ಸಹಾಯ ಮಾಡಲು ಶ್ರಿಮಂತಿಕೆ ಬೇಡ ಎನ್ನಲು ಇವರೇ ಸಾಕ್ಷಿ..

First Published 27, Mar 2018, 5:41 PM IST
Hiremath is the one who help pregnancy woman to go hospital
Highlights

ತಾನು ಶ್ರೀಮಂತನಲ್ಲದಿದ್ದರೂ ಬೇರೆಯವರಿಗೆ ಸಹಾಯ ಮಾಡಬೇಕು ಅನ್ನುವ ಆಸೆ ತುಂಬಾ ಕಡಿಮೆ ಜನರಿಗೆ ಇರುತ್ತದೆ. ಅಂಥಾ ಆಸೆ ಇದ್ದು, ಬೇರೆಯವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಅಪರೂಪದ ವ್ಯಕ್ತಿಗಳಲ್ಲಿ ಬೆಳಗಾವಿಯ ಸಿವಾನಂದ ಹಿರೇಮಠ ಒಬ್ಬರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಆಟೋ ಚಾಲಕ ಮಲ್ಲಯ್ಯ ಹಿರೇಮಠ ಒಬ್ಬರು. 

ತಾನು ಶ್ರೀಮಂತನಲ್ಲದಿದ್ದರೂ ಬೇರೆಯವರಿಗೆ ಸಹಾಯ ಮಾಡಬೇಕು ಅನ್ನುವ ಆಸೆ ತುಂಬಾ ಕಡಿಮೆ ಜನರಿಗೆ ಇರುತ್ತದೆ. ಅಂಥಾ ಆಸೆ ಇದ್ದು, ಬೇರೆಯವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಅಪರೂಪದ ವ್ಯಕ್ತಿಗಳಲ್ಲಿ ಬೆಳಗಾವಿಯ ಸಿವಾನಂದ ಹಿರೇಮಠ ಒಬ್ಬರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಆಟೋ ಚಾಲಕ ಮಲ್ಲಯ್ಯ ಹಿರೇಮಠ ಒಬ್ಬರು. 

ಸುತ್ತಮುತ್ತಲಿನ ಮಂದಿಗೆ ಶಿವಾ ಆಟೋದವರು ಎಂದೇ ಪರಿಚಿತರಾದ ಅವರು ಗರ್ಭಿಣಿಯರಿಗೆ ತಮ್ಮ ಆಟೋದಲ್ಲಿ ಉಚಿತ ಸೇವೆಯನ್ನು ನೀಡುತ್ತಾರೆ. ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ಪಡೆದಿರುವ ಅವರು ಯಮಕನಮರಡಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯರು ಆಸ್ಪತ್ರೆಗೆ ಹೋಗಲು ಬರಲು ಉಚಿತ ಆಟೋ ಸೇವೆಯನ್ನು ನೀಡುತ್ತಾರೆ. ಅದಕ್ಕೊಂದು ಕಾರಣವಿದೆ ಎಂಟು ಒಂಭತ್ತು ವರ್ಷಗಳ ಹಿಂದೆ ಮಲ್ಲಯ್ಯ ಅವರ ಮಡದಿ ಗರ್ಭಿಣಿಯಾಗಿದ್ದಾಗ ಅವರಿಗೆ ಆಟೋ ಸಿಗದೆ ಸಮಸ್ಯೆ ಉಂಟಾಗಿತ್ತು. ಆಗೆಲ್ಲಾ ಆಸ್ಪತ್ರೆಗೆ ನಡೆದುಕೊಂಡೇ ಹೋಗುವ ಪರಿಪಾಠ ಇತ್ತು. ಹೀಗಾಗಿ ಮಲ್ಲಯ್ಯ ಅವರು ತಮ್ಮ ಪತ್ನಿಗಾದ ಸಮಸ್ಯೆ ಬೇರೆ ಯಾರಿಗೂ ಆಗಬಾರದು ಅಂತಂದುಕೊಂಡಿದ್ದರು. ಆದರೆ ಮಲ್ಲಯ್ಯ ಆಟೋ ಓಡಿಸಿಕೊಂಡು ಜೀವನ ಸಾಗಿಸುವ ಒಬ್ಬ ವ್ಯಕ್ತಿ. ತನ್ನ ಕೈಯಲ್ಲಿ ಸಹಾಯ ಮಾಡಲು ದುಡ್ಡಿಲ್ಲ, ಆದರೆ ತನ್ನ ಆಟೋದಲ್ಲಿ ಉಚಿತ ಸೇವೆ ನೀಡಬಹುದಲ್ಲ ಎಂದು ಆಲೋಚಿಸಿದ ಮಲ್ಲಯ್ಯ ಅವರು ಅವತ್ತಿನಿಂದ ಯಾರೇ ಗರ್ಭಿಣಿಯರು ತಮ್ಮ ಆಟೋ ಹತ್ತಿದರೂ ಉಚಿತ ಸೇವೆ ನೀಡುತ್ತಾರೆ.

ನಾಲ್ಕು ಜನಕ್ಕೆ ಉಪಕಾರ ಆಗಬೇಕು ಅನ್ನುವುದು ನನ್ನಾಸೆ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎನ್ನುವ ಮಲ್ಲಯ್ಯ ಹಿರೇಮಠ ನನ್ನ ಈ ಸೇವೆಯನ್ನು ಮುಂದುವರಿಸುವುದಾಗಿ ಹೇಳುತ್ತಾರೆ. ಯಮಕನಮರಡಿ ಹತ್ತರಗಿ, ದಾದಬಾನಹಟ್ಟಿ, ಆರ್.ಸಿ. ಯಮಕನಮರಡಿ ಮೊದಲಾದ ಗ್ರಾಮಗಳಲ್ಲಿ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದಾರೆ. ಯಾರು ಯಾವಾಗ ದೂರವಾಣಿ ಕರೆ ಮಾಡಿದರೂ ಅದಕ್ಕೆ ತಕ್ಷಣ ಸ್ಪಂದಿಸಿ ಆಟೋ ಸೇವೆಗೆ ಸಿದ್ಧರಾಗುತ್ತಾರೆ. ಇಂಥಾ ವ್ಯಕ್ತಿಗಳು ನಮ್ಮ ಸುತ್ತಮುತ್ತ ತುಂಬಾ ಅಪರೂಪ. ಅವರಿಗೊಂದು ಥ್ಯಾಂಕ್ಸ್ ಹೇಳಿ. ಪ್ರೋತ್ಸಾಹಿಸಿ. ದೂ-9880506796  
 

loader