟನೆ ನಡೆಯುತ್ತಿದೆ. ರೇವಣ್ಣ ವಿಚಾರದಲ್ಲಿ ಕೋರ್ಟ್‌ನಲ್ಲಿ ಏನು ನಡೆಯುತ್ತಿದೆ. ಅದರ ಬಗ್ಗೆ ನಾನು ಈಗ ಕಾಮೆಂಟ್ ಮಾಡೊಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.
ಇಂದು 92ನೇ ಹುಟ್ಟು ಹಬ್ಬ ಹಿನ್ನೆಲೆ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಹೊರಗಡೆ ಹೋಗಿದ್ದಾರೆ. ಆದರೆ ಈ ಘಟನೆ ಬಗ್ಗೆ ಕುಮಾರಸ್ವಾಮಿಯವರು ಇಡೀ ನಮ್ಮ ಕುಟುಂಬದ ಪರವಾಗಿ ಉತ್ತರ ಕೊಟ್ಟಿದ್ದಾರೆ. ಕಾನೂನು ಏನಿದೆಯೋ ಆ ಕಾನೂನಿನ ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತಾ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅನೇಕ ಜನ ಇದ್ದಾರೆ. ನಾನು ಅವರ ಹೆಸರುಗಳನ್ನು ಈಗ ಹೇಳಲು ಹೋಗೊಲ್ಲ. ಈ ಪ್ರಕರಣದಲ್ಲಿ ಯಾರಾರೂ ಇದ್ದಾರೆ ಅವರೆಲ್ಲರ ಮೇಲೂ ಕ್ರಮ ಆಗಬೇಕು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರವನ್ನ ಈಗಾಗಲೇ ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದರು.
ಪ್ರಜ್ವಲ್ ಮೇಲೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರು ಇಲ್ಲ, ಆದರೆ ರೇವಣ್ಣ ಏನು ಮಾಡಿದ್ರು? ಅವರ ಬಗ್ಗೆ ಸರ್ಕಾರ ಷಡ್ಯಂತ್ರ ಮಾಡಿರೋದು ರಾಜ್ಯದ ಜನರಿಗೆ ಗೊತ್ತಿದೆ. ಇದರಲ್ಲಿ ರೇವಣ್ಣರನ್ನ ಯಾವ ರೀತಿ ಸಿಲುಕಿಸಿದ್ದಾರೆ. ಕೇಸ್ ಹೇಗೆ ದಾಖಲು ಮಾಡಿದ್ದಾರೆ ಎಂಬುದು ತಿಳಿದಿದೆ. ಒಂದು ಕೇಸ್‌ಗೆ ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನೀಗ ವಿಶ್ಲೇಷಣೆ ಮಾಡೊಲ್ಲ. ಕುಮಾರಸ್ವಾಮಿ ಈ ಘಟನೆಯಲ್ಲಿ ಯಾರನ್ನೂ ಸ್ಪೇರ್ ಮಾಡಬೇಕಿಲ್ಲ ಎಂದು ತಿಳಿಸಿದ್ದಾರೆ.